ಮೈಸೂರು ಜಿಲ್ಲೆ, ಹುಣಸೂರು ತಾಲ್ಲೂಕು, ರಾಮೇನಹಳ್ಳಿ ಜಾತ್ರೆಗೆ ದಲಿತ ಕುಟುಂಬದವರು ತೆರಳಿದ್ದ ಸಮಯದಲ್ಲಿ ನಿಲುವಾಗಿಲು ಗ್ರಾಮದ ಒಕ್ಕಲಿಗ ಸಮುದಾಯಕ್ಕೆ ಸೇರಿದ ಏಳು ಜನ ಅನುಚಿತವಾಗಿ ವರ್ತಿಸಿದಲ್ಲದೆ, ಹಲ್ಲೆ ನಡೆಸಿ, ಅವಾಚ್ಯ ಶಬ್ದದಿಂದ ನಿಂದಿಸಿರುವ ಪ್ರಕರಣ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಗಾಯಳುಗಳು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕುಟುಂಬದೊಂದಿಗೆ ಜಾತ್ರೆಗೆ ತೆರಳಿದ್ದವರ ಜೊತೆ ನಿಲುವಾಗಿಲು ಗ್ರಾಮದ ಉಲ್ಲಾಸ್, ಚಿರಾಗ್,ಸೂರಿ, ಶಶಾಂಕ್ ಸೇರಿದಂತೆ ಇನ್ನಿತರರು ಹೆಣ್ಣು ಮಕ್ಕಳ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ. ಇದನ್ನ ಕುಟುಂಬದ ಸುಭಾಷ್ ಪ್ರಶ್ನಿಸಿದಾಗ ಜಾತಿ ನಿಂದನೆ ಮಾಡಿದಲ್ಲದೆ, ಅವಾಚ್ಯ ಶಬ್ದ ಬಳಸಿ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಪ್ರಕರಣ ದಾಖಲಿಸಿರುತ್ತಾರೆ.
ಪೊಲೀಸರು ಇದುವರೆಗೆ ಹಲ್ಲೆ ನಡೆಸಿದ ಆರೋಪಿಗಳನ್ನು ವಶಕ್ಕೆ ಪಡೆದಿಲ್ಲ, ತಹಸೀಲ್ದಾರ್ ಅವರು ಮಧ್ಯ ಪ್ರವೇಶಿಸಿ ಹಲ್ಲೆಗೊಳಗಾದ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಸಿಪಿಐಎಂ ತಾಲ್ಲೂಕು ಸಮಿತಿ ಮನವಿ ಮಾಡಿರುತ್ತದೆ.
ಸಿಪಿಐಎಂ ಪಕ್ಷದ ಕಲ್ಕುಣಿಕೆ ಬಸವರಾಜು ಮಾತನಾಡಿ ಗಲಾಟೆ ನಡೆಸಿದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿಲ್ಲ. ದಲಿತ ಕುಟುಂಬದ ಹೆಣ್ಣು ಮಕ್ಕಳನ್ನು ಸಾರ್ವಜನಿಕವಾಗಿ ಎಳೆದಾಡಿದ್ದಾರೆ, ಚುಡಾಯಿಸಿದ್ದಾರೆ ಅಲ್ಲದೆ, ಹಲ್ಲೆ ನಡೆಸಿದ್ದರು ಸಹ ಕ್ರಮ ಕೈಗೊಳ್ಳದೆ ಆರೋಪಿಗಳ ರಕ್ಷಣೆಗೆ ಪೋಲೀಸರೆ ನಿಂತಿರುವಂತೆ ತೋರುತ್ತಿದೆ. ಈ ಕೂಡಲೆ ಕ್ರಮ ಕೈಗೊಳ್ಳಬೇಕು
ಎಂದು ಆಗ್ರಹಿಸಿದರು.
ಸಿಪಿಐಎಂ ಪಕ್ಷದ ಬೆಳತೂರು ವೆಂಕಟೇಶ್ ಮಾತನಾಡಿ ಪ್ರಕರಣದ ಬಗ್ಗೆ ತಹಶಿಲ್ದಾರ್ ಅವರಿಗೆ ಮನವಿ ಮಾಡಿ ಪೊಲೀಸರಿಂದ ನ್ಯಾಯ ಸಿಗುತ್ತಿಲ್ಲ, ಮಧ್ಯ ಪ್ರವೇಶ ಮಾಡಿ ಸಮಾಜ ಕಲ್ಯಾಣ ಇಲಾಖೆಯಿಂದ ನೊಂದ ಕುಟುಂಬಕ್ಕೆ ಪರಿಹಾರ. ಆರೋಪಿಗಳನ್ನು ಬಂಧಿಸಿ ನ್ಯಾಯ ಕೊಡಿಸಿಕೊಡುವಂತೆ ಕೋರಿದ್ದೇವೆ ಎಂದರು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಹಾಡಿಗಳಿಗೆ ಬೆಳಕು; ವಿದ್ಯುತ್ ಸಂಪರ್ಕಕ್ಕೆ ಚಾಲನೆ ನೀಡಿದ ಸಚಿವ ಕೆ ವೆಂಕಟೇಶ್
ಎಚ್ ಎಸ್ ಶಿವರಾಮು, ತಮ್ಮಡಹಳ್ಳಿ ಮಹದೇವು, ಸಂತೋಷ್, ರಾಜು, ಡ್ರೈವರ್ ಸಿದ್ದರಾಜು, ನಿಲುವಾಗಿಲು ಲೋಕೇಶ್, ಬನ್ನಿಕುಪ್ಪೆ ಮಹಾದೇವ, ಯಶವಂತ್, ಕಿಶೋರ್, ಅವಿನಾಶ್, ವೈ ರಾಜು ಹಾಗೂ ಇನ್ನಿತರರು ಮನವಿ ಕೊಡುವಾಗ ಇದ್ದರು.
