ಫಿಲ್ಮ್‌ ಫೆಸ್ಟಿವಲ್‌ | ಎಲ್ಲಿಯೂ ಕಾಣದ ಫೆಸ್ಟಿವಲ್ ರಾಯಭಾರಿ ಪೋಟೋ!

Date:

Advertisements

ಅಂದಹಾಗೆ ರಾಯಭಾರಿ ಎನ್ನವುದು ಪ್ರೆಸ್ ನೋಟ್ ನಲ್ಲಿ, ಪತ್ರಿಕೆ ಸುದ್ದಿಗಳಲ್ಲಿ ಮಾತ್ರ ಕಂಡರೆ ಸಾಕೇ? ರಾಯಭಾರತ್ವ ಎನ್ನುವುದಕ್ಕೆ ಅರ್ಥ ಬೇಡವೇ? ಬೆಂಗಳೂರು ನಗರದ ಆಯಕಟ್ಟಿನ ಜಾಗಗಳಲ್ಲಿ ರಾಯಭಾರಿ ಕರೆ ಕೊಡುವ ಬ್ಯಾನರ್ ಇರಬೇಕು. ಆಗಲೇ “ಸಿನೆಮಾ ಹಬ್ಬ” ಎನ್ನವುದಕ್ಕೊಂದು ಅರ್ಥ – ಮಹತ್ವ ಬರುತ್ತದೆ.

ಪ್ರಮುಖ ಸಂಸ್ಥೆ, ಇಲಾಖೆ, ಕಾರ್ಯಕ್ರಮ, ಯೋಜನೆಗಳಿಗೆ ರಾಯಭಾರಿ ಇದ್ದಾರೆ ಎನ್ನುವುದು ಮತ್ತಷ್ಟೂ ಮೆರುಗು ನೀಡುತ್ತದೆ. ವರನಟ ರಾಜಕುಮಾರ್ ತದ ನಂತರ ಪುನೀತ್ ರಾಜಕುಮಾರ್ ಅವರು “ನಂದಿನಿ”ಗೆ ರಾಯಭಾರಿಯಾಗಿದ್ದರು. ಇದರಿಂದ ನಂದಿನಿ ಬ್ರ್ಯಾಂಡ್ ವ್ಯಾಲ್ಯೂ ಗಮನಾರ್ಹವಾಗಿ ಹೆಚ್ಚಳವಾಗಿದೆ. ಕರ್ನಾಟಕವೂ ಸೇರಿದಂತೆ ಬೇರೆಬೇರೆ ರಾಜ್ಯಗಳ ಗ್ರಾಹಕರ ವಿಶ್ವಾಸಾರ್ಹ ಬ್ರ್ಯಾಂಡ್ ಎನಿಸಿದೆ. ಕೆ.ಎಂ.ಎಫ್. ನೀಡುತ್ತಿದ್ದ ಜಾಹೀರಾತುಗಳಲ್ಲಿ ಇವರಿಬ್ಬರ ಚಿತ್ರವೂ ಗಮನಾರ್ಹವಾಗಿ ಇರುತ್ತಿತ್ತು.

ಈ ಮಾತು ಹೇಳಲು ಕಾರಣವೂ ಇದೆ. ಇಂದು ಫೆಬ್ರವರಿ 28ರಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೆಂಗಳೂರು ಪ್ರಧಾನ ಕಚೇರಿಯಲ್ಲಿ ಫಿಲ್ಮ್ ಫೆಸ್ಟಿವಲ್ ಸಂಬಂಧಿತ ಪತ್ರಿಕಾಗೋಷ್ಠಿ ಇತ್ತು. ಹೋದರೆ ಆಶ್ಚರ್ಯವಾಯಿತು. ಕಚೇರಿ ದ್ವಾರಗಳಲ್ಲಿ ಫೆಸ್ಟಿವಲ್ ಕುರಿತು ಬ್ಯಾನರ್ ಗಳಿವೆ. ಸಹಜವಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಿತ್ರಗಳಿವೆ. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲಾ ಅವರು ಮುಗುಳ್ನಗುತ್ತಿರುವ ಚಿತ್ರವೂ ಇದೆ. ಆದರೆ ಮುಖ್ಯವಾಗಿ ಇರಲೇಬೇಕಾದ ಫಿಲ್ಮ್ ಫೆಸ್ಟಿವಲ್ ರಾಯಭಾರಿ ಚಿತ್ರವೇ ಇಲ್ಲ!!

16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿಯಾಗಿ ಕನ್ನಡಿಗರು, ಭಾರತೀಯ ವಿವಿಧ ಭಾಷೆಗಳ ಚಿತ್ರರಂಗಗಳ ಪ್ರತಿಭಾನ್ವಿತ ಕಲಾವಿದ ಕಿಶೋರ್ ಎಂದೇ ಖ್ಯಾತಿಯ ಕಿಶೋರ್ ಕುಮಾರ್ ಜಿ. ಅವರನ್ನು ಸರ್ಕಾರ ಗುರುತಿಸಿದೆ. ಈ ನಂತರ ಇವರ ಪ್ರಾಮುಖ್ಯತೆಯನ್ನು ಸದುಪಯೋಗಪಡಿಸಿಕೊಳ್ಳಬೇಕಾದ್ದು ಚಲನಚಿತ್ರ ಅಕಾಡೆಮಿ ಕೆಲಸ ! ಇದನ್ನು ಅಕಾಡೆಮಿ ಮಾಡಿಯೇ ಇಲ್ಲ.

ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚಳಕ್ಕೊಂದು ಸದವಕಾಶ

ಇಂದಿನ ಪತ್ರಿಕಾಗೋಷ್ಠಿಯಲ್ಲಿ ಕಿಶೋರ್ ಇದ್ದರು. “ಫಿಲ್ಮ್ ಫೆಸ್ಟಿವಲ್ ನಲ್ಲಿ ಒಳ್ಳೊಳೆಯ ಸಿನೆಮಾಗಳಿರುತ್ತವೆ ಬನ್ನಿ” ಎಂದರು. ಇವರಿಂದ ಬೆಂಗಳೂರು ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಕುರಿತು ಕನ್ನಡವೂ ಸೇರಿದಂತೆ ಬೇರೆಬೇರೆ ಭಾಷೆಗಳಲ್ಲಿ ನಾಲ್ಕು ಮಾತು ಹೇಳಿಸಿ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುವ ಅವಕಾಶವಿತ್ತು! ಕನ್ನಡ ಪತ್ರಿಕೆಗಳೂ ಸೇರಿದಂತೆ ದಕ್ಷಿಣ ಭಾರತದ ಪ್ರಮುಖ ಪತ್ರಿಕೆಗಳು, ಉತ್ತರ ಭಾರತದ ಪ್ರಮುಖ ಪತ್ರಿಕೆಗಳಲ್ಲಿ ಜಾಹಿರಾತು ನೀಡಬಹುದಾಗಿತ್ತು! ಪತ್ರಿಕೆಗಳಲ್ಲಿ ಜಾಹೀರಾತು ನೀಡಲು ಹಣ ಇಲ್ಲ ಎಂಬ ಸ್ಥಿತಿ ಇದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಕಡಿಮೆ ಶುಲ್ಕ ಭರಿಸಿ ಜಾಹೀರಾತು ನೀಡಬಹುದಾಗಿತ್ತು. ಇದ್ಯಾವುದನ್ನು ಅಕಾಡೆಮಿ ಮಾಡಿಲ್ಲ!

ಈ ರೀತಿ ಪ್ರಚಾರ ಮಾಡಿದ್ದರೆ ಬೆಂಗಳೂರು ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಬ್ರ್ಯಾಂಡ್ ವ್ಯಾಲ್ಯೂ ಖಂಡಿತ ಹೆಚ್ಚುತ್ತಿತ್ತು. ಮುಂಬೈ, ಗೋವಾ, ಪೂನಾ, ಕೇರಳ ಮತ್ತು ಚೆನ್ನೈಯಲ್ಲಿ ನಡೆಯುವ ಇಂಟರ್ ನ್ಯಾಷನಲ್ ಫೆಸ್ಟಿವಲ್‌ಗಳಿಗೆ ಕರ್ನಾಟಕವೂ ಸೇರಿದಂತೆ ಬೇರೆ ಬೇರೆ ರಾಜ್ಯಗಳ ಆಸಕ್ತರು ಹೋಗುತ್ತಾರೆ. ಆದರೆ ಬೇರೆ ರಾಜ್ಯಗಳಿಂದ ಬೆಂಗಳೂರಿನಲ್ಲಿ ನಡೆಯುವ ಚಲನಚಿತ್ರೋತ್ಸವಕ್ಕೆ ಬರುವ ವೀಕ್ಷಕರು ಇಲ್ಲವೇ ಇಲ್ಲ!

Kishore Kumar G
ಈ ವರ್ಷ ಫಿಲ್ಮ್‌ ಫೆಸ್ಟಿವಲ್‌ ರಾಯಭಾರಿ ಕಿಶೋರ್‌ ಕುಮಾರ್‌ ಜಿ

ಬೆಂಗಳೂರು ಫಿಲ್ಮ್ ಫೆಸ್ಟಿವಲ್ ಆಯೋಜನೆ ದಿನಾಂಕಗೂ ಮೊದಲೇ ಗೋವಾ, ಕೇರಳ ಫಿಲ್ಮ್ ಫೆಸ್ಟಿವಲ್ ನಡೆದಿರುತ್ತವೆ. ಆನ್ ಲೈನ್ ಫ್ಲಾಟ್ ಫಾರಂನಲ್ಲಿಯೂ ಬೇರೆಬೇರೆ ದೇಶಗಳ ಫೆಸ್ಟಿವಲ್‌ನಲ್ಲಿ ಪ್ರದರ್ಶಿತವಾದ ಗಮನಾರ್ಹ ಸಿನೆಮಾಗಳ ಪಟ್ಟಿಯೂ ಸಿಗುತ್ತದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಫಿಲ್ಮ್ ಫೆಸ್ಟಿವಲ್‌ಗೆ ಬೇಕಾದ ಸಿನೆಮಾಗಳನ್ನು ತರಿಸುವುದಾಗಲಿ, ಸರ್ಕಾರದ ಹಣ ಕೊಟ್ಟು ಒರಾಯನ್ ಮಾಲ್‌ನಲ್ಲಿ ಪ್ರದರ್ಶಿಸುವುದಾಗಲಿ ಸರಳ –ಸುಲಭ ಕೆಲಸ.

ಈ ಹಿನ್ನೆಲೆಯಲ್ಲಿ ಬ್ರ್ಯಾಂಡ್ ಬೆಂಗಳೂರು ವ್ಯಾಲ್ಯೂ ಹೆಚ್ಚಿಸಲು ಇಲ್ಲಿ ನಡೆಯುವ ಫಿಲ್ಮ್ ಫೆಸ್ಟಿವಲ್ ಒಂದು ಸದವಕಾಶ. ಇದನ್ನು ವಾರ್ತಾ ಇಲಾಖೆ, ಅಕಾಡೆಮಿ ಉಪಯೋಗಿಸಿಕೊಂಡಿಲ್ಲ. ಮುಖ್ಯವಾಗಿ ಇದರ ಆಯಾಮಗಳ ಕುರಿತು ಅಕಾಡೆಮಿ ಅಧ್ಯಕ್ಷರು, ರಿಜಿಸ್ಟ್ರಾರ್ ಮತ್ತು ಕಲಾತ್ಮಕ ನಿರ್ದೇಶಕರು ಯೋಚಿಸಬೇಕು. ಹೀಗೆ ಯೋಜನೆ ಮಾಡದಿರುವುದಿಂದ ನಷ್ಟವೇ ಹೊರತು ಲಾಭವೇನೂ ಇಲ್ಲ !

ಪತ್ರಿಕಾಗೋಷ್ಠಿ ಸಂದರ್ಭ ನಾನು “ಕಿಶೋರ್ ಅವರು ಉತ್ತಮ ಕಲಾವಿದರು. ಸಿನೆಮಾ ಫೆಸ್ಟಿವಲ್ ಸಂದರ್ಭದಲ್ಲಿ ಅವರೊಂದಿಗೆ ಸಂವಾದ ಆಯೋಜಿಸುವುದು ಅಗತ್ಯ. ಇದರಿಂದ ಸಿನೆಮಾದ ಆಯಾಮಗಳ ಆಸಕ್ತರು ಹೆಚ್ಚಿನ ಚರ್ಚೆ ಮಾಡಲು ಸಹಾಯಕವಾಗುತ್ತದೆ” ಎಂದು ಸಲಹೆ ನೀಡಿದೆ. ಈ ನಂತರ ಫೆಸ್ಟಿವಲ್ ಕಲಾತ್ಮಕ ನಿರ್ದೇಶಕರು ಇದು ಉತ್ತಮ ಸಲಹೆ ಎಂದರು. ವೇದಿಕೆಯಲ್ಲಿಯೇ ಕಿಶೋರ್ ಅವರಿಗೆ ಆಹ್ವಾನ ನೀಡಿದರು. ಇದರ ಬಗ್ಗೆ ಅಕಾಡೆಮಿ ಮುಂಚಿತವಾಗಿ ಏಕೆ ಯೋಚನೆ ಮಾಡುವುದಿಲ್ಲ? ಪ್ರತಿಭಾನ್ವಿತ ಕಲಾವಿದರಾಗಿರುವ ರಾಯಭಾರಿಯ ಪ್ರತಿಭೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎನ್ನುವುದು ಅರ್ಥವಾಗದ ಸಂಗತಿಯೇ?

ಅಂದಹಾಗೆ ರಾಯಭಾರಿ ಎನ್ನವುದು ಪ್ರೆಸ್ ನೋಟ್ ನಲ್ಲಿ, ಪತ್ರಿಕೆ ಸುದ್ದಿಗಳಲ್ಲಿ ಮಾತ್ರ ಕಂಡರೆ ಸಾಕೇ? ರಾಯಭಾರತ್ವ ಎನ್ನುವುದಕ್ಕೆ ಅರ್ಥ ಬೇಡವೇ? ಬೆಂಗಳೂರು ನಗರದ ಆಯಕಟ್ಟಿನ ಜಾಗಗಳಲ್ಲಿ ರಾಯಭಾರಿ ಕರೆ ಕೊಡುವ ಬ್ಯಾನರ್ ಇರಬೇಕು. ಇವುಗಳು ಆಸಕ್ತರನ್ನು ಆಕರ್ಷಿಸಬೇಕು. ಆಗಲೇ “ಸಿನೆಮಾ ಹಬ್ಬ” ಎನ್ನವುದಕ್ಕೊಂದು ಅರ್ಥ – ಮಹತ್ವ ಬರುತ್ತದೆ. ಆದರೆ ವಾರ್ತಾ ಇಲಾಖೆ ಕಚೇರಿಯ ಮುಂದೆ ಹಾಕಿರುವ ಪೋಸ್ಟರ್ ಗಳಲ್ಲಿಯೇ ರಾಯಭಾರಿ ಫೋಟೋ ಇಲ್ಲ ಎಂದ ಮೇಲೆ ಬೇರೇನು ನಿರೀಕ್ಷಿಸಲು ಸಾಧ್ಯ?

Advertisements
ಕುಮಾರ ರೈತ
ಕುಮಾರ ರೈತ
+ posts

ಪತ್ರಕರ್ತ, ಕೃಷಿ ಇವರ ಆಸಕ್ತಿಯ ಕ್ಷೇತ್ರ. ಹಲವು ಪತ್ರಿಕೆಗಳಿಗೆ ಕೃಷಿ ಲೇಖನಗಳನ್ನು ಬರೆಯುತ್ತಿದ್ದಾರೆ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಕುಮಾರ ರೈತ
ಕುಮಾರ ರೈತ
ಪತ್ರಕರ್ತ, ಕೃಷಿ ಇವರ ಆಸಕ್ತಿಯ ಕ್ಷೇತ್ರ. ಹಲವು ಪತ್ರಿಕೆಗಳಿಗೆ ಕೃಷಿ ಲೇಖನಗಳನ್ನು ಬರೆಯುತ್ತಿದ್ದಾರೆ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು: ಕೆ ವಿ ಪ್ರಭಾಕರ್

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು. ನೋಟಕ್ಕೆ...

ಪ್ರಣಮ್ ದೇವರಾಜ್ ಅಭಿನಯದ ‘S/O ಮುತ್ತಣ್ಣ’ ಸೆ.12ಕ್ಕೆ ತೆರೆಗೆ

ಪುರಾತನ ಫಿಲಂಸ್ ನಿರ್ಮಾಣದ ಶ್ರೀಕಾಂತ್ ಹುಣಸೂರು ನಿರ್ದೇಶನದ ಡೈನಮಿಕ್ ಹೀರೊ ದೇವರಾಜ್...

3 ಈಡಿಯಟ್ಸ್ ಖ್ಯಾತಿಯ ಹಿರಿಯ ನಟ ಅಚ್ಯುತ್ ಪೋತರ್ ನಿಧನ

3 ಈಡಿಯಟ್ಸ್ ಖ್ಯಾತಿಯ ಹಿರಿಯ ನಟ ಅಚ್ಯುತ್ ಪೋತರ್ ಅವರು ಆಗಸ್ಟ್...

ಬೆಂಗಳೂರು | ಹವಾಮಾನ ಕ್ರಿಯೆಗೆ ಪರಿಣಾಮಕಾರಿ ಕೊಡುಗೆ ನೀಡಲು ಅದರ ಮಹತ್ವ ತಿಳಿಯುವುದು ಅಗತ್ಯ: ಪ್ರೀತಿ ಗೆಹ್ಲೋಟ್

ಹವಾಮಾನ ಕ್ರಿಯೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು, ಮಕ್ಕಳು ಅದರ ಮಹತ್ವ ಮತ್ತು...

Download Eedina App Android / iOS

X