ಹಿರೆಕೆರೂರ ತಾಲೂಕಿನ ಮಾಗೋಡ ಬಳಿ ವಿಷಪೂರಿತ ಆಹಾರ ಸೇವಿಸಿದ ಪರಿಣಾಮವಾಗಿ 40 ಕುರಿಗಳು ಸಾವನ್ನಪ್ಪಿದ್ದವು. ಕುರಿಗಳನ್ನು ಕಳೆದುಕೊಂಡು ನಷ್ಟಕ್ಕೆ ಸಲುಕಿದ್ದ ಕುರಿಗಾಹಿಗಳಿಗೆ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಮಾಗೋಡ ಬಳಿಯ ರಸ್ತೆಯಲ್ಲಿ ಕಿಡಿಗೇಡಿಗಳು ಬಿಸಾಕಿದ್ದ ವಿಷಪೂರಿತ ಆಹಾರ ತಿಂದಿದ್ದ 40 ಕುರಿಗಳು ಜೂನ್ 12ರಂದು ಸಾವನ್ನಪ್ಪಿದ್ದವು. ಇದರಿಂದ ಕುರಿಗಾಹಿಗಳು ನಷ್ಟದಲ್ಲಿ ಸಿಲುಕಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಶಾಸಕ ಪ್ರಕಾಶ ಕೋಳಿವಾಡ ಅವರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮುಖ್ಯಮಂತ್ರಿಗಳ ಗಮನಕ್ಕೆ ತಂದು ಪರಿಹಾರ ಕೊಡಿಸುವುದಾಗಿ ಹೇಳಿದ್ದರು.
ಕುರಿಗಾಹಿಗಳು ಮತ್ತು ಶಾಸಕರ ಮನವಿಗೆ ಸ್ಪಂಧಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾವನ್ನಪ್ಪಿದ ಪ್ರತಿ ಕುರಿಗಳಿಗೂ 5,000 ರೂ. ಪರಿಹಾರವನ್ನು ಕುರಿಗಾಹಿಗಳಿಗೆ ನೀಡುವುದಾಗಿ ಭರವಸೆ ನೀಡಿದ್ದಾರೆ.