“ಸಂಸತ್ತಿನಲ್ಲಿ ದಕ್ಷಿಣ ರಾಜ್ಯಗಳ ಸಂಖ್ಯಾಬಲವನ್ನು ಕಡಿಮೆ ಮಾಡಲು ಕೇಂದ್ರ ಬಿಜೆಪಿ ಸರಕಾರ ಮುಂದಾಗಿದ್ದು, ಕಾಂಗ್ರೆಸ್ ಇದರ ವಿರುದ್ಧ ಹೋರಾಟ ಮಾಡಲಿದೆ” ಎಂದು ಡಿಸಿಎಂ ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು.
ಮಂಗಳೂರು ವಿಮಾನ ನಿಲ್ದಾಣದ ಬಳಿ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
ಕೇಂದ್ರ ಸರ್ಕಾರ ಕ್ಷೇತ್ರ ಪುನರ್ ವಿಂಗಡಣೆ ಮಾಡಲು ಮುಂದಾಗಿರುವ ಬಗ್ಗೆ ಕೇಳಿದಾಗ, “ಕೇಂದ್ರ ಸರಕಾರ ಸಂಸತ್ ಕ್ಷೇತ್ರಗಳ ಪುನರ್ ವಿಂಗಡಣೆ ಮಾಡಲು ಮುಂದಾಗಿರುವುದನ್ನು ಕಾಂಗ್ರೆಸ್ ಪಕ್ಷ ವಿರೋಧಿಸುತ್ತದೆ. ಇದು ಸರಿಯಲ್ಲ. ಇದರ ವಿರುದ್ಧ ಚುನಾವಣಾ ಆಯೋಗ, ನ್ಯಾಯಾಲಯಗಳ ಮೂಲಕ ನಾವು ಹೋರಾಟ ಮಾಡುತ್ತೇವೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿಯ ‘ಗುಜರಾತ್ ಮಾಡೆಲ್’ ಬಚ್ಚಿಟ್ಟ ಸತ್ಯಗಳು!
2026ರಲ್ಲಿ ಲೋಕಸಭಾ ಕ್ಷೇತ್ರಗಳು ಪುನರ್‌ವಿಂಗಡನೆಯಾಗಲಿದ್ದು, ಚುನಾವಣಾ ಆಯೋಗ ಎಲ್ಲ ಸಿದ್ಧತೆಯನ್ನು ನಡೆಸಿದೆ. ಆದರೆ, ಕ್ಷೇತ್ರ ಮರು ವಿಂಗಡನೆ ಜನಸಂಖ್ಯೆಯ ಆಧಾರದಲ್ಲಿ ನಡೆಸುವುದಕ್ಕೆ ಮುಂದಾಗಿರುವುದು ವಿವಾದಕ್ಕೆ ಕಾರಣವಾಗಿದೆ. ಜನಸಂಖ್ಯೆ ಆಧಾರದಲ್ಲಿ ಕ್ಷೇತ್ರಗಳ ಮರುವಿಂಗಡನೆ ಮಾಡಿದರೆ ದಕ್ಷಿಣದ ರಾಜ್ಯಗಳಿಗೆ ಭಾರಿ ಅನ್ಯಾಯವಾಗಲಿದ್ದು, ಉತ್ತರದ ರಾಜ್ಯಗಳಿಗೆ ಹೆಚ್ಚು ಲಾಭವಾಗಲಿದೆ.
ಜನಸಂಖ್ಯೆಯನ್ನು ನಿಯಂತ್ರಿಸಿದ ಕಾರಣ ದಕ್ಷಿಣ ಭಾರತದ ರಾಜ್ಯಗಳು ಬೆಲೆ ತೆರಬೇಕಾದ ಪರಿಸ್ಥಿತಿ ಬಂದಿದೆ. ಈ ಹಿನ್ನೆಲೆ ಕೇಂದ್ರದ ನಿರ್ಧಾರಕ್ಕೆ ದಕ್ಷಿಣ ಭಾರತದ ರಾಜ್ಯಗಳು ಆಕ್ಷೇಪವನ್ನು ವ್ಯಕ್ತಪಡಿಸಿವೆ.

ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಸಿನಿಮಾ ನಟ-ನಟಿಯರು ಬಂದಿಲ್ಲ ಎಂಬ ಆರೋಪಕ್ಕೆ ಡಿಕೆಶಿ… ನಟ್ಟು ಬೋಲ್ಟ್ ಟೈಟ್ ಮಾಡ್ತೀನಿ ಅಂತ ಹೇಳಿದ್ದಾರೆ ಅನ್ನೋದು ಮಾದ್ಮಮಗಳಲ್ಲಿ ವರದಿಯಾಗಿದೆ. ಅದ್ರೆ ಡಿಕೆಶಿಗೆ ಈ ರೀತಿ ಹೇಳಲು ಏನಿದೆ ಹಕ್ಕು…ಈತ ಯಾರು ಯಾವವು ಇವವು ಈ ರೀತಿ ದಮ್ಕಿ ಹಾಕ್ತಾನಲ್ಲ.. ಮೊದಲು ನಿನ್ನ ಪಕ್ಷದವರೇ ನಿನ್ನ ಸಿಎಂ ಆಗಂದೆತ ನಟ್ಟು ಬೋಲ್ಟ್ ಲೂಸ್ ಮಾಡಿದ್ದಾರೆ ಅದನ್ನು ಮೊದಲು ಟೈಟ್ ಮಾಡಿಕೊ..ಆನಂತ್ರ ಚಿತ್ರನಟರ ಬಗ್ಗೆ ಮಾತನಾಡು. ಡಿಸಿಎಂ ಆಗಿದ್ದೀಯಾ ಮಾತಿನ ಮೇಲೆ ಹಿಡಿತ ಇರಲಿ… ನೀವೇನು ಪಾಳೇಗಾರಲ್ಲ….ಸರ್ವಾಧಿಕಾರಿ ಧೋರಣೆ ಬಿಡಿ.. ಇದರಿಂದಾಗಿಯೇ ನೀನಿನ್ನು ಸಿಎಂ ಆಗದೆೇ ಮೂಲೆ ಸೇರಿರುವೆ. ನಿನ್ನೆಂತಹ ದುರಂಕಾರಿ ಸಿಎಂ ಆಗಲು ನಾಲಾಯಕ್ಕು
ಎಂ.ಸಿವರಾಂ.