ನಾನು ಯಾವುದೇ ದೇವಸ್ಥಾನಕ್ಕೆ ಹೋದರೂ ಸಂಚಲನ ಅಗುತ್ತದೆ, ಯಾವ ಧರ್ಮಕ್ಕೆ ಮಾತನಾಡಿದರು ಸಂಚಲನ ಆಗುತ್ತದೆ, ಹಿಂದೆ ನಾನು ನನ್ನ ಕ್ಷೇತ್ರದಲ್ಲಿ ಏಸು ಶಿಲುಬೆ ಮಾಡುತ್ತಿದ್ದಾರೆ ಎಂದು ಪ್ರೋತ್ಸಾಹ ನೀಡಿದ್ದಕ್ಕೆ ನಿಮ್ಮ ಜಿಲ್ಲೆಯವರೇ ಬಂದು ಏಸು ಕುಮಾರ ಎಂದು ಕರೆದರು, ಯಾರೋ ಎಂಪಿ ಮುಸ್ಲಿಮರ ಎದೆ ಸೀಳಿದರೆ ಎರಡು ಅಕ್ಷರ ಇಲ್ಲ ಬರೀ ಪಂಚರ್ ಹಾಕೋಕೆ ಲಾಯಕ್ಕು ಎಂದಾಗ ನಾನು ಅವರೆಲ್ಲ ನನ್ನ ಬ್ರದರ್ಸ್ ಅವರಿಲ್ಲ ಅಂದ್ರೆ ನಾವು ಬದುಕುವುದಕ್ಕೆ ಆಗಲ್ಲ ಅಂದದಕ್ಕೆ ಅದಕ್ಕೂ ಇಷ್ಟು ಸಂಚಲನ ಆಯಿತು, ನನ್ನ ಶಿವ ಕುಮಾರ, ಶಿವನ ಭಕ್ತ ಎಂದು ನನ್ನ ಅಪ್ಪ ಹೆಸರಿಟ್ಟಿದ್ದಾರೆ ಎಂದು ಶಿವನ ದೇವಾಲಯ ಹೋದ್ರೆ ಅಲ್ಲೂ ಸಂಚಲನ ಆಗುತ್ತೆ, ಇತ್ತೀಚಿಗೆ ಕುಂಬಮೇಳಕ್ಕೆ ಹೋಗಿದ್ದೆ ಅದಕ್ಕೂ ಸಂಚಲನ ಮಾಡಿದರು. ನೀರಿಗೆ ಏನಾದರೂ ಜಾತಿ ಧರ್ಮ ಇದೆಯಾ? ನೀರಿಗೆ ಏನಾದರೂ ಪಕ್ಷ ಇದೆಯಾ? ಏನು ಇಲ್ಲ ಮೂರು ನದಿಗಳು ಸೇರುವಂತಹ ಒಂದು ಪವಿತ್ರವಾದ ಸ್ಥಳ ಅಲ್ಲಿ ಹೋಗಿ ಸ್ನಾನ ಮಾಡುವುದರಲ್ಲಿ ತಪ್ಪೇನಿದೆ ? ಬೇರೆಯವರ ಯಾವ ಲೆಕ್ಕಾಚಾರದ ಅವಶ್ಯಕತೆ ಇಲ್ಲ ಎಂದು ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು.

ಅವರು ಇಂದು ಉಡುಪಿ ಜಿಲ್ಲಾ ಪ್ರವಾಸವನ್ನು ಕೈಗೊಂಡಿದ್ದು ಕಾಪುವಿನಲ್ಲಿ ಶ್ರೀ ಮಾರಿಗುಡಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಾರಮ್ಮನ ಗುಡಿಗೆ ನಾನು ಬಂದಿರುವುದು ನನ್ನ ಭಾಗ್ಯ, ನೂರಾರು ದೇವಸ್ಥಾನಕ್ಕೆ ಭೇಟಿ ನೀಡಿದ್ದೇನೆ ಆದರೆ ಹೊಸದಾಗಿ ದೇವಸ್ಥಾನದ ಈ ರೀತಿ ಜೀರ್ಣೋದ್ಧಾರ ಸುಮಾರು 99 ಕೋಟ ರೂಪಾಯಿಯ ಯೋಜನೆ ಇಟ್ಟು ಕೊಂಡು ಸರ್ಕಾರದ ಯಾವುದೇ ಹಣ ಇಲ್ಲದೆ ಕೇವಲ ಭಕ್ತರೇ ಸ್ವ ಇಚ್ಛೆಯಿಂದ ದೇಣಿಗೆನೀಡಿ ಇಂತಹ ಒಂದು ಜೀರ್ಣೋದ್ಧಾರ ಕೆಲಸಕ್ಕೆ ಸಹಕರಿಸಿದ್ದಾರೆ ಅಂತಹ ಒಂದು ಅದ್ಭುತ ಜಾಗ, ಈ ದೇವಸ್ಥಾನದಲ್ಲಿ ಮೇಲು ಕೀಳು ಎಂಬ ಯಾವುದೇ ಬೇದ ಇಲ್ಲ ಯಾವ ಜಾತಿಯವರು ಸಹ ಬರಬಹುದು, ಇಲ್ಲದಿರುವುದು ಕೇವಲ ಮಾನವ ಜಾತಿ, ಮಾನವ ಧರ್ಮ ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ನಾನು ನಂಬಿರುವ ಗುರುಗಳು ನನಗೆ ಹೇಳಿದ್ದಾರೆ. ಹಾಗಾಗಿ ಇಂದು ನಾನು ಇಲ್ಲಿ ಬಂದಿದ್ದೇನೆ. ನಮ್ಮ ಕರ್ನಾಟಕದ ಇಳಿಕಲ್, ಶಿರದಿಂದ ತರಿಸಿದ ಶಿಲೆಯಲ್ಲಿ ಈ ದೇವಸ್ಥಾನ ಕಟ್ಟಿರುವುದು ಬಹಳ ಸಂತೋಷದ ವಿಚಾರ ಎಂದು ಹೇಳಿದರು.

