ಪಂಜಾಬ್‌ನ ಮಾದಕವಸ್ತು ಬಿಕ್ಕಟ್ಟಿಗೆ ಈ ಹಿಂದಿನ ಅಕಾಲಿದಳ-ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳೇ ಕಾರಣ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಆರೋಪಿಸಿದೆ. ಈ ಹಿಂದಿನ ಸರ್ಕಾರಗಳ ನಿರ್ಲಕ್ಷ್ಯವೇ ಪಂಜಾಬ್‌ನ ಮಾದಕವಸ್ತು ಬಿಕ್ಕಟ್ಟಿಗೆ ಕಾರಣವಾಗಿದೆ ಎಂದು ಆರೋಪಿಸಿದೆ.
ಎಎಪಿ ವಕ್ತಾರ ಮತ್ತು ಸಂಸತ್ ಸದಸ್ಯ ಮಲ್ವಿಂದರ್ ಸಿಂಗ್ ಕಾಂಗ್ ಈ ಬಗ್ಗೆ ಹೇಳಿಕೆ ನೀಡಿದ್ದು, “2007ರಿಂದ ಅಕಾಲಿ ದಳ-ಬಿಜೆಪಿ ಸರ್ಕಾರವು ಮಾದಕವಸ್ತು ವ್ಯಾಪಾರವನ್ನು ಸಾಂಸ್ಥೀಕರಣಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಹಲವು ಉನ್ನತ ನಾಯಕರು ಕಳ್ಳಸಾಗಣೆದಾರರನ್ನು ರಕ್ಷಿಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? 32 ಎಎಪಿ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ: ಪಂಜಾಬ್ ಕಾಂಗ್ರೆಸ್ ನಾಯಕ ಬಾಜ್ವಾ
“ಅವರು (ಬಿಜೆಪಿ-ಅಕಾಲಿದಳ, ಕಾಂಗ್ರೆಸ್) ಪಂಜಾಬ್‌ನ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಬದಲು, ಮಾದಕವಸ್ತು ವ್ಯಾಪಾರವನ್ನು ಸುಗಮಗೊಳಿಸಿದರು. ಇಡೀ ಪೀಳಿಗೆಯನ್ನು ವ್ಯಸನಕ್ಕೆ ತಳ್ಳಿದರು” ಎಂದು ಕಾಂಗ್ ಆರೋಪಿಸಿದ್ದಾರೆ.
ಹಾಗೆಯೇ ಕಾಂಗ್ರೆಸ್ ಸರ್ಕಾರವನ್ನು ಅದರಲ್ಲೂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಸರ್ಕಾರವನ್ನು ಟೀಕಿಸಿದ ಎಎಪಿ ನಾಯಕ, “ಈ ಸಮಸ್ಯೆಯನ್ನು ಪರಿಹರಿಸಲು ಕಾಂಗ್ರೆಸ್ ಸರ್ಕಾರ ವಿಫಲವಾಯಿತು” ಎಂದರು.
“ನಾಲ್ಕು ತಿಂಗಳೊಳಗೆ ಮಾದಕವಸ್ತು ಪಿಡುಗನ್ನು ಕೊನೆಗೊಳಿಸುವುದಾಗಿ ಕ್ಯಾಪ್ಟನ್ ಅಮರಿಂದರ್ ಪ್ರತಿಜ್ಞೆ ಮಾಡಿದರು. ಆದರೆ ಅವರ ಸರ್ಕಾರ ವಿಫಲವಾಗಿದ್ದು ಮಾತ್ರವಲ್ಲದೆ ಮಾದಕವಸ್ತು ಬಿಕ್ಕಟ್ಟು ಹೆಚ್ಚಾಗಲು ಕೊಡುಗೆ ನೀಡಿದೆ” ಎಂದು ಆರೋಪಿಸಿದರು.
ಇದನ್ನು ಓದಿದ್ದೀರಾ? ಪಂಜಾಬ್ | ಭೀಕರ ಬಸ್ ಅಪಘಾತ; ಐವರ ದಾರುಣ ಸಾವು
“ಪ್ರಸ್ತುತ ಎಎಪಿ ಸರ್ಕಾರ ಮಾದಕವಸ್ತು ಕಳ್ಳಸಾಗಣೆ ಬಗ್ಗೆ ಯಾವುದೇ ಸಹಿಷ್ಣುತೆಯನ್ನು ಹೊಂದಿಲ್ಲ. ನಮ್ಮ ಸರ್ಕಾರ ಮಾದಕ ವಸ್ತುಗಳ ಕಿಂಗ್‌ಪಿನ್‌ಗಳನ್ನು ಬಂಧಿಸುವುದಲ್ಲದೆ, ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ, ಅವರ ಸಾಮ್ರಾಜ್ಯಗಳನ್ನೇ ಕೆಡವಿದೆ. ಮಾನ್ ಸರ್ಕಾರವು ಪಂಜಾಬ್‌ನಿಂದ ಮಾದಕ ವಸ್ತುಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಬದ್ಧವಾಗಿದೆ” ಎಂದು ಭರವಸೆ ನೀಡಿದರು.
ಪಂಜಾಬ್‌ನಲ್ಲಿ ಮಾದಕವಸ್ತು ಪಿಡುಗು ಅಧಿಕವಾಗಿದೆ. ಸದ್ಯ ಪಂಜಾಬ್ ಸರ್ಕಾರವು ರಾಜ್ಯದಲ್ಲಿ ಮಾದಕ ದ್ರವ್ಯ ದುರುಪಯೋಗದ ವಿರುದ್ಧ ಕಠಿಣ ಕ್ರಮವನ್ನು ಘೋಷಿಸಿದೆ.
