ಶ್ವೇತ ಭವನದಲ್ಲಿ ನಡೆದ ಅಮೆರಿಕದ ಮೊದಲ ಸಂಪುಟ ಸಭೆಯಲ್ಲಿ ಉದ್ಯಮಿ ಹಾಗೂ ವಿವಾದಾತ್ಮಕ ಇಲಾಖೆಯಾದ ಸರ್ಕಾರದ ದಕ್ಷತೆ ಇಲಾಖೆಯ(ಡಿಒಜಿಇ)ಯ ಮುಖ್ಯಸ್ಥರಾಗಿ ನೇಮಕಗೊಂಡಿರುವ ಎಲಾನ್ ಮಸ್ಕ್ ಸರ್ಕಾರವು ಕೆಲವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಅಮೆರಿಕ ದಿವಾಳಿಯಾಗಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಎಚ್ಚರಿಕೆ ನೀಡಿದ್ದಾರೆ.
ಕಳೆದ ಬುಧವಾರ ಡೊನಾಲ್ಡ್ ಟ್ರಂಪ್ ಅವರು ಅನಗತ್ಯ ಒಪ್ಪಂದಗಳನ್ನು ಪರಿಶೀಲಿಸಲು ಹಾಗೂ ವಜಾಗೊಳಿಸಲು ಏಜನ್ಸಿಗಳು ಡಿಒಜಿಇನೊಂದಿಗೆ ಕೆಲಸ ಮಾಡುವಂತೆ ನಿರ್ದೇಶಿಸಿದರು ಹಾಗೂ ಸರ್ಕಾರದ ರಿಯಲ್ ಎಸ್ಟೇಟ್ ಯೋಜನೆಯನ್ನು ನಿರ್ವಹಿಸುವ ಸಾಮಾನ್ಯ ಸೇವೆಗಳ ಆಡಳಿತಕ್ಕೆ ಯಾವುದೇ ಅನಗತ್ಯ ಆಸ್ತಿಯನ್ನು ವಿಲೇವಾರಿ ಮಾಡುವ ಯೋಜನೆಯನ್ನು ರಚಿಸಲು ಸೂಚನೆ ನೀಡಿದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅಮೆರಿಕ ಸರಕಾರದ ದಕ್ಷತೆಯ ಇಲಾಖೆ ಮುಖ್ಯಸ್ಥರಾಗಿರುವ ಉದ್ಯಮಿ ಎಲಾನ್ ಮಸ್ಕ್ ಅವರು ಆಡಳಿತ ವೆಚ್ಚವನ್ನು ಕಡಿತಗೊಳಿಸಲು ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದ ನಂತರ ಟ್ರಂಪ್ ಈ ನಿರ್ಧಾರ ಕೈಗೊಂಡಿದ್ದಾರೆ.
ಕ್ಯಾಬಿನೆಟ್ ಸಭೆಯಲ್ಲಿ ಎಲಾನ್ ಮಸ್ಕ್ ಅವರು ಸರ್ಕಾರಿ ಉದ್ಯೋಗಗಳನ್ನು ಕಡಿತಗೊಳಿಸುವ ನಿರ್ಧಾರ ಹಾಗೂ ಪ್ರಯತ್ನಗಳನ್ನು ಸಮರ್ಥಿಸಿಕೊಂಡ ಟ್ರಂಪ್, ಎಲಾನ್ ಮಸ್ಕ್ ಬಗ್ಗೆ ಯಾರಾದರೂ ಅತೃಪ್ತರಾಗಿದ್ದಾರೆಯೆ? ಒಂದು ವೇಳೆ ಅತೃಪ್ತರಾಗಿದ್ದರೆ ನಾವು ಅವರನ್ನು ಹೊರ ಹಾಕುತ್ತೇವೆ. ಕೆಲವರು ಒಂದಿಷ್ಟು ಭಿನ್ನಾಭಿಪ್ರಾಯ ಹೊಂದಿರಬಹುದು ಆದರೆ ಎಲ್ಲ ಕ್ಯಾಬಿನೆಟ್ ಸದಸ್ಯರು ಕೇವಲ ಖುಷಿ ಮಾತ್ರವಲ್ಲ ಅಪಾರ ಸಂತಸಗೊಂಡಿದ್ದಾರೆ ಎಂದು ತಿಳಿಸಿದರು.
ಟ್ರಂಪ್ ಆದೇಶಕ್ಕೆ ತಡೆ
ಈ ನಡುವೆ ಇತ್ತೀಚೆಗೆ ನೇಮಕಗೊಂಡ ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾಗೊಳಿಸುವಂತೆ ಫೆಡರಲ್ ಏಜೆನ್ಸಿಗಳಿಗೆ ನಿರ್ದೇಶಿಸಿದ ಡೊನಾಲ್ಡ್ ಟ್ರಂಪ್ ಸರಕಾರದ ಆದೇಶಕ್ಕೆ ಯುಎಸ್ ಫೆಡರಲ್ ನ್ಯಾಯಾಧೀಶರು ತಾತ್ಕಾಲಿಕವಾಗಿ ನಿರ್ಬಂಧಿಸಿ ಆದೇಶವನ್ನು ಹೊರಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ತಮಿಳುನಾಡಿನಲ್ಲಿ ಸದ್ದು ಮಾಡುತ್ತಿರುವ ವಿಜಯ್ ಮತ್ತು #GetOut ಫಲಕಗಳು
ಸಾಮಾನ್ಯವಾಗಿ ಒಂದು ವರ್ಷಕ್ಕಿಂತ ಕಡಿಮೆ ಅನುಭವ ಹೊಂದಿರುವ ಪ್ರೊಬೇಷನರಿ ಉದ್ಯೋಗಿಗಳು ಸೇರಿದಂತೆ ಯಾವುದೇ ಉದ್ಯೋಗಿಗಳನ್ನು ವಜಾಗೊಳಿಸುವಂತೆ ಸರಕಾರಿ ಏಜೆನ್ಸಿಗಳಿಗೆ ಆದೇಶ ನೀಡುವ ಅಧಿಕಾರ ʼಅಮೆರಿಕದ ಸಿಬ್ಬಂದಿ ನಿರ್ವಹಣೆʼ ಇಲಾಖೆಗೆ ಇಲ್ಲ ಎಂದು ಸ್ಯಾನ್ ಫ್ರಾನ್ಸಿಸ್ಕೋ ಜಿಲ್ಲಾ ನ್ಯಾಯಾಧೀಶ ವಿಲಿಯಂ ಅಲ್ಸುಪ್ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅಮೆರಿಕ ಸರಕಾರದ ದಕ್ಷತೆಯ ಇಲಾಖೆ ಮುಖ್ಯಸ್ಥರಾಗಿರುವ ಉದ್ಯಮಿ ಎಲಾನ್ ಮಸ್ಕ್ ಅವರು ಆಡಳಿತ ವೆಚ್ಚವನ್ನು ಕಡಿತಗೊಳಿಸಲು ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದ ಬೆನ್ನಲ್ಲೇ ಸ್ಯಾನ್ ಫ್ರಾನ್ಸಿಸ್ಕೋದ ನ್ಯಾಯಾಲಯ ಈ ಆದೇಶವನ್ನು ಹೊರಡಿಸಿದೆ.
ತರಬೇತಿ ನಿರತ ಸಿಬ್ಬಂದಿಗಳು ನಮ್ಮ ಸರಕಾರದ ಜೀವಾಳ, ಸಿಬ್ಬಂದಿ ನಿರ್ವಹಣೆ ಇಲಾಖೆಯ ಅಧಿಕಾರಿಗಳಿಗೆ ಜನವರಿ 20ರಂದು ನೀಡಲಾದ ಸೂಚನೆ ಮತ್ತು ಫೆಬ್ರವರಿ 14ರಿಂದ ಉದ್ಯೋಗಿಗಳಿಗೆ ಇದಕ್ಕೆ ಸಂಬಂಧಿಸಿ ಕಳುಹಿಸಿರುವ ಇಮೇಲ್ ಅನ್ನು ಹಿಂತೆಗೆದುಕೊಳ್ಳುವಂತೆ ಆದೇಶಿಸಿರುವುದಾಗಿ ನ್ಯಾಯಾಧೀಶ ಅಲ್ಸುಪ್ ಅವರು ಹೇಳಿದ್ದಾರೆ.
