ರಾಜಾನುಕುಂಟೆ-ಕಾಕೋಳು ರಸ್ತೆಯಲ್ಲಿ ಅಪಾಯಕಾರಿ ಬೈಕ್ ವೀಲಿಂಗ್ ಮಾಡಿದ ಯುವಕರ ವಿರುದ್ಧ ರಾಜಾನುಕುಂಟೆ ಪೊಲೀಸರು ಪ್ರಕರಣ ದಾಖಲಿಸಿ, ಎರಡು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ.
ಯಲಹಂಕ ತಾಲೂಕು ರಾಜಾನುಕುಂಟೆಯ ಮಾದಪ್ಪನಹಳ್ಳಿಯಲ್ಲಿ ಫೆಬ್ರವರಿ 28ರ ಸಂಜೆ ಪೊಲೀಸರು ಗಸ್ತು ಮಾಡುವ ವೇಳೆ, ಮಾದಪ್ಪನಹಳ್ಳಿಯಿಂದ ದಿಬ್ಬೂರು ಕಡೆಗೆ ಡಿಯೋ ಬೈಕ್ ಚಾಲಕ, ಬೈಕ್ ವ್ಹೀಲಿಂಗ್ ಮಾಡುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಚಾಲಕನ ಅತಿವೇಗ ಮತ್ತು ನಿರ್ಲಕ್ಷ್ಯತೆಯ ವಾಹನ ಚಾಲನೆಯ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉಡುಪಿ | ನಾಲ್ಕು ತಿಂಗಳ ಬಾಕಿ ಕೂಡಲೇ ಜಮೆ ಮಾಡಿ, ಪಿಂಚಣಿ ರೂ 9000 ಕ್ಕೆ ಏರಿಸಿ
ಬೈಕ್ ವ್ಹೀಲಿಂಗ್ ಮಾಡಿದ ಯುವಕರು ಬೆಂಗಳೂರಿನ ಗಂಗಮ್ಮ ಸರ್ಕಲ್ನ ರಾಮಚಂದ್ರಪುರದ ನಿವಾಸಿಗಳಾಗಿದ್ದಾರೆ. ಇವರು ರಸ್ತೆಯಲ್ಲಿ ಬೈಕ್ ವ್ಹೀಲಿಂಗ್ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲೂ ಹಂಚಿಕೊಂಡಿದ್ದರು.