ಕಾನೂನುಬಾಹಿರ ನಡೆ: ‘ಮುಸ್ಲಿಂ ವ್ಯಾಪಾರಿ’ಗಳ ಬಹಿಷ್ಕಾರಕ್ಕೆ ಗ್ರಾಮ ಪಂಚಾಯತಿ ತೀರ್ಮಾನ

Date:

Advertisements

ಗ್ರಾಮದ ವ್ಯಾಪ್ತಿಯೊಳಗೆ ಮುಸ್ಲಿಂ ವ್ಯಾಪಾರಿಗಳನ್ನು ಬಹಿಷ್ಕರಿಸಲು ಗ್ರಾಮ ಪಂಚಾಯತಿ ನಡೆಸಿದ ವಿಶೇಷ ಗ್ರಾಮ ಸಭೆಯಲ್ಲಿ ನಿರ್ಣಯ ಅಂಗೀಕರಿಸಿರುವ ಘಟನೆ ಮಹಾರಾಷ್ಟ್ರದ ಅಹಲ್ಯಾನಗರ ಪ್ರದೇಶದಲ್ಲಿ ನಡೆದಿದೆ.

ಅಹಲ್ಯಾನಗರ ಜಿಲ್ಲೆಯ ಮಧಿ ಗ್ರಾಮದಲ್ಲಿ ಇತ್ತೀಚೆಗೆ ಗ್ರಾಮ ಪಂಚಾಯತಿಯು ವಿಶೇಷ ಗ್ರಾಮ ಸಭೆ ಕರೆದಿತ್ತು. ಸಭೆಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ವಸತಿ ಫಲಾನುಭವಿಗಳ ಹೆಸರು ಘೋಷಿಸುವ ಕಾರ್ಯಸೂಚಿ ಹಾಕಿಕೊಳ್ಳಲಾಗಿತ್ತು. ಆ ಕಾರ್ಯಸೂಚಿಗೆ ಸಬೆಯಲ್ಲಿ ಹಾಜರಿದ್ದ ಹಲವರು ಸಹಿ ಹಾಕಿದ್ದರು. ಆದರೆ, ಆ ಕಾರ್ಯಸೂಚಿಯೊಳಗೆ ಮುಸ್ಲಿಂ ವ್ಯಾಪಾರಿಗಳನ್ನು ಬಹಿಷ್ಕರಿಸುವ ನಿರ್ಣಯವನ್ನು ಸೇರಿಸಿ, ಸಹಿಗಳನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ.

ಮಾರ್ಚ್‌ನಲ್ಲಿ ಮಧಿ ಗ್ರಾಮದಲ್ಲಿ ಪ್ರಾಚೀನ ಕಾನಿಫ್‌ನಾಥ್ ದೇವಾಲಯದ ಭವ್ಯ ಜಾತ್ರೆ ನಡೆಯಲಿದೆ. ದೇಶದ ನಾನಾ ಭಾಗಗಳಲ್ಲಿರುವ ಅಲೆಮಾರಿ ಸಮುದಾಯಗಳ ಜನರು ಜಾತ್ರೆಯಲ್ಲಿ ಭಾಗಿಯಾಗುತ್ತಾರೆ. ನಾನಾ ರೀತಿಯ ಕಾರ್ಯಕ್ರಮಗಳು ನಡೆಯಲಿವೆ. ಈ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳನ್ನು ‘ಬಹಿಷ್ಕರಿಸಲು’ ಗ್ರಾಮ ಸಭೆಯಲ್ಲಿ ಕಾನೂನುಬಾಹಿರವಾಗಿ ನಿರ್ಣಯವನ್ನು ಸೇರಿಸಿ, ಸಹಿಗಳನ್ನು ದುರುಪಯೋಗ ಮಾಡಿಕೊಂಡು ನಿರ್ಣಯ ಅಂಗೀಕರಿಸಲಾಗಿದೆ ಎಂದು ಆರೋಪಗಳು ಕೇಳಿಬಂದಿವೆ.

Advertisements

ಭಾರತದಲ್ಲಿ ಗ್ರಾಮ ಸಭೆಯು ಅಂತಹ ನಿರ್ಣಯವನ್ನು ಅಂಗೀಕರಿಸುವುದು ಕಾನೂನುಬಾಹಿರ ಮತ್ತು ಸಂವಿಧಾನಬಾಹಿರವಾಗಿದೆ. ಗ್ರಾಮದ ಸರಪಂಚ್ ಸಂಜಯ್ ಮರ್ಕಡ್ ಅವರ ಕುಮ್ಮಕ್ಕಿನಿಂದ ಈ ನಿರ್ಣಯವನ್ನು ಸೇರಿಸಿ, ಅಂಗೀಕರಿಸಲಾಗಿದೆ ಎಂದು ಆರೋಪಿಸಲಾಗಿದೆ. ಈಗ ಗ್ರಾಮದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಯಾಗಿದೆ. ನಿರ್ಣಯದಲ್ಲಿ ಸಹಿ ಹಾಕಿರುವ ಹಲವರು ತಮ್ಮ ಸಹಿಗಳನ್ನು ಮರ್ಕಡ್ ಅವರು ದುರುಪಯೋಗ ಮಾಡಿಕೊಂಡು, ಈ ನಿರ್ಣಯವನ್ನು ಅಂಗೀಕರಿಸಿರುವುದಾಗಿ ತೋರಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ವಿವಾದ ಭುಗಿಲೆದ್ದ ಬಳಿಕ, ಈ ವಿಷಯದ ಬಗ್ಗೆ ಪರಿಶೀಲನೆ ನಡೆಸಿ, ವರದಿ ಕೊಡುವಂತೆ ಗ್ರಾಮ ಪಂಚಾಯತಿ ಪಿಡಿಒ ಶಿವಾಜಿ ಕಾಂಬ್ಳೆ ಅವರಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ. ಆದಾಗ್ಯೂ, ವಸತಿ ಯೋಜನೆಯ ಕುರಿತು ಚರ್ಚಿಸಲು ಸಭೆಯನ್ನು ಕರೆಯಲಾಗಿತ್ತು. ಮುಸ್ಲಿಂ ಸಮುದಾಯವನ್ನು ಬಹಿಷ್ಕರಿಸುವುದು ಸಭೆಯ ಕಾರ್ಯಸೂಚಿಯಲ್ಲಿ ಇರಲೇ ಇಲ್ಲ ಎಂದು ಪಿಡಿಒ ಕಾಂಬ್ಳೆ ದೃಢಪಡಿಸಿದ್ದಾರೆ.

“ಗ್ರಾಮ ಸಭೆಗಳನ್ನು ನಡೆಸುವಾಗ, ಸಭೆಗಳಲ್ಲಿ ಚರ್ಚೆಯಾಗುವ ವಿಷಯಗಳ ಬಗ್ಗೆ ಕಾರ್ಯಸೂಚಿಯಲ್ಲಿ ಸ್ಪಷ್ಟವಾಗಿ ಬರೆಯಲಾಗುತ್ತದೆ. ಚರ್ಚೆಯಾಗುವ ವಿಷಯಗಳ ಬಗ್ಗೆ ಪಂಚಾಯತಿ ಸದಸ್ಯರು ಮತ್ತು ಗ್ರಾಮಸ್ಥರಿಗೆ ತಿಳಿಸಲಾಗುತ್ತದೆ. ಆದರೆ, ಮುಸ್ಲಿಂ ವ್ಯಾಪಾರಿಗಳನ್ನು ಬಹಿಷ್ಕರಿಸುವ ಕುರಿತ ಯಾವುದೇ ವಿಷಯವು ಕಾರ್ಯಸೂಚಿಯಲ್ಲಿ ಇರಲಿಲ್ಲ ಎಂಬುದು ಸ್ಪಷ್ಟವಾಗಿದೆ” ಎಂದು ಅವರು ತಿಳಿಸಿದ್ದಾರೆ.

ಭಾರತೀಯ ಸಂವಿಧಾನದ 243 (ಬಿ) ವಿಧಿಯಲ್ಲಿ ಗ್ರಾಮ ಸಭೆಗಳಿಗೆ ಗ್ರಾಮದ ದೈನಂದಿನ ಆಡಳಿತಾತ್ಮಕ ಕೆಲಸವನ್ನು ನಿರ್ವಹಿಸಲು ಮತ್ತು ಚರ್ಚಿಸಲು ಅಧಿಕಾರವನ್ನು ನೀಡಲಾಗಿದೆ. ಆದರೆ, ಸಮುದಾಯಗಳನ್ನು ನಿರ್ಬಂಧಿಸುವ, ಬಹಿಷ್ಕರಿಸುವ ಕುರಿತಾದ ಚರ್ಚೆಗಳನ್ನು ನಡೆಸಲು, ನಿರ್ಣಯಗಳನ್ನು ಕೈಗೊಳ್ಳಲು ಪಂಚಾಯತಿಗಳಿಗೆ ಯಾವುದೇ ಅಧಿಕಾರವಿಲ್ಲ. ಹೀಗಾಗಿ, ಮಧಿಯಲ್ಲಿ ಅಂಗೀಕರಿಸಲಾದ ನಿರ್ಣಯವು ಸಂವಿಧಾನಬಾಹಿರವಾಗಿದೆ. ಇದರ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲು ಅವಕಾಶವಿದೆ.

ಆದಾಗ್ಯೂ, ನಿರ್ಣಯವನ್ನು ಸೇರಿಸಿರುವ ಸರಪಂಚ್ ಮರ್ಕಡ್ ಅಥವಾ ನಿರ್ಣಯಕ್ಕೆ ಸಹಿ ಹಾಕಿರುವ ಮತ್ತು ಅಂಗೀಕರಿಸುವಲ್ಲಿ ಭಾಗಿಯಾಗಿರುವ ಯಾವ ವಿರುದ್ಧವೂ ಈವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ವರದಿಯಾಗಿದೆ.

ಈ ವರದಿ ಓದಿದ್ದೀರಾ?: ಲಿಂಗಾಯತರು ರಾಜಕೀಯ ಪಕ್ಷಗಳ ಗುಲಾಮರೇ? ಲಿಂಗಾಯತ ನಾಯಕರಿಗೆ ಪಾಟೀಲರ ಪತ್ರ

ಹಿಂದುತ್ವವಾದಿ ಸಂಘಟನೆ ಆರ್‌ಎಸ್‌ಎಸ್ ಜೊತೆಗೆ ಸಂಪರ್ಕ ಹೊಂದಿರುವ ಮರ್ಕಡ್, “ಹಿಂದಿನ ವರ್ಷಗಳಲ್ಲಿ ನೆಡೆದಿರುವ ಕೆಲವು ಶಾಂತಿಭಂಗ ಚಟುವಟಿಕೆಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹೋಳಿ ಹಬ್ಬದ ಸಮಯದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಅನೇಕ ವ್ಯಾಪಾರಿಗಳು ಕಳ್ಳತನ ಮತ್ತು ಜೂಜಾಟದಂತಹ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದರು” ಎಂದು ಆರೋಪಿಸಿದ್ದಾರೆ. ಆದರೆ, ಅವರ ಆರೋಪಗಳಿಗೆ ಪೂರಕವಾದ ಯಾವುದೇ ಪುರಾವೆಗಳಿಲ್ಲ ಎಂದು ಹೇಳಲಾಗಿದೆ.

ಏತನ್ಮಧ್ಯೆ, ಉತ್ಸವದ ಆಯೋಜಕರು ಗ್ರಾಮ ಸಭೆಯ ನಿರ್ಣಯವನ್ನು ವಿರೋಧಿಸುವುದಾಗಿ ಹೇಳಿದ್ದಾರೆ. ಜಾತ್ರೆಯಲ್ಲಿ ವ್ಯಾಪಾರ ಮಾಡಲು ಎಲ್ಲರಿಗೂ ಅವಕಾಶ ಮಾಡಿಕೊಡಲಾಗುತ್ತದೆ ಎಂದಿದ್ದಾರೆ.

ಮಧಿ ಗ್ರಾಮವು ವಿವಿಧ ಜಾತಿ-ಧರ್ಮಗಳ ಜನರು ವಾಸಿಸುವ ಗ್ರಾಮವಾಗಿದೆ. ಗ್ರಾಮದಲ್ಲಿ ಸುಮಾರು 3,000 ಮನೆಗಳಿದ್ದು, ಸುಮಾರು 400 ಮುಸ್ಲಿಂ ಕುಟುಂಬಗಳೂ ಇವೆ. ಹೆಚ್ಚಿನವರು ಮರಾಠರು (ಮರ್ಕಡ್ – ಪ್ರಬಲ ಜಾತಿ). ಅಲ್ಲದೆ, ತೇಲಿ, ಮಾಲಿ ಮತ್ತು ಧಂಗರ್‌ನಂತಹ ಸಣ್ಣ ಹಿಂದುಳಿದ ವರ್ಗಗಳ ಜನರೂ ಇದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

Download Eedina App Android / iOS

X