ಸಾಗರದ ಶೆಡ್ತಿಕೆರೆ ಗ್ರಾಮದ ವೃದ್ಧೆಯ ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಸಾಗಲ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಕುರಿತಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಕಾಯ್ದೆ ಕಲಂ 309 (4), 332 (ಬಿ) ಅಡಿ ಪ್ರಕರಣ ದಾಖಲಾಗಿತ್ತು.
ಸಂಜೆ ವೇಳೆ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ಸರ ಕದ್ದು ಪರಾರಿಯಾಗಿದ್ದ ಆರೋಪಿಯನ್ನು, ಘಟನೆ ನಡೆದ 24 ಗಂಟೆಯೊಳಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಸಫಲರಾಗಿದ್ದಾರೆ.

ಸಾಗರ ತಾಲೂಕು ಶೆಡ್ತಿಕೆರೆ ಗ್ರಾಮದ ನಿವಾಸಿ, ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ರವಿಕುಮಾರ್ ಸಿ (39) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಆರೋಪಿಯಿಂದ ಕಳವು ಮಾಡಿದ್ದ ಅಂದಾಜು 2. 26 ಲಕ್ಷ ರೂ. ಮೌಲ್ಯದ 26 ಗ್ರಾಂ 400 ಮಿಲಿ ತೂಕದ ಮಾಂಗಲ್ಯ ಸರವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ:ಸಾಗರ | ಅಪಘಾತ ನಿಯಂತ್ರಣಕ್ಕೆ ಹೊಸ ವಿಧಾನ; ವಾಹನಗಳಿಗೆ ರಿಫ್ಲೆಕ್ಟೀವ್ ಸ್ಟಿಕರ್ ಅಂಟಿಸುವ ಅಭಿಯಾನ
ಸಾಗರ ಡಿವೈಎಸ್ಪಿ ಗೋಪಾಲಕೃಷ್ಣ ನಾಯ್ಕ್ ಟಿ ಮೇಲ್ವಿಚಾರಣೆಯಲ್ಲಿ ಇನ್ಸ್’ಪೆಕ್ಟರ್ ಮಹಾಬಲೇಶ್ವರ ಎಸ್ ಎನ್ ನೇತೃತ್ವದಲ್ಲಿ ಸಬ್ ಇನ್ಸ್’ಪೆಕ್ಟರ್ ಸಿದ್ದರಾಮಪ್ಪ, ಸಿಬ್ಬಂದಿಗಳಾದ ಶೇಖ್ ಫೈರೋಜ್ ಅಹಮದ್, ರವಿಕುಮಾರ್, ಹನುಮಂತ ಜಂಬೂರ್, ನಂದೀಶ್, ಪ್ರವೀಣ್ ಕುಮಾರ್, ವಿಶ್ವನಾಥ್, ಚಾಲಕ ಗಿರೀಶ್ ಬಾಬು, ತಾಂತ್ರಿಕ ಘಟಕದ ಹೆಚ್ ಸಿ ಇಂದ್ರೇಶ್, ಗುರುರಾಜ್, ವಿಜಯಕುಮಾರ್ ಇದ್ದ ತಂಡ ಪ್ರಕರಣ ಬೇಧಿಸಿದೆ.
