ಆಸ್ಕರ್‌ ಪ್ರಶಸ್ತಿ 2025: ನಾಮ ನಿರ್ದೇಶನಗೊಂಡಿರುವ ಚಿತ್ರಗಳು, ನಟರಿಗೆ ವಿವಾದಗಳ ಕಾರ್ಮೋಡ

Date:

Advertisements

ಮಾರ್ಚ್‌ ತಿಂಗಳಲ್ಲಿ 2025ನೇ ಸಾಲಿನ ಸಿನಿಮಾ ಕ್ಷೇತ್ರದ ಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿ ಪ್ರಕಟ ಸಮಾರಂಭ ನಡೆಯಲಿದೆ. ಆದರೆ ಈ ಬಾರಿ ಪ್ರಶಸ್ತಿ ಸುತ್ತಿಗೆ ನಾಮ ನಿರ್ದೇಶನಗೊಂಡ ಕೆಲವು ಸಿನಿಮಾಗಳು ಹಾಗೂ ನಟರುಗಳು ವಿವಾದಕ್ಕೀಡಾಗಿದ್ದಾರೆ.

ಅತ್ಯುತ್ತಮ ನಟಿ ಪ್ರಸಸ್ತಿಗೆ ಈ ಬಾರಿ ಕರ್ಲಾ ಸೊಫಿಯಾ ಗಾಸ್ಕೋನ್‌ ಎಂಬ ಲಿಂಗತ್ವ ಅಲ್ಪಸಂಖ್ಯಾತ ನಟಿ ನಾಮ ನಿರ್ದೇಶನಗೊಂಡಿದ್ದಾರೆ. ಇದೇ ಪ್ರಪ್ರಥಮ ಬಾರಿಗೆ ಲಿಂಗತ್ವ ಅಲ್ಪಸಂಖ್ಯಾತ ನಟಿಯರೊಬ್ಬರು ಆಸ್ಕರ್‌ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದಿದ್ದಾರೆ. ಎಮಿಲಾ ಪರೇಜ್‌ ಎಂಬ ಚಿತ್ರದಲ್ಲಿ ಲಿಂಗ ಪರಿವರ್ತನೆಗೆ ಒಳಗಾಗುವ ಡ್ರಗ್‌ ಲಾರ್ಡ್‌ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

ಆದರೆ ಜನಾಂಗೀಯ ನಿಂದನೆಯ ಬಗ್ಗೆ ಈ ಹಿಂದೆ ಕರ್ಲಾ ಸೊಫಿಯಾ ಅವರು ಪೋಸ್ಟ್‌ ಮಾಡಿರುವ ಟ್ವೀಟ್‌ಗಳು ವಿವಾದ ಉಂಟುಮಾಡಿವೆ. ಈ ಹಿಂದೆ ಅವರು ಬಿಳಿಯ ಪೊಲೀಸರಿಂದ ಹತ್ಯೆಗೀಡಾದ ಜಾರ್ಜ್‌ ಫ್ಲಾಯ್ಡ್‌ ಹಾಗೂ ಅಡಾಲ್ಫ್‌ ಹಿಟ್ಲರ್‌ ಬಗ್ಗೆ ಜನಾಂಗೀಯ ನಿಂದನೆಯಿಂದ ಕೂಡಿದ ಟ್ವೀಟ್‌ಗಳನ್ನು ಮಾಡಿರುವುದು ಮುನ್ನಲೆಗೆ ಬಂದಿವೆ. ಹಳೆಯ ಪೋಸ್ಟ್‌ಗಳಿಗೆ ಕರ್ಲಾ ಸೊಫಿಯಾ ಕ್ಷಮೆಯಾಚಿಸಿದರೂ ಟೀಕೆಗಳು ಹರಿದುಬರುವುದು ನಿಂತಿಲ್ಲ. ಅಲ್ಲದೆ ತಮ್ಮ ಮೇಲೆ ಪ್ರತಿಸ್ಪರ್ಧಿಯಾಗಿ ಆಸ್ಕರ್‌ ಸುತ್ತಿಗೆ ಪ್ರವೇಶ ಪಡೆದಿರುವ ಫರ್ನಾಡಾ ಟೋರೆಸ್‌ ಅವರ ಬೆಂಬಲಿಗರು ವೈಯಕ್ತಿಕವಾಗಿ ತಮ್ಮ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Advertisements

ಅತ್ಯುತ್ತಮ ಚಿತ್ರದ ಮೇಲೂ ವಿವಾದ

‘ ದಿ ಬ್ರೂಟಲಿಸ್ಟ್‌’ ಎಂಬ ಚಿತ್ರ ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಪ್ರಮುಖ ಸ್ಪರ್ಧಿಯಾಗಿದ್ದು, ಪಾತ್ರಧಾರಿಗಳನ್ನು ‘ಎಐ’ ಮೂಲಕ ತಿರುಚಲಾಗಿದೆ ಎಂಬ ಆರೋಪ ವಿವಾದದ ಕೇಂದ್ರಬಿಂದುವಾಗಿದೆ. ಆದರೆ ಚಿತ್ರದ ನಿರ್ದೇಶಕರಾದ ಬಾರ್ಡೆ ಕೋರ್ಬೆಟ್‌ ಈ ಅರೋಪವನ್ನು ನಿರಾಕರಿಸಿದ್ದು, ಯಾವುದೇ ಪಾತ್ರವನ್ನು ಬದಲಾಯಿಸಲಾಗಿಲ್ಲ ನೈಜವಾಗಿ ಚಿತ್ರಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಫಿಲ್ಮ್‌ ಫೆಸ್ಟಿವಲ್‌ | ಚಾಮಯ್ಯ ಮೇಷ್ಟ್ರೇ… ನಿಮ್ಮನ್ನು ಮರೆಯುವುದುಂಟೆ!

ಈ ಚಿತ್ರದ ಪ್ರಮುಖ ನಾಯಕ ಆಂಡ್ರಿನ್ ಬ್ರೊಡೆ ಅವರು 2003 ಸಾಟರ್ಡೇ ಲೈವ್‌ ಎಂಬ ರಿಯಾಲಿಟಿ ಕಾರ್ಯಕ್ರಮದಲ್ಲಿ ಜನಾಂಗೀಯ ನಿಂದನೆಯ ಉಡುಪು ಧರಿಸಿದ್ದ ಆರೋಪ ಕೇಳಿಬಂದಿತ್ತು. ನಾಮ ನಿರ್ದೇಶನಗೊಂಡಿರುವ ಮತ್ತೊಂದು ಚಿತ್ರ ‘ ಐ ಆಮ್‌ ಸ್ಟಿಲ್‌ ಇಯರ್’ ನ ನಾಯಕ ಬ್ರೆಜಿಲ್‌ ನಟ ಫರ್ನಾಂಡೊ ಟೋರಸ್‌ ಕೂಡ ಹಿಂದೊಮ್ಮೆ ಜನಾಂಗೀಯ ನಿಂದನೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸುದ್ದಿಯಾಗಿದ್ದರು.

ಕನ್‌ಕ್ಲೇವ್‌ ಎಂಬ ಬ್ರಿಟಿಷ್ ಚಿತ್ರ ಕೂಡ ಆಸ್ಕರ್‌ಗೆ ನಾಮನಿರ್ದೇಶನಗೊಂಡಿದ್ದು, ಈ ಚಿತ್ರದಲ್ಲಿ ಧಾರ್ಮಿಕ ಸಂಪ್ರದಾಯಗಳನ್ನು ಅಣಕಿಸಲಾಗಿದೆ ಎಂದು ಕ್ಯಾಥೋಲಿಕ್‌ ಗುಂಪುಗಳು ಪ್ರತಿಭಟನೆ ನಡೆಸಿವೆ. ಸಿನಿಮಾ ಬಗ್ಗೆ ವಿಮರ್ಷಕರಿಂದ ಒಳ್ಳೆಯ ಅಭಿಪ್ರಾಯ ಮೂಡಿಬಂದರೂ ವಿವಾದ ಮಾತ್ರ ಸುತ್ತಿಕೊಂಡಿವೆ. ಇವೆಲ್ಲ ವಿವಾದಗಳನ್ನು ಆಸ್ಕರ್‌ ಸಮಿತಿ ಯಾವ ರೀತಿ ಪರಿಣಿಗಣಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಕಳೆದ ಬಾರಿಯ ಆಸ್ಕರ್‌ ಪ್ರಶಸ್ತಿಯ ಸಂದರ್ಭದಲ್ಲಿ ಆಸ್ಕರ್‌ ಪ್ರಶಸ್ತಿ ಪಡೆದಿದ್ದ ವಿಲ್‌ ಸ್ಮಿತ್‌ ಎಂಬ ನಟ ವೇದಿಕೆಯಲ್ಲಿಯೇ ಮತ್ತೊಬ್ಬ ನಟನಿಗೆ ಕೆನ್ನೆಗೆ ಬಾರಿಸಿದ್ದು ಭಾರಿ ವಿವಾದವಾಗಿತ್ತು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟ ,ನಿರ್ದೇಶಕ ಮುರಳಿ ಮೋಹನ್ ನಿಧನ; ಓಂ, ಶ್‌ ಸೇರಿ ಹಲವು ಚಿತ್ರಗಳಿಗೆ ಸಂಭಾಷಣೆ

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಮುರಳಿ ಮೋಹನ್ ಅವರು ನಿಧನರಾಗಿದ್ದಾರೆ. ಹಲವು...

ನಾವು ಬಾಯಿ ಮುಚ್ಚಿಕೊಂಡಿದ್ದರೆ ಮತದಾನದ ಹಕ್ಕು ಕಸಿದುಕೊಳ್ಳುವ ದಿನ ದೂರವಿಲ್ಲ: ನಟ ಕಿಶೋರ್ ಕುಮಾರ್

ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನದ ಬಗ್ಗೆ ಲೋಕಸಭೆಯ ವಿಪಕ್ಷ...

Download Eedina App Android / iOS

X