- ಘಟನಾ ಸ್ಥಳ ಪರಿಶೀಲನೆ ನಡೆಸಿದ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ
- ಒರಳು ಕಲ್ಲು ಎತ್ತಿ ಹಾಕಿ ತಂದೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಜಗಳದ ವೇಳೆ ತಂದೆಯ ಮೇಲೆ ಒರಳು ಕಲ್ಲು ಎತ್ತಿ ಹಾಕಿ ಸ್ವಂತ ಮಗನೇ ಕೊಲೆ ಮಾಡಿದ್ದಾನೆ.
ಜೂನ್ 15 ರಂದು ರಾತ್ರಿ ಮಾಗಡಿ ರಸ್ತೆಯ ಗೋಪಾಲಪುರದ 2ನೇ ಕ್ರಾಸ್ನಲ್ಲಿ ಈ ಘಟನೆ ನಡೆದಿದೆ. ಗಂಗರಾಜು ಆಲಿಯಾಸ್ ರಾಜು(55) ಕೊಲೆಯಾದ ವ್ಯಕ್ತಿ. ಪುತ್ರ ಚೇತನ್ ಕೊಲೆ ಆರೋಪಿ.
ಜೂನ್ 15ರ ರಾತ್ರಿ 2:30 ಗಂಟೆಗೆ ತಂದೆ-ಮಗನ ಮಧ್ಯೆ ಜಗಳ ಆರಂಭವಾಗಿದೆ. ಇಬ್ಬರ ಜಗಳ ಅತಿರೇಕಕ್ಕೆ ಹೋಗಿ ತಂದೆ ಹೊರಗಡೆ ಮಲಗಿದ ವೇಳೆ ಮಗನು ಒರಳು ಕಲ್ಲನ್ನು ತಂದೆಯ ಮೇಲೆ ಎತ್ತಿ ಹಾಕಿದ್ದಾನೆ.
ವಿಷಯ ತಿಳಿದು ಘಟನಾ ಸ್ಥಳಕ್ಕೆ ಮಾಗಡಿರಸ್ತೆ ಪೊಲೀಸರು ಭೇಟಿ ನೀಡಿದ್ದಾರೆ. ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸುದ್ದಿ ಓದಿದ್ದೀರಾ? ಜೂನ್ 30 ರವರೆಗೆ ವಿದ್ಯಾರ್ಥಿ ಬಸ್ ಪಾಸ್ ಅವಧಿ ವಿಸ್ತರಣೆ : ಕೆಎಸ್ಆರ್ಟಿಸಿ
ಈ ವೇಳೆ ಮಾತನಾಡಿದ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ, “ತಂದೆ-ಮಗನ ಜಗಳ ಅತಿರೇಕಕ್ಕೆ ಹೋಗಿ ಈ ಘಟನೆ ಸಂಭವಿಸಿದೆ. ಮಗ ಚೇತನ್ ತಂದೆಯ ಮೇಲೆ ಕಲ್ಲನ್ನು ಎತ್ತಿ ಹಾಕಿದ್ದಾನೆ. ಬಳಿಕ ತಾನೇ ತಂದೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದ್ದಾನೆ. ಇದಾದ ನಂತರ ತಂದೆ ರಾಜು ಸಾವನ್ನಪ್ಪಿದ್ದಾರೆ” ಎಂದರು.