ಜನರು ಸರ್ಕಾರದಿಂದ ಭಿಕ್ಷೆ ಬೇಡುವ ಹವ್ಯಾಸ ಬೆಳಸಿಕೊಂಡಿದ್ದಾರೆ: ಬಿಜೆಪಿಯ ಮಾಜಿ ಕೇಂದ್ರ ಸಚಿವನ ವಿವಾದಾತ್ಮಕ ಹೇಳಿಕೆ

Date:

Advertisements

ಮಾಜಿ ಕೇಂದ್ರ ಸಚಿವ ಹಾಗೂ ಹಾಲಿ ಮಧ್ಯ ಪ್ರದೇಶದ ಸಚಿವ ಪ್ರಹ್ಲಾದ್‌ ಪಟೇಲ್ ಅವರು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ನಾಗರಿಕರ ಬೇಡಿಕೆಗಳನ್ನು ‘ಭಿಕ್ಷೆ’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮಧ್ಯ ಪ್ರದೇಶದ ರಾಜಗಢ ಜಿಲ್ಲೆಯಲ್ಲಿ ವೀರಾಂಗನ ರಾನಿ ಆವಂತಿ ಬಾಯಿ ಲೋಧಿ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಹ್ಲಾದ್‌ ಪಟೇಲ್, ಜನರು ಸರ್ಕಾರದಿಂದ ಭಿಕ್ಷೆ ಬೇಡುವ ಹವ್ಯಾಸವನ್ನು ಬೆಳಸಿಕೊಂಡಿದ್ದಾರೆ. ನಾಯಕರು ಬಂದಾಗ ಅವರ ಕೈಚೀಲದ ತುಂಬ ಅರ್ಜಿಗಳೆ ತುಂಬಿರುತ್ತವೆ. ಅವರು ವೇದಿಕೆಯಲ್ಲಿ ಹಾರ ಹಾಕಿ ಕೈಗೆ ಅರ್ಜಿಗಳನ್ನು ನೀಡುತ್ತಾರೆ. ಇದು ಒಳ್ಳೆಯ ಅಭ್ಯಾಸವಲ್ಲ. ಕೇಳುವುದನ್ನು ಬಿಟ್ಟು ಕೊಡುವ ಅಭ್ಯಾಸ ರೂಢಿಸಿಕೊಳ್ಳಬೇಕು. ಇದು ನಿಮಗೆ ಸಂತೋಷದ ಜೀವನ ಹಾಗೂ ಸುಸಂಸ್ಕೃತ ಸಮಾಜ ನಿರ್ಮಿಸಲು ಸಹಾಯವಾಗುತ್ತದೆ ಎಂದು ಹೇಳಿದ್ದಾರೆ.

ಹೆಚ್ಚು ಉಚಿತ ಕೊಡುಗೆಗಳನ್ನು ನಿರೀಕ್ಷಿಸುವುದನ್ನು ಅವಲಂಬಿಸಿದರೆ ಸಮಾಜವು ಅಭಿವೃದ್ಧಿಯ ಬದಲು ಬಲಹೀನಗೊಳ್ಳುತ್ತದೆ. ಇಂತಹ ಭಿಕ್ಷುಕರ ಸೇನೆಯಿಂದ ಸಮಾಜವು ಬಲಗೊಳ್ಳುವ ಬದಲು ದುರ್ಬಲಗೊಳ್ಳುತ್ತದೆ. ಧೈರ್ಯವಂತ ಮಹಿಳೆಯರಿಗೆ ಉಚಿತ ಕೊಡುಗೆಗಳನ್ನು ಆಕರ್ಷಿಸುವುದು ಗೌರವದ ಸಂಕೇತವಲ್ಲ. ಯಾವಾಗ ನಾವು ಅವರ ಮೌಲ್ಯಗಳೊಂದಿಗೆ ಜೀವನ ನಡೆಸುತ್ತೇವೆಯೋ ಅದು ಹುತಾತ್ಮರಿಗೆ ಅದೇ ನಿಜವಾದ ಗೌರವ ನೀಡಿದಂತಾಗುತ್ತದೆ ಎಂದು ಪ್ರಹ್ಲಾದ್‌ ಪಟೇಲ್‌ ಹೇಳಿದರು.

Advertisements

ಈ ಸುದ್ದಿ ಓದಿದ್ದಾರಾ? ಈ ದಿನ ಸಂಪಾದಕೀಯ | ಮೋದಿಯ ‘ಗುಜರಾತ್ ಮಾಡೆಲ್’ ಬಚ್ಚಿಟ್ಟ ಸತ್ಯಗಳು!

“ಭಿಕ್ಷೆ ಬೇಡಿದ ಧೈರ್ಯವಂತ ಮಹಿಳೆ ಯಾರಾದರೂ ಇದ್ದಾರೆಯೆ ಹೇಳಿ ನೋಡೋಣ? ಇದರ ಹೊರತಗಿಯೂ ನಾವು ಕಾರ್ಯಕ್ರಮಗಳನ್ನು ಆಯೋಜಿಸಿ ಭಾಷಣಗಳನ್ನು ಮಾಡುತ್ತೇವೆ. ನಾನು ನರ್ಮಾದಾ ಪರಿಕ್ರಮ ಭಕ್ತನಾಗಿ ಭಿಕ್ಷೆ ಕೇಳುತ್ತೇನೆ ವಿನಾ ನನಗಾಗಿ ಎಂದು ಕೇಳುವುದಿಲ್ಲ. ನನಗೆ ಯಾರಾದರೂ ಏನು ಕೊಟ್ಟಿದ್ದಾರೆ ಎಂಬುದನ್ನು ಯಾರೊಬ್ಬರು ಹೇಳುವುದಿಲ್ಲ” ಎಂದು ಸಚಿವರು ತಿಳಿಸಿದರು.

ಸಚಿವ ಪ್ರಹ್ಲಾದ್‌ ಪಟೇಲ್ ಹೇಳಿಕೆ ಸಾರ್ವಜನಿಕ ವಲಯದಲ್ಲಿ ವಿವಾದವನ್ನು ಹುಟ್ಟುಹಾಕಿದ್ದು, ವಿಪಕ್ಷ ಕಾಂಗ್ರೆಸ್‌ ಹೇಳಿಕೆಯನ್ನು ಖಂಡಿಸಿದೆ. ಮಧ್ಯ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜೀತು ಪತ್ವಾರಿ ಸಚಿವರ ಹೇಳಿಕೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಸಚಿವರು ರಾಜ್ಯದ ಜನರಿಗೆ ಅವಮಾನ ಮಾಡಿದ್ದಾರೆ ಎಂದಿದ್ದಾರೆ.

” ಸಾರ್ವಜನಿಕರನ್ನು ಭಿಕ್ಷುಕರು ಎನ್ನುವ ಅಹಂಕಾರದ ಹಂತಕ್ಕೆ ಬಿಜೆಪಿ ತಲುಪಿದೆ. ಕಷ್ಟಗಳು ಹಾಗೂ ಕಣ್ಣೀರಿನೊಂದಿಗೆ ಹೋರಾಡುವವರಿಗೆ ಇದು ಅವಮಾನಕರವಾಗಿದೆ. ಚುನಾವಣೆ ಮೊದಲು ಹುಸಿ ಭರವಸೆ ನೀಡಿ ಅವುಗಳನ್ನು ಪೂರೈಸಲು ಈಗ ನಿರಾಕರಿಸಲಾಗುತ್ತಿದೆ. ಭರವಸೆಗಳನ್ನು ಜನರು ನೆನಪಿಸಿದರೆ ಅದನ್ನು ಭಿಕ್ಷೆ ಎಂದು ನಾಚಿಕೆಯಿಂದ ಕರೆಯಲಾಗುತ್ತದೆ. ಅವರು ನೆನಪಿನಲ್ಲಿಟ್ಟುಕೊಳ್ಳಬೇಕು, ಈ ದೊಡ್ಡ ಬಿಜೆಪಿ ನಾಯಕರು ಮತಕ್ಕಾಗಿ ಭಿಕ್ಷೆ ಬೇಡುತ್ತಾರೆ” ಎಂದು ಜೀತು ಪತ್ವಾರಿ ತಿಳಿಸಿದ್ದಾರೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X