“ನಿರುದ್ಯೋಗಿ ಯುವಕರಿಗೆ ಸರಕಾರ ಉದ್ಯೋಗ ಕಲ್ಪಿಸಬೇಕು” ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ರಾಜ್ಯ ಸಮಿತಿ ಸದಸ್ಯ ಫಯಾಜ್ ತೋಟದ ಹೇಳಿದರು.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಶಿವಾಜಿಪೇಟೆಯಲ್ಲಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವಾಯ್ಎಫ್ಐ) ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
“ದೇಶದಲ್ಲಿ 18ರಿಂದ 35 ವರ್ಷದೊಳ ಗಿನ 40 ಕೋಟಿಯಷ್ಟು ಯುವಕ ರಿದ್ದಾರೆ. ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡುವುದು ಸರ್ಕಾರದ ಜವಾಬ್ದಾರಿ. ರಾಜ್ಯದಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಖಾಲಿ ಹುದ್ದೆಗಳಿವೆ. ಕಾಲಕಾಲಕ್ಕೆ ನೇಮಕಾತಿ ಮಾಡದೆ ಯುವ ಜನರ ಉದ್ಯೋಗ ಅವಕಾಶಕ್ಕೆ ಕೊಡಲಿ ಪೆಟ್ಟು ಬಿದ್ದಂತಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಡಿವಾಯ್ಎಫ್ಐ ಜಿಲ್ಲಾ ಮುಖಂಡ ದಾವಲಸಾಬ ತಾಳಿಕೋಟಿ ಮಾತನಾಡಿ, “ಡಿವಾಯ್ಎಫ್ಐ ಸಂಘಟನೆ ಕಳೆದ 45 ವರ್ಷಗಳಿಂದ ಯುವಜನತೆಯ ಹಕ್ಕುಗಳಿಗಾಗಿ, ಉದ್ಯೋಗ, ಆಹಾರ, ಮೂಲಭೂತ ಸಮಸ್ಯೆ, ಖಾಲಿಯಿರುವ ಹುದ್ದೆಗಳ ಭರ್ತಿ, ಹೊಸ ಹುದ್ದೆಗಳನ್ನು ಸೃಷ್ಟಿಸಿ ನಿರುದ್ಯೋಗ ಸಮಸ್ಯೆ ಪರಿಹರಿಸಲು ಇಡೀ ದೇಶಾದ್ಯಂತ ಸರ್ಕಾರದ ವಿರುದ್ಧ ಯುವಜನತೆಯ ಪರವಾಗಿ ಹೋರಾಟ ನಡೆಸುತ್ತಲೆ ಬಂದಿದೆ. ಯುವಜನತೆ ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ ( DYFI ) ಸದಸ್ಯರಾಗುವ ಮೂಲಕ ಸದೃಢ ದೇಶ ನಿರ್ಮಾಣದ ಜೊತೆಗೆ ಕೈ ಜೊಡಿಸಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ನಾಳೆ (ಮಾ. 2) ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಜಿಲ್ಲೆಗೆ
ಈ ವೇಳೆ ಬಾಲು ರಾಠೋಡ, ಚಂದ್ರು ರಾಠೋಡ, ಮೆಹಬೂಬ್ ಹವಾಲ್ದಾರ್, ಪೀರು ರಾಠೋಡ, ಗಣೇಶ ರಾಠೋಡ, ಶಿವಾಜಿ ಗಡ್ಡದ, ನಜೀರ ಮಾಲ್ದಾರ, ಕನಕರಾಯ ಹಾದಿಮನಿ ಸೇರಿದಂತೆ ಡಿವಾಯ್ಎಫ್ಐ ಕಾರ್ಯಕರ್ತರು ಇದ್ದರು.