ಬಿಎಸ್‌ಪಿಯ ಮುಖ್ಯಸ್ಥೆ ಮಾಯಾವತಿ ಅವರು ತನ್ನ ಸೋದರಳಿಯ ಆಕಾಶ್ ಆನಂದ್ ಅವರನ್ನು ಬಿಎಸ್‌ಪಿಯ ಎಲ್ಲಾ ಸ್ಥಾನಗಳಿಂದ ತೆಗೆದುಹಾಕಿದ್ದಾರೆ. ಇದಾದ ಬಳಿಕ ಕಾಂಗ್ರೆಸ್ ನಾಯಕ ಉದಿತ್ ರಾಜ್, ಕಾಂಗ್ರೆಸ್‌ಗೆ ಸೇರುವಂತೆ ಬಿಎಸ್‌ಪಿ ಕಾರ್ಯಕರ್ತರಿಗೆ ಆಹ್ವಾನ ನೀಡಿದ್ದಾರೆ.
ಇತ್ತೀಚೆಗೆ “ಮಾಯಾವತಿ ಸಾಮಾಜಿಕ ಚಳವಳಿಯ ಕತ್ತು ಹಿಸುಕಿ ದಮನ ಮಾಡಿದ್ದಾರೆ. ಈಗ ಅವರ ಕತ್ತು ಹಿಸುಕುವ ಸಮಯ” ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಉದಿತ್ ರಾಜ್, ಈಗ ಬಿಎಸ್‌ಪಿಯಲ್ಲಾದ ದಿಢೀರ್ ರಾಜಕೀಯ ಬೆಳವಣಿಗೆ ಬೆನ್ನಲ್ಲೇ ಮತ್ತೆ ಮಾಯಾವತಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದನ್ನು ಓದಿದ್ದೀರಾ? ಸಾಮಾಜಿಕ ಚಳವಳಿಯ ದಮನ ಮಾಡಿದ ಮಾಯಾವತಿಯ ಕತ್ತು ಹಿಸುಕುವ ಸಮಯ ಬಂದಿದೆ: ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
“ಮಾಯಾವತಿಯ ಕ್ರಮಗಳೇ ಬಿಎಸ್‌ಪಿಯನ್ನು ನಾಶ ಮಾಡುತ್ತದೆ. ಬಿಎಸ್‌ಪಿಯಲ್ಲಿ ದಲಿತರು ಅಥವಾ ಒಬಿಸಿಗಳಿಗಾಗಿ ಯಾವುದೇ ಯೋಜನೆಗಳು ಉಳಿದಿಲ್ಲ” ಎಂದು ಹೇಳಿದರು. ಹಾಗೆಯೇ ತನ್ನ ಈ ಹಿಂದಿನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
“ಬಹುಜನ ಆಂದೋಲನದ ಕತ್ತನ್ನು ಮಾಯಾವತಿ ಸೀಳುತ್ತಿರುವುದಾಗಿ ನಾನು ಫೆಬ್ರವರಿ 17ರಂದೇ ಹೇಳಿದ್ದೆ. ಸಮಾಜ ಇದನ್ನು ಅರ್ಥ ಮಾಡಿಕೊಳ್ಳಬೇಕು, ಮಾಯಾವತಿಯಿಂದ ದೂರ ಉಳಿಯಬೇಕು ಎಂಬುದೇ ನನ್ನ ಹೇಳಿಕೆಯ ಅರ್ಥವಾಗಿತ್ತು” ಎಂದು ಹೇಳಿಕೊಂಡಿದ್ದಾರೆ.
दलितों को घुटने टेकने वाली नेता सुश्री मायावती नहीं चाहिए। 2024 के लोकसभा चुनाव के दौरान मायावती जी ने आकाश आनंद को उत्तराधिकारी बनाने से मना कर दिया था । फिर 47 दिन बाद 23 जून को उत्तराधिकारी बना दिया। इस फ़रवरी में उत्तराधिकारी के पद से हटा दिया। फिर 2 मार्च को सभी पदों से…
— Dr. Udit Raj (@Dr_Uditraj) March 3, 2025
“ನಾನು ಮಾಯಾವತಿ ಬಗ್ಗೆ ಹೇಳಿಕೆ ನೀಡಿದ ಬೆನ್ನಲ್ಲೇ ನನ್ನ ಮೇಲೆ ಬೆದರಿಕೆ ಹಾಕಲಾಗಿದೆ. ನನ್ನ ಹತ್ಯೆ ಮಾಡಿದವರಿಗೆ ನಗದು ಬಹುಮಾನವನ್ನು ಕೂಡಾ ಘೋಷಿಸಲಾಗಿತ್ತು” ಎಂದು ದೂರಿದ್ದಾರೆ.
ಇದನ್ನು ಓದಿದ್ದೀರಾ? ಬಿಎಸ್‌ಪಿ ರಾಷ್ಟ್ರೀಯ ಸಂಯೋಜಕ ಹುದ್ದೆಯಿಂದ ಆಕಾಶ್ ಆನಂದ್ ವಜಾ
ಭಾನುವಾರ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ತನ್ನ ಸೋದರಳಿಯನನ್ನು ಎಲ್ಲಾ ಸ್ಥಾನಗಳಿಂದ ತೆಗೆದುಹಾಕುವ ನಿರ್ಧಾರವನ್ನು ದಿಢೀರ್ ಆಗಿ ಕೈಗೊಂಡಿದ್ದು, ಮಾಯಾವತಿ ನಿರ್ಧಾರವೀಗ ರಾಜಕೀಯ ಸಂಚಲನ ಮೂಡಿಸಿದೆ. ಈ ಹಿಂದೆ ಒಂದೆರಡು ಬಾರಿ ಆಕಾಶ್‌ಗೆ ರಾಜ್ಯ ನಾಯಕರ ಸ್ಥಾನ ನೀಡಲಾಗಿತ್ತು, ಹಾಗೆಯೇ ಹಿಂಪಡೆಯಲಾಗಿತ್ತು, ಮತ್ತೆ ಸ್ಥಾನ ನೀಡಲಾಗಿತ್ತು.
“ನಾನು ಸಾಯುವವರೆಗೂ ನಾನೇ ಮುಖ್ಯಸ್ಥೆ, ಉತ್ತಾರಾಧಿಕಾರಿ ಘೋಷಿಸಲ್ಲ” ಎಂಬ ಮಾಯಾವತಿ ಹೇಳಿಕೆಯು ಸದ್ಯ ಬಿಎಸ್‌ಪಿ ಮಾತ್ರವಲ್ಲ ಇತರೆ ರಾಜಕೀಯ ಪಕ್ಷಗಳಲ್ಲಿಯೂ ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ ಕಾಂಗ್ರೆಸ್ ಅಸಮಾಧಾನಕ್ಕೆ ಒಳಗಾಗಿರುವ ಕಾಂಗ್ರೆಸ್ ನಾಯಕರುಗಳನ್ನು ತಮ್ಮೆಡೆ ಸೆಳೆಯುವ ಯತ್ನದಲ್ಲಿ ತೊಡಗಿದೆ. ಎಸ್‌ಪಿ ಮಾಯಾವತಿ ನಡೆಯನ್ನು “ವಿಚಿತ್ರ ನಿರ್ಧಾರ” ಎಂದು ಕರೆದಿದೆ.
