ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಜಮಾಅತೆ ಇಸ್ಲಾಮೀ ಹಿಂದ್‌ನಿಂದ ಸಾರ್ವಜನಿಕ ಬೋರ್‌ವೆಲ್ ಲೋಕಾರ್ಪಣೆ ಮಾಡಿದ್ದು, ಕುಡಿಯುವ ನೀರು ಒದಗಿಸುಲ್ಲಿ ಯಶಸ್ವಿಯಾಗಿದ್ದಾರೆ.
ತಾಲೂಕಿನ ಕೊಳ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೆರ್ಕಳ ವಾರ್ಡ್‌ನ ನಾಗರಿಕರು ಕಳೆದ ಹಲವು ತಿಂಗಳುಗಳಿಂದ ಕುಡಿಯುವ ನೀರಿಗಾಗಿ ತೀವ್ರ ಪರದಾಡುತ್ತಿದ್ದರು. ಪಂಚಾಯಿತಿಗೆ ದೂರು ನೀಡಿಯೂ ಸಮಸ್ಯೆ ಪರಿಹಾರವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್‌ನ ಕಾರ್ಯಕರ್ತರು ಪ್ರಸ್ತುತ ವಾರ್ಡ್‌ಗೆ ಭೇಟಿ ನೀಡಿ, ಪರಿಶೀಲಿಸಿ, ಮರುದಿನವೇ ಕೊಳವೆ ಭಾವಿಯ ವ್ಯವಸ್ಥೆ ಮಾಡಿದರು.

ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಸಲಹಾ ಸಮಿತಿಯ ಸದಸ್ಯರಾದ ಮುಹಮ್ಮದ್ ಕುಂಞಿಯವರು ರಮಝಾನ್‌ನ ಪ್ರಥಮ ದಿನದಂದೇ ಸರಳ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೈದರು.
ಬಳಿಕ, ನೀರು ಎಂಬ ಅನುಗ್ರಹದ ಕುರಿತು ಮಾತನಾಡುತ್ತ, “ಮನುಷ್ಯರ ಸೇವೆ ಮತ್ತು ಮನುಷ್ಯರ ನೋವು, ಸಂಕಷ್ಟಗಳಿಗೆ ಸ್ಪಂದಿಸುವುದು ಅಲ್ಲಾಹನು ಮೆಚ್ಚುವ ಬಹುದೊಡ್ಡ ಕೆಲಸ. ಜಮಾಅತೆ ಇಸ್ಲಾಮೀ ತನ್ನ ಇತಿಹಾಸದುದ್ದಕ್ಕೂ ಸದಾ ಮನುಷ್ಯ ಪರವಾದ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕಬ್ಬನ್ ಪಾರ್ಕ್‌ನಲ್ಲಿ ಖಾಸಗಿ ಆರ್ಟ್ ಗ್ಯಾಲರಿ…
ಅತಿಥಿಗಳಾಗಿ ಭಾಗವಹಿಸಿದ್ದ ನಿವೃತ್ತ ಸೈನಿಕ ಗೋಪಾಲಕೃಷ್ಣ ಭಟ್, ಲಯನ್ಸ್ ಕ್ಲಬ್‌ನ ಮಾಜಿ ಅಧ್ಯಕ್ಷ ಬಾಲಕೃಷ್ಣ ಸೇರ್ಕಲ, ಕೊಳ್ನಾಡು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಅಸ್ಮಾ ಹಸೈನಾರ್, ಸೆರ್ಕಳ ವಾರ್ಡ್ ಸದಸ್ಯೆ ಸವಿತಾರವರು ಜಮಾಅತೆ ಇಸ್ಲಾಮಿಯ ತುರ್ತು ಸ್ಪಂದನೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಸಂಸ್ಥೆಯ ಸೇವೆಗೆ ಶುಭ ಹಾರೈಸಿದರು.
ಸಮಾಜ ಸೇವಾ ಘಟಕ, ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಸಂಚಾಲಕ ಅಬ್ದುಲ್ ವಹೀದ್, ಸದಸ್ಯರುಗಳಾದ ಹುಸೈನ್ ಬಶೀರ್, ಶಂಶೀರ್ ಮೆಲ್ಕಾರ್, ಮುಹಮ್ಮದ್ ಕಲ್ಲಡ್ಕ, ಸಾಮಾಜಿಕ ಕಾರ್ಯಕರ್ತರಾದ ಹಸೈನಾರ್ ತಾಳಿತ್ತನೂಜಿ ಸೇರಿದಂತೆ ಇತರರು ಇದ್ದರು.