ರಾಜ್ಯದಲ್ಲಿ ಕುಟುಂಬ ಯೋಜನೆ ಅಳವಡಿಸುವುದರಿಂದ ಹೆಚ್ಚು ಅನಾನುಕೂಲವಾಗಲಿದ್ದು, ತಮಿಳುನಾಡಿನ ಜನರು ತಕ್ಷಣವೇ ಹೆಚ್ಚು ಮಕ್ಕಳು ಪಡೆಯಬೇಕೆಂದು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಕರೆ ನೀಡಿದ್ದಾರೆ.
ಜನಸಂಖ್ಯೆ ಆಧಾರಿತ ಕ್ಷೇತ್ರ ವಿಂಗಡನೆ ತಮಿಳುನಾಡು ರಾಜಕೀಯ ಪ್ರಾತಿನಿಧಿಸುವಿಕೆಯಲ್ಲಿ ಪರಿಣಾಮ ಬೀರಲಿದ್ದು, ನಾಗರಿಕರು ಹೆಚ್ಚು ಮಕ್ಕಳು ಹೊಂದಬೇಕೆಂದು ಮನವಿ ಮಾಡಿದರು.
“ಈ ಮೊದಲು ನಾವು ಸಮಯ ಹೊಂದಾಣಿಕೆ ಮಾಡಿಕೊಂಡು ಮಕ್ಕಳನ್ನು ಪಡೆಯಿರಿ ಎಂದು ಹೇಳುತ್ತಿದ್ದೆವು. ಆದರೆ ಈಗ ತಕ್ಷಣವೇ ಪಡೆದುಕೊಳ್ಳಬೇಕಿದೆ. ನಾವು ಕುಟುಂಬ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದೆವು. ಅದರಿಂದ ಸಮಸ್ಯೆ ಎದುರಾಗುತ್ತಿದೆ. ಆದ ಕಾರಣದಿಂದ ಸಮಯಾವಕಾಶ ನೋಡದೆ ತಕ್ಷಣ ಮಕ್ಕಳನ್ನು ಪಡೆಯಿರಿ” ಎಂದು ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿಯ ‘ಗುಜರಾತ್ ಮಾಡೆಲ್’ ಬಚ್ಚಿಟ್ಟ ಸತ್ಯಗಳು!
ಕ್ಷೇತ್ರ ಮರುವಿಂಗಡಣಾ ಸಂಬಂಧವಾಗಿ ಸ್ಟಾಲಿನ್ ಅವರು ಮಾರ್ಚ್ 5 ರಂದು ಸರ್ವಪಕ್ಷ ಸಭೆಯನ್ನು ಕರೆದಿದ್ದಾರೆ. ತಮಿಳುನಾಡು ಭವಿಷ್ಯಕ್ಕಾಗಿ ಪ್ರತಿಯೊಬ್ಬರು ಒಟ್ಟಾಗಬೇಕಿದೆ. ಸಂಕಷ್ಟ ಪರಿಸ್ಥಿತಿಯಿರುವುದರಿಂದ ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಖಂಡಿತಾ ಹೋರಾಟ ನಡೆಸಬೇಕಿದೆ. ಎಲ್ಲರು ತಮ್ಮ ಅಹಂ ಅನ್ನು ಮರೆತು ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಬೇಕೆಂದು ನಾನು ಆಗ್ರಹಿಸುತ್ತೇನೆ. ನೀವು ನನ್ನ ಮಾತನ್ನು ಏಕೆ ಕೇಳಬೇಕೆಂದು ಯೋಚಿಸಬೇಡಿ, ತಮಿಳುನಾಡಿನ ಮೇಲೆ ಕತ್ತಿ ತೂಗಾಡುತ್ತಿದೆ ರಾಜ್ಯದ ಸಮಸ್ಯೆ ಪರಿಹಾರಕ್ಕಾಗಿ ಭಾಗವಹಿಸಿ ಎಂದು ಸ್ಟಾಲಿನ್ ಮನವಿ ಮಾಡಿದ್ದಾರೆ.
ಫೆ.25ರಂದು ಸಂಪುಟ ಸಭೆಯಲ್ಲಿ ಮಾತನಾಡಿದ್ದ ಎಂ ಕೆ ಸ್ಟಾಲಿನ್ ಕ್ಷೇತ್ರ ಪುನರ್‌ವಿಂಗಡನೆಯಿಂದ ತಮಿಳುನಾಡು 8 ಸಂಸದರನ್ನು ಕಳೆದುಕೊಳ್ಳಲಿದ್ದು, ಸಂಸತ್ತಿನಲ್ಲಿ ನಮ್ಮ ಪ್ರಾತಿನಿಧ್ಯ ಕಡಿಮೆಯಾಗಲಿದೆ ಎಂದು ಹೇಳಿದ್ದರು.
