ವಿಶ್ವದ ಪ್ರತಿಷ್ಠಿತ ‘ಆಸ್ಕರ್’ ನ 2025ನೇ ಸಾಲಿನ ಪ್ರಶಸ್ತಿಗಳನ್ನು ವಿತರಿಸಲಾಗಿದ್ದು, ಹಾಸ್ಯ ಪ್ರದಾನ ಚಿತ್ರ ‘ಅನೋರಾ’ಗೆ ಅತ್ಯುತ್ತಮ ಚಿತ್ರ ಸೇರಿ ಐದು ಪ್ರಶಸ್ತಿಗಳು ಸಂದಿವೆ. ಅತ್ಯುತ್ತಮ ನಿರ್ದೇಶಕ ಸೀನ್ ಬಾಕೇರ್, ಅತ್ಯುತ್ತಮ ನಟಿ ಮೈಕಿ ಮ್ಯಾಡಿಸನ್, ಅತ್ಯುತ್ತಮ ಒರಿಜಿನಲ್ ಸ್ಕೋರ್, ಅತ್ಯುತ್ತಮ ಚಿತ್ರಕತೆ ಪ್ರಶಸ್ತಿಗಳು ‘ಅನೋರಾ’ ಚಿತ್ರಕ್ಕೆ ಲಭಿಸಿವೆ.
ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ನಲ್ಲಿ ನಡೆದ 97ನೇ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಲಾಸ್ ಏಂಜಲೀಸ್ನ ಕಾಡ್ಗಿಚ್ಚಿನಿಂದ ಮೃತಪಟ್ಟರಿಗೆ ಗೌರವ ಸಲ್ಲಿಸಲಾಯಿತು. ಭಾರತದಿಂದ ನಾಮನಿರ್ದೇಶನಗೊಂಡಿದ್ದ ಪ್ರಿಯಾಂಕಾ ಚೋಪ್ರಾ ನಿರ್ಮಾಣದ ಏಕೈಕ ಕಿರುಚಿತ್ರ ‘ಅನುಜಾ’ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿದ್ದು, ಅತ್ಯುತ್ತಮ ಕಿರುಚಿತ್ರ ‘ಐ ಆಮ್ ನಾಟ್ ರೋಬೋಟ್’ ಚಿತ್ರದ ಪಾಲಾಗಿದೆ.
ಪ್ರಶಸ್ತಿಗಳ ಪಟ್ಟಿ
ಅತ್ಯುತ್ತಮ ಸಿನಿಮಾ: ಅನೋರಾ
ಅತ್ಯುತ್ತಮ ನಟಿ: ಮೈಕಿ ಮ್ಯಾಡಿಸನ್ (ಅನೋರಾ)
ಅತ್ಯುತ್ತಮ ನಿರ್ದೇಶನ: ಸೀನ್ ಬೇಕರ್ (ಅನೋರಾ)
ಅತ್ಯುತ್ತಮ ನಟ: ಏಡ್ರಿಯನ್ ಬ್ರೋಡಿ (ದಿ ಬ್ರೂಟಲಿಸ್ಟ್)
ಬೆಸ್ಟ್ ಒರಿಜಿನಲ್ ಸ್ಕೋರ್: ಡ್ಯಾನಿಯಲ್ ಬ್ಲೂಮ್ಬರ್ಗ್ (ದಿ ಬ್ರೂಟಲಿಸ್ಟ್)
ಅತ್ಯುತ್ತಮ ಅಂತಾರಾಷ್ಟ್ರೀಯ ಸಿನಿಮಾ: ಐ ಆ್ಯಮ್ ಸ್ಟಿಲ್ ಹಿಯರ್ (ಬ್ರೇಜಿಲ್)
ಅತ್ಯುತ್ತಮ ಛಾಯಾಗ್ರಹಣ: ಲೋಲ್ ಗ್ರಾವ್ಲೇ (ದಿ ಬ್ರೂಟಲಿಸ್ಟ್)
ಬೆಸ್ಟ್ ಸೌಂಡ್ ಆ್ಯಂಡ್ ಬೆಸ್ಟ್ ವಿಶ್ಯುವಲ್ ಎಫೆಕ್ಟ್: ಡ್ಯೂನ್ 2
ಬೆಸ್ಟ್ ಡಾಕ್ಯುಮೆಂಟರಿ ಫ್ಯೂಚರ್ ಫಿಲ್ಮ್: ನೋ ಒದರ್ ಲ್ಯಾಂಡ್
ಈ ಸುದ್ದಿ ಓದಿದ್ದೀರಾ? ಫಿಲ್ಮ್ ಫೆಸ್ಟಿವಲ್ | ಚಾಮಯ್ಯ ಮೇಷ್ಟ್ರೇ… ನಿಮ್ಮನ್ನು ಮರೆಯುವುದುಂಟೆ!