ದಲಿತ ಸಹೋದರಿಯರ ಮದುವೆ ರದ್ದು; 15 ಮಂದಿ ಬಂಧನ

Date:

Advertisements

ಕ್ಷುಲ್ಲಕ ಕಾರಣಕ್ಕೆ ದಾಂಧಲೆ ನಡೆಸಿ, ಇಬ್ಬರು ದಲಿತ ಸಹೋದರಿಯರ ಮದುವೆ ರದ್ದಾಗಲು ಕಾರಣರಾಗಿದ್ದ ಪ್ರಬಲ ಜಾತಿ 15 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಕರ್ನಾವಾಲ್ ಗ್ರಾಮದಲ್ಲಿ ಘಟನೆ ನಡೆದಿದೆ.

ಗ್ರಾಮದ ದಲಿತ ಸಹೋದರಿಯರಾದ ಮನೀಷಾ (19) ಮತ್ತು ರಾಣಿ (22) ಅವರಿಗೆ ರಾಜಸ್ಥಾನದ ವರರಾದ ದೇವೇಂದ್ರ ಸಿಂಗ್ ಮತ್ತು ಅರ್ಜುನ್ ಸಿಂಗ್ ಜೊತೆಗೆ ಫೆಬ್ರವರಿ 21ರಂದು ವಿವಾಹ ನಿಶ್ಚಯವಾಗಿತ್ತು. ಮದುವೆ ಸಮಾರಂಭಕ್ಕಾಗಿ ವರದ ಸಂಬಂಧಿಗಳು ಕರ್ನಾವಾಲ್ ಗ್ರಾಮಕ್ಕೆ ಬಂಧಿದ್ದರು.

ಮದುವೆ ತಯಾರಿಯಲ್ಲಿದ್ದ ಸಹೋದರಿಯರು ಸಲೂನ್‌ಗೆ ತೆರಳುವಾಗ ಅವರ ಕಾರು ಗ್ರಾಮದ ಬದಿಯಲ್ಲಿ ನಿಂತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿತ್ತು. ಆ ಕಾರಣಕ್ಕೆ, ಪ್ರಬಲ ಜಾತಿಯ ಪುಂಡರು ಸಹೋದರಿಯರ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಅವರನ್ನು ತಡೆಯಲು ಬಂದ ವರನ ಸಂಬಂಧಿಗಳ ಮೇಲೂ ಹಲ್ಲೆ ನಡೆಸಿದ್ದರು.

Advertisements

ಪರಿಣಾಮ, ಭದ್ರತೆಯ ಕಾರಣಗಳಿಗಾಗಿ ವರರಾದ ದೇವೇಂದ್ರ ಸಿಂಗ್ ಮತ್ತು ಅರ್ಜುನ್ ಸಿಂಗ್ ಮದುವೆಯನ್ನು ರದ್ದುಗೊಳಿಸಿ, ತಮ್ಮ ಕುಟುಂಬಗಳೊಂದಿಗೆ ವಾಪಸ್‌ ಹೋಗಿದ್ದರು.

ದಾಂಧಲೆ ನಡೆಸಿ ತಮ್ಮ ಮಕ್ಕಳ ಮದುವೆ ರದ್ದಾಗಲು ಕಾರಣರಾದ ಪ್ರಬಲ ಜಾತಿಯ ಪುಂಡರ ವಿರುದ್ಧ ದಲಿತ ಸಹೋದರಿಯರ ತಂದೆ ಪದಮ್ ಸಿಂಗ್ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅವರ ದೂರಿನಆಧಾರದ ಮೇಲೆ ಪ್ರಮುಖ ಆರೋಪಿಗಳಾದ ಲೋಕೇಶ್ ಯಾದವ್, ರೋಹ್ತಾಶ್, ಶ್ರೀಪಾಲ್ ಮತ್ತು ಇತರ 12 ಮಂದಿ ವಿರುದ್ಧ ಬಿಎನ್ಎಸ್ ಸೆಕ್ಷನ್ 191 (ಗಲಭೆ) ಮತ್ತು 109 (ಕೊಲೆ ಯತ್ನ) ಹಾಗೂ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್ 3 ರ ಅಡಿಯಲ್ಲಿ ಪೊಲಿಸರು ಪ್ರಕರಣ ದಾಖಲಿಸಿದ್ದಾರೆ. ಇದೀಗ, ಎಲ್ಲ ಆರೋಪಿಗಳನ್ನು ಬಂಧಿಸಿದ್ದಾರೆ.

ಈ ವರದಿ ಓದಿದ್ದೀರಾ?: ರಾಷ್ಟ್ರಪತಿ ಆಡಳಿತದಲ್ಲಿ ಮಣಿಪುರ ಹೇಗಿದೆ, ಜನರಿಗೆ ನೆಮ್ಮದಿ ಲಭಿಸುವುದೆ?

“ಎಲ್ಲ 15 ಆರೋಪಿಗಳನ್ನು ಬಂಧಿಸಲಾಗಿದೆ. ನಾವು ದಲಿತ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇವೆ. ಅವರ ಸುರಕ್ಷತೆಗೆ ಒತ್ತುಕೊಡುವುದಾಗಿ ಭರವಸೆ ನೀಡಿದ್ದೇವೆ. ಕುಟುಂಬವು ಮದುವೆಯನ್ನು ಮತ್ತೆ ನಿಗದಿ ಮಾಡಲು ಪ್ರಯತ್ನಿಸುತ್ತಿದೆ. ಇಬ್ಬರೂ ಯುವತಿಯರು ಯಾವುದೇ ಸಮಸ್ಯೆಗಳಿಲ್ಲದೆ ಮದುವೆ ಮಾಡಿಕೊಳ್ಳಲು ಭದ್ರತೆ ನೀಡುವ ಕೆಲಸ ಮಾಡುತ್ತಿದ್ದೇವೆ” ಎಂದು ರಿಫೈನರಿ ಪೊಲೀಸ್ ಠಾಣೆಯ ಎಸ್‌ಎಚ್‌ಒ ಸೋನು ಕುಮಾರ್ ಹೇಳಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸರ್ಕಾರದಿಂದ ನಷ್ಟ ಸರಿದೂಗಿಸಲಾಗದು, ರೈತರೇ ಕಷ್ಟಕ್ಕೆ ಒಗ್ಗಿಕೊಳ್ಳಬೇಕು: ಬಿಜೆಪಿ ನಾಯಕನ ಹೇಳಿಕೆಗೆ ತೀವ್ರ ಆಕ್ರೋಶ

ಇತ್ತೀಚಿಗೆ ಆದ ಅತಿವೃಷ್ಟಿಯಿಂದ ರೈತರಿಗೆ ಆಗಿರುವ ನಷ್ಟಕ್ಕೆ ಸರ್ಕಾರ ಪರಿಹಾರ ನೀಡಲು...

ಏನಿದು ಅನಿಲ್ ಅಂಬಾನಿ ಬ್ಯಾಂಕ್ ವಂಚನೆ? ಕ್ರಮ ಕೈಗೊಳ್ಳುತ್ತಾರ ಮೋದಿ?

ತನ್ನನ್ನು ತಾನು ದಿವಾಳಿ ಎಂದು ಘೋಷಿಸಿಕೊಂಡಿರುವ ಭಾರತದ ಭಾರೀ ಶ್ರೀಮಂತ ಉದ್ಯಮಿ...

ತೆಲಂಗಾಣ | ಅಂತರ್ಜಾತಿ ವಿವಾಹದ ಕಾರಣಕ್ಕೆ ಸಾಮಾಜಿಕ ಬಹಿಷ್ಕಾರ

ಅಂತರ್ಜಾತಿ ವಿವಾಹವಾದ ಕಾರಣಕ್ಕಾಗಿ ಕುಟುಂಬವೊಂದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ ಪ್ರಕರಣ ತೆಲಂಗಾಣದ...

Download Eedina App Android / iOS

X