ಹಲವು ಅಂಶಗಳ ಹಿನ್ನೆಲೆಯಲ್ಲಿ ಭಾರತ ಸುಸ್ಥಿರ ಪ್ರಗತಿಯ ಪಥದಲ್ಲಿದ್ದು, ಆದರೆ ನ್ಯಾಯಾಂಗ, ಸುಂಕ, ಕಾರ್ಮಿಕ ನಿಯಂತ್ರಣ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಸ್ಥಿರವಾದ ನಿಯಂತ್ರಣ ವ್ಯವಸ್ಥೆಯ ಜತೆಗೆ ರಾಚನಿಕ ಸುಧಾರಣೆ ಅಗತ್ಯ ಎಂದು ಐಎಂಎಫ್ ಪ್ರತಿಪಾದಿಸಿದೆ.
ವಾರ್ಷಿಕ ಸಲಹೆಯನ್ನು ಆಧರಿಸಿದ ಇತ್ತೀಚಿನ ಪರಾಮರ್ಶೆಯಲ್ಲಿ ಜಿಎಸ್ಟಿ ಸರಳೀಕರಣಕ್ಕೂ ಸಲಹೆ ಮಾಡಲಾಗಿದೆ. ಇಂಧನದ ಮೇಲಿನ ಅಬ್ಕಾರಿ ಸುಂಕವನ್ನು ಕಡಿತಗೊಳಿಸುವುದು ಮತ್ತು ಆದಾಯ ತೆರಿಗೆ ನೆಲೆಯನ್ನು ವಿಸ್ತøತಗೊಳಿಸುವುದು ಅಗತ್ಯ ಎಂದು ಸೂಚಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ಜಿಎಸ್ಟಿಯಲ್ಲಿ ಶೇಕಡ 14ರ ಒಂದೇ ಸ್ತರವನ್ನು ಹೊಂದುವಂತೆ ಸಲಹೆ ಮಾಡಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ತಮಿಳುನಾಡಿನಲ್ಲಿ ಸದ್ದು ಮಾಡುತ್ತಿರುವ ವಿಜಯ್ ಮತ್ತು #GetOut ಫಲಕಗಳು
ಭಾರತದ ಹಣಕಾಸು ವಲದಯ ಆರೋಗ್ಯದಿಂದಾಗಿ ಕಾರ್ಪೊರೇಟ್ ಬ್ಯಾಲೆನ್ಸ್ಶೀಟ್ಗಳ ಬಲವರ್ಧನೆಯಾಗಿದೆ ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಪ್ರಬಲ ಅಡಿಪಾಯ ಭಾರತದ ಸುಸ್ಥಿರ ಮಧ್ಯಮಾವಧಿ ಪ್ರಗತಿಯ ಹಾಗೂ ಸಮಾಜ ಕಲ್ಯಾಣ ಪ್ರಯೋಜನಗಳ ಅವಕಾಶಗಳನ್ನು ಒತ್ತಿಹೇಳಿದೆ. ಆರ್ಥಿಕ ದೃಷ್ಟಿಕೋನದ ಅಪಾಯ ಸಾಧ್ಯತೆಗಳು ಕೆಳಮುಖವಾಗಿವೆ ಎಂದು ಐಎಂಎಫ್ ವಿಶ್ಲೇಷಿಸಿದೆ.
ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವಂತೆ ಕರೆ ನೀಡಿದ್ದು, ದೇಶದಲ್ಲಿ ಹಲವು ಸುಧಾರಣಾ ಕ್ರಮಗಳು ಅಗತ್ಯ ಎಂದು ಪ್ರತಿಪಾದಿಸಿದೆ. ಇತರ ಆದ್ಯತೆಗಳಲ್ಲಿ ಕೃಷಿ, ಭೂಮಿ, ಆಡಳಿತ ಮತ್ತು ನ್ಯಾಯಾಂಗ ಸುಧಾರಣೆಗಳು ಸೇರಿವೆ. ಶಿಕ್ಷಣ, ಕೌಶಲ್ಯ, ಸಾರ್ವಜನಿಕ ಆರೋಗ್ಯ, ಸಾಮಾಜಿಕ ಸುರಕ್ಷಾ ಜಾಲವನ್ನು ಬಲಪಡಿಸುವುದು, ಸಾಲ ಮಾರುಕಟ್ಟೆಯಲ್ಲಿ ಸಾರ್ವಜನಿಕ ವಲಯದ ಹೆಜ್ಜೆಗುರುತು ಕಡಿಮೆ ಮಾಡುವುದು ಮತ್ತು ಹವಾಮಾನ ನೀತಿಗಳ ಅನುಷ್ಠಾನಕ್ಕೆ ಸೂಚಿಸಲಾಗಿದೆ.