ಇಂದಿನಿಂದ ರಾಜ್ಯದಲ್ಲಿ ಮೊದಲ ಹಂತದ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭವಾಗಿದ್ದು, ಪರೀಕ್ಷೆಯ ಭಯ ಹೋಗಲಾಡಿಸುವ ನಿಟ್ಟಿನಲ್ಲಿ ರಾಯಚೂರಿನ ಎಸ್‌ಆರ್‌ಪಿಎಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಗುಲಾಬಿ ನೀಡಿ ಸಿಹಿ ಹಂಚಿ ಪರೀಕ್ಷೆಗೆ ಸ್ವಾಗತಿಸಲಾಗಿದೆ.
ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಶ್ರೀರಾಮ್ ಬೂಬ್, ಪ್ರಾಂಶುಪಾಲ ರಾಘಮ್ಮ ಹಾಗೂ ಪರೀಕ್ಷಾ ಮುಖ್ಯಸ್ಥ ವೀರೇಶ್ ಸೆರೆಗಾರ್ ವಿದ್ಯಾರ್ಥಿಗಳಿಗೆ ಗುಲಾಬಿ ನೀಡಿ ಸಿಹಿ ಹಂಚಿ, ಯಾವುದೇ ಭಯ-ಆತಂಕವಿಲ್ಲದೆ ಪರೀಕ್ಷೆ ಎದುರಿಸಿ ಎಂದು ಧೈರ್ಯ ತುಂಬಿದ್ದಾರೆ.

ಈ ಸುದ್ದಿ ಓದಿದ್ದೀರಾ?: ರಾಯಚೂರು | ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನದ ಹಣ ಗ್ಯಾರಂಟಿಗಳಿಗೆ ಬಳಕೆ; ಆರೋಪ
ಈ ವೇಳೆ ಉಪನ್ಯಾಸಕರಾದ ಪ್ರಿಯಾಂಕಾ, ಸಿದ್ಧಲಿಂಗ, ಮಲ್ಲೇಶ್, ಕೆ.ವೀರೇಶ್ ಕುಮಾರ್, ಗೀತಾ, ಭೋದಕೇತರ ಸಿಬ್ಬಂದಿಯಾದ ಅನುರಾಜ್, ವಿಶಾಲ್, ರಘು, ಅಜಯ್, ಶ್ರೀನಿವಾಸ, ಪದ್ಮಮ್ಮ ಮತ್ತಿತರರು ಇದ್ದರು.
