ಕೇಸರೀಕರಣಗೊಂಡ ಪಠ್ಯ ಬದಲಾಯಿಸುತ್ತಿದ್ದೇವೆ: ಸಚಿವ ಮಧು ಬಂಗಾರಪ್ಪ

Date:

Advertisements
  • ಇಡೀ ಪಠ್ಯಪುಸ್ತಕ ಪರಿಷ್ಕರಣೆ ಸದ್ಯ ಮಾಡುವುದಿಲ್ಲ
  • ‘ಒಂದು ತಿಂಗಳಲ್ಲೇ ಸಪ್ಲಿಮೆಂಟರಿ ಬುಕ್ ನೀಡುತ್ತೇವೆ’

ಕೇಸರೀಕರಣಗೊಂಡ ಪಠ್ಯದಲ್ಲಿ ಹಲವು ಬದಲಾವಣೆ ತರಲು ನಿರ್ಧರಿಸಲಾಗಿದೆ. ಹೆಡ್ಗೆವಾರ್ ಪಠ್ಯ ತೆಗೆದಿದ್ದೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ವಿಧಾನಸೌದದಲ್ಲಿ ಗುರುವಾರ ಮಾತನಾಡಿದ ಅವರು, “ಇಡೀ ಪಠ್ಯಪುಸ್ತಕ ಪರಿಷ್ಕರಣೆ ಸದ್ಯ ಮಾಡುವುದಿಲ್ಲ. ಹೀಗಾಗಿ ಮಕ್ಕಳಿಗೆ ಏನನ್ನು ಹೇಳಿಕೊಡಬೇಕು? ಏನನ್ನು ತೆಗೆಯಬೇಕು? ಅದನ್ನು ತಿಳಿಸುತ್ತೇವೆ” ಎಂದಿದ್ದಾರೆ.

“ಸಿಎಂ ಮಾರ್ಗದರ್ಶನದ ಮೇಲೆ ಈ ಬಗ್ಗೆ ಚರ್ಚೆ ಮಾಡಲಾಗಿದೆ. ಪ್ರಣಾಳಿಕೆಯಲ್ಲೂ ನಮ್ಮ‌ಕಮಿಟ್ ಮೆಂಟ್ ಇತ್ತು. ನಮ್ಮ ಸರ್ಕಾರ ಬರುವಾಗಲೇ ಪುಸ್ತಕ ಮಕ್ಕಳ‌ ಕೈ ಸೇರಿದೆ. ವಾಪಸ್ ತರಿಸೋಕೆ ಕಷ್ಟ. ಯಾವುದು ಬೇಕು, ಬೇಡ ಅಂತ ಸಪ್ಲಿಮೆಂಟರಿ ಬುಕ್ ಮಾಡುತ್ತೇವೆ. 12 ಲಕ್ಷ ಇದಕ್ಕೆ ಖರ್ಚು ಬರಬಹುದು. 75 ಸಾವಿರ ಶಾಲೆಗಳಿಗೆ ಇದನ್ನು ಕಳುಹಿಸಿಕೊಡಲಾಗುವುದು” ಎಂದರು.

Advertisements

“ಸಾವಿತ್ರಿ ಫುಲೆ ವಿಚಾರ ತೆಗೆದಿದ್ದರು. ಅದನ್ನು ಸೇರಿಸುತ್ತಿದ್ದೇವೆ. ‘ನೀ ಹೋದ ಮರುದಿನ ಅಂಬೇಡ್ಕರ್’ ಕವನ ಬಿಟ್ಟಿದ್ದರು ಅದನ್ನ ನಾವು ‌ಮರು ಸೇರಿಸಿದ್ದೇವೆ. ಸಾವರ್ಕರ್, ಸೂಲಿಬೆಲೆ ಪಾಠಗಳನ್ನ ತೆಗೆದಿದ್ದೇವೆ. ಒಂದು ತಿಂಗಳಲ್ಲೇ ಸಪ್ಲಿಮೆಂಟರಿ ಬುಕ್ ನೀಡುತ್ತೇವೆ. 15 ಪೇಜುಗಳ ಪುಸ್ತಕ ಇರಬಹುದು. ಅದು ಸದ್ಯದಲ್ಲೇ ವಿದ್ಯಾರ್ಥಿಗಳ ಕೈ ಸೇರಲಿದೆ” ಎಂದರು.

ಐವರು ತಜ್ಞರ ಸಮಿತಿ ರಚಿಸಲಾಗಿದೆ. ಅದರಲ್ಲಿ ರಾಜಪ್ಪ ದಳವಾಯಿ, ಅಶ್ವಥ ನಾರಾಯಣ, ರಾಜೇಶ್ ಸೇರಿ ಐವರಿದ್ದಾರೆ. ಪದಗಳ ಬದಲಾವಣೆ, ವಾಕ್ಯ ಬದಲಾವಣೆ ಮಾಡಲಿದ್ದಾರೆ. 6 ರಿಂದ 10ನೇ ತರಗತಿ ವರೆಗೆ ಪಠ್ಯ ಬದಲಾವಣೆ ಮಾಡುತ್ತೇವೆ” ಎಂದು ಹೇಳಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಕಲಬುರಗಿ | ಯುವಕರು ಮಾರಕಾಸ್ತ್ರ ಹಿಡಿದ ವಿಡಿಯೊ ವೈರಲ್: ನಾಲ್ವರು ಯುವಕರ ವಿರುದ್ಧ ಎಫ್‌ಐಆರ್

ಕಲಬುರಗಿಯ ದೇವಿ ನಗರದಲ್ಲಿ ನಾಲ್ವರು ಯುವಕರು ಕೈಯಲ್ಲಿ ಮಾರಕಾಸ್ತ್ರಗಳು ಹಿಡಿದು ವಿಡಿಯೋ...

ಸಕಲೇಶಪುರ | ಮಿತಿ ಮೀರಿರುವ ಮಾದಕ ವಸ್ತು ಸೇವನೆ ಆಧುನಿಕತೆಗೆ ಮಾರಕವಾಗಿದೆ: ಗಾಂಧಿವಾದಿ ಪ್ರಸನ್ನ

ಮಾದಕ ವಸ್ತು ಮುಕ್ತ ಭಾರತವನ್ನು ಕಟ್ಟುವ ಸಕಲೇಶಪುರದ ಜನತೆಯ ಜತೆಗೆ ನಾನೂ...

Download Eedina App Android / iOS

X