ನಶಿಸಿ ಹೋಗುತ್ತಿರುವ ಪುರಾತನ ಚಿತ್ರಕಲೆಯನ್ನು ಉಳಿಸಲು ಹಾಗೂ ಅದನ್ನು ಮತ್ತೆ ಮುನ್ನೆಲೆಗೆ ತರಲು ಮಾ.16 ರಂದು ರಾಯಚೂರು ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ರಾಜ್ಯಮಟ್ಟದ ನಾಲ್ಕನೇ ಚಿತ್ರ ಸಂತೆ ಆಯೋಜನೆ ಮಾಡಲಾಗಿದೆ ಎಂದು ಕಲಾ ಸಂಕುಲ ಸಂಸ್ಥೆಯ ಅಧ್ಯಕ್ಷೆ ರೇಖಾ ಬಡಿಗೇರ್ ತಿಳಿಸಿದರು.
“ಕಳೆದ ಮೂರು ವರ್ಷದಿಂದ ಚಿತ್ರಸಂತೆಯನ್ನು ಮುಖ್ಯರಸ್ತೆಯ ಫುಟ್ಪಾತ್ ಮೇಲೆ ಮಾಡುತ್ತಿದ್ದೆವು. ಕಲಾ ಸಂಕುಲ ಸಂಸ್ಥೆ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ರಾಯಚೂರು ನಗರದಲ್ಲಿ ಭಾನುವಾರ (ಮಾ.16)ದಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 6 ರವರೆಗೆ ಕಾರ್ಯಕ್ರಮ ನಡೆಯಲಿದೆ. ರಾಜ್ಯ ಮತ್ತು ಹೊರ ರಾಜ್ಯದಿಂದ ಹಾಗೂ ಸ್ಥಳೀಯ ಚಿತ್ರಕಲಾವಿದರು ತಮ್ಮ ಕಲಾ ಕೃತಿಗಳನ್ನು ಮಾರಾಟ ಮತ್ತು ಪ್ರದರ್ಶನಕ್ಕಾಗಿ ಈ ಚಿತ್ರ ಸಂತೆಯಲ್ಲಿ ಇಡಲಿದ್ದಾರೆ. ಈಗ ಬೇಸಿಗೆ ದಿನವಿರುವುದರಿಂದ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಕಲಾಕೃತಿಗಳಿಗೆ ಬಿಸಿಲು ಬೀಳುವುದರಿಂದ ಹಾಳಾಗುತ್ತವೆ. ಹಾಗಾಗಿ ಸುಸಜ್ಜಿತ ಆವರಣದಲ್ಲಿ ಆಯೋಜಿಸಲಾಗಿದೆ” ಎಂದು ಮಾಹಿತಿ ನೀಡಿದರು.
“ಚಿತ್ರ ಕಲಾವಿದರು ಬೇರೆ ಬೇರೆ ಜಿಲ್ಲೆಯಿಂದ ಈ ಕಾರ್ಯಕ್ರಮಕ್ಕೆ ಭಾಗವಹಿಸಲು ಬರುತ್ತಿದ್ದು, ಅವರಿಗೆ ಮೂಲಭೂತ ಸೌಲಭ್ಯ ಒದಗಿಸಲು ರಂಗ ಮಂದಿರ ವ್ಯವಸ್ಥೆ ಮಾಡಲಿದೆ. ಭಾಗವಹಿಸಿದ ಪ್ರತಿಯೊಬ್ಬ ಕಲಾವಿದರಿಗೆ ನೆನಪಿನ ಕಾಣಿಕೆ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು” ಎಂದರು.
ಆಸಕ್ತ ಚಿತ್ರ ಕಲಾವಿದರು ತಮ್ಮ ಹೆಸರುಗಳನ್ನು ಮಾ.10ರೊಳಗಾಗಿ ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗೆ
ಅಮರೇಗೌಡ ಮೊಬೈಲ್: 83102 35776 , ಈರಣ್ಣ ಬೆಂಗಾಲಿ: 99867 24198 ನ್ನು ಸಂಪರ್ಕಿಸಬಹುದಾಗಿದೆ.
ಇದನ್ನೂ ಓದಿ: ರಾಯಚೂರು | ದೇಶದ ಅಭಿವೃದ್ಧಿಗೆ ಸಂಘ ಸಂಸ್ಥೆಗಳ ಸಹಕಾರ ಅಗತ್ಯ: ಸತ್ಯ ನಾರಾಯಣರಾವ್
ಪತ್ರಿಕಾಗೋಷ್ಠಿಯಲ್ಲಿ ಕಲಾ ಸಂಕುಲ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮಾರುತಿ ಬಡಿಗೇರ್, ಚಿತ್ರಕಲಾವಿದ ಅಮರೇಗೌಡ, ಗಾಯಕಿ ಸಂತೋಷಿ ಇದ್ದರು.
