ಶಿರಾ | ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ಕಿನ್ನರಿ ಕಲಾವಿದ ಸಿದ್ದಪ್ಪ ಆಯ್ಕೆ

Date:

Advertisements

ಶಿರಾ ತಾಲೂಕಿನ ಗೌಡಗೆರೆ ಹೋಬಳಿಯ ತಾವರೆಕೆರೆ (ಹಂದಿ ಜೋಗಿ ಕಾಲೋನಿ) ಗ್ರಾಮದ ಕಿನ್ನರಿ ಕಲಾವಿದ ಸಿದ್ದಪ್ಪ ಅವರು ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಶಿರಾ ಸೀಮೆ ಜಾನಪದ ಸೊಗಡಿನ ತವರೂರು ಶಿರಾ ತಾಲ್ಲೂಕು, ಗೌಡಗೆರೆ ಹೋಬಳಿ, ಜೋಗೀರಹಟ್ಟಿ ಗ್ರಾಮದಲ್ಲಿ ವಾಸವಾಗಿರುವ ಶೆಟ್ಟಿಯಪ್ಪ ರವರ ಮಗನಾದ ಸುಮಾರು 65 ವರ್ಷದ ಸಿದ್ದಪ್ಪ ಅವರು ಸುಮಾರು 40 ವರ್ಷಗಳಿಂದ ಜಾನಪದ ಕಲೆಯಾದ ಜೋಗಿಪದಗಳಾದ ಅರ್ಜುನ್ ಜೋಗಿ ಹಾಡು, ಪಾಂಡವರ 12 ವರ್ಷಗಳ ವನವಾಸದ ಹಾಡು, ಮತ್ತು ಅರಗಿನ ಪರ್ವ ಜನಪದಗಳನ್ನು  ಹಾಡಿಕೊಂಡು ಬಂದಿದ್ದಾರೆ. ಹಂದಿಜೋಗಿ ವಂಶಸ್ಥರಾದ ಸಿದ್ದಪ್ಪ ಅವರು ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವಂತಹ ಎಲ್ಲಾ ಗ್ರಾಮಗಳಲ್ಲಿ ಮತ್ತು ಬೇರೆ ಬೇರೆ ಪ್ರಾಂತ್ಯಗಳಲ್ಲಿಯೂ ಸಹ ಜನಪದ ಕಲೆಯನ್ನು ವಿಸ್ತರಿಸುತ್ತಿದ್ದು ಇವರು ಹೋದ ಕಡೆಗಳಲ್ಲಿ ನೆಲೆಯಿಲ್ಲದೆ ಗುಡುಸಲು ಮತ್ತು ಮರದಡಿಗಳಲ್ಲಿ ವಾಸವಿದ್ದುಕೊಂಡು ಈ ಗೀತೆಗಳನ್ನು ಹಳ್ಳಿಯಿಂದ ಹಳ್ಳಿಗೆ ಹಾಡಿಕೊಂಡು ಜನಪದ ಸಂಸ್ಕೃತಿ  ಬೆಳಸಿಕೊಂಡು ಬಂದಿದ್ದಾರೆ. 

1001120057

ಹುಳಿಯಾರು, ಗುಬ್ಬಿ, ನಿಟ್ಟೂರು, ಬಾಣಸಂದ್ರ ಚಿಕ್ಕನಾಯಕನಹಳ್ಳಿ ಬೆಳ್ಳಾರ, ಕೆ.ಬಿ.ಕ್ರಾಸ್ ಬುಕ್ಕಾಪಟ್ಟಣ ,ಹಾಗಲವಾಡಿ ,ಕುರುಬರಹಳ್ಳಿ ಇನ್ನು ಬೇರೆ ಊರುಗಳಲ್ಲಿ ತಿರುಗಾಟ ನಡೆಸಿ   ಇವರು ಜಾನಪದ ಗೀತೆಗಳನ್ನು ಹಾಡಿದ್ದಾರೆ.

Advertisements

ಕನ್ನಡನಾಡಿನ ಸಾಂಸ್ಕೃತಿಕ  ಪರಂಪರೆಯ ಜಾನಪದ ಕಲೆಯ ಜೋಗಿ ಪದಗಳನ್ನು ಹಳ್ಳಿ ಹಳ್ಳಿಗಳಲ್ಲಿ ಮನೆಯ ಮುಂದೆ ಹಾಡುವ ಮೂಲಕ ಈ ಕಲಿಯನ್ನು ಉಳಿಸಿ ಬೆಳೆಸುತ್ತಿರುವ ತಾವರೆಕೆರೆ ಗ್ರಾಮದ ಸ್ವಲ್ಪ ದೂರದಲ್ಲಿರುವ ಹಂದಿ ಜೋಗಿಗಳ ಕುಟೀರಗಳಲ್ಲಿ ವಾಸ ಮಾಡುತ್ತಿರುವ ಜಾನಪದ ಕಲಾವಿದ ಸಿದ್ದಪ್ಪನವರಿಗೆ ರಾಮಾಯಣ, ಮಹಾಭಾರತದ ಸನ್ನಿವೇಶಗಳನ್ನು ತಮ್ಮ ಹಾಡುಗಳ ಮೂಲಕ ಹಾಡುವ ಕಲೆಯನ್ನು ಈ ಕುಟುಂಬಗಳು ಕಳೆದ ಐದು ದಶಕಗಳಿಂದ ಮಾಡುತ್ತಾ ಬಂದಿವೆ. ಇಂತಹ ಜಾನಪದ ಕಲೆಯನ್ನು ಉಳಿಸಿ ಪ್ರೋತ್ಸಾಹಿಸಲು 2023- 24ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ 

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಸಿದ್ದಪ್ಪನವರಿಗೆ ಪ್ರಶಸ್ತಿ ನೀಡಿ ಗೌರವಿದೆ. ಪ್ರಶಸ್ತಿ ಜೊತೆಗೆ 25. ಸಾವಿರ ರೂಪಾಯಿ ಗೌರವಧನ ಸಿಗಲಿದೆ. 

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X