ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಕಚೇರಿ ಪಕ್ಕದಲ್ಲೇ ಇದ್ದ ಎಟಿಎಂಗೆ ಕಳ್ಳರು ಕನ್ನ ಹಾಕಿ 2.90 ಲಕ್ಷ ರೂಪಾಯಿ ದೂಚಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರಿನ ಬಿ.ಎಸ್ ರಸ್ತೆಯಲ್ಲಿ ಎಸ್‌ಪಿ ಕಚೇರಿ ಇದೆ. ಅದರ ಪಕ್ಕದಲ್ಲಿಯೇ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಎಟಿಎಂ ಇದೆ. ಆ ಎಟಿಎಂನ ಒಂದು ಭಾಗವನ್ನು ಗ್ಯಾಸ್ ಕಟರ್ ಬಳಸಿ ಕತ್ತರಿಸಿರುವ ದರೋಡೆಕೋರರು ಸುಮಾರು 2.90 ಲಕ್ಷ ರೂಪಾಯಿಯನ್ನು ದೋಚಿಸಿದ್ದಾರೆ.
ಅಲ್ಲದೆ, ಅದೇ ರಸ್ತೆಯ ಪಾಲನೇತ್ರಯ್ಯ ಮೆಡಿಕಲ್ ಸ್ಟೋರ್‌ನಲ್ಲಿಯೂ ಕಳ್ಳತನ ನಡೆದಿದೆ. ಘಟನೆಯ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಎರಡೂಘಟನೆಗಳಿಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ. ಗೃಹ ಸಚಿವ ಜಿ ಪರಮೇಶ್ವರ್ ಅವರ ತವರು ಜಿಲ್ಲೆಯ ಜಿಲ್ಲಾಕೇಂದ್ರದಲ್ಲಿಯೇ ದರೋಡೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಗರ ವಾಸಿಗಳಲ್ಲಿ ಆಂತಕ ಮನೆ ಮಾಡಿದೆ.