ಸಾರ್ವಜನಿಕರಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿ ಗ್ರಾಮ ಮಟ್ಟದಲ್ಲಿ ಪ್ರಗತಿ ಸಾಧಿಸುವುದೇ ಗ್ರಾಮ ಪಂಚಾಯತಿಗಳ ಮೂಲ ಉದ್ದೇಶ ಎಂದು ಸಾಗರದ ಉಳ್ಳೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷ ತಿರುಮಲೇಶ್ ತಿಳಿಸಿದರು.
ತಾಲೂಕಿನ ಪ್ರಥಮ ದರ್ಜೆ ಕಾಲೇಜಿನಿಂದ ವಿದ್ಯಾರ್ಥಿಗಳು ಆನಂದಪುರ ಸಮೀಪದ ಉಳ್ಳೂರು ಗ್ರಾಮ ಪಂಚಾಯತಿಗೆ ಭೇಟಿ ನೀಡಿದಾಗ ಅವರನ್ನು ಕುರಿತು ಮಾತನಾಡಿದ ಅವರು, “ಸಂವಿಧಾನ ಬದ್ಧವಾಗಿ ಕೆಲಸ ಕಾರ್ಯಗಳನ್ನೂ ಮಾಡುವುದು, ಸಾರ್ವಜನಿಕ ಹಿತಾಸಕ್ತಿ ಕಾಪಾಡುವುದೇ ಗ್ರಾಪಂಗಳ ಮುಖ್ಯ ಉದ್ದೇಶವಾಗಿರುತ್ತದೆ. ಬಹುತೇಕ ಪಂಚಾಯತಿಗಳ ಅಧ್ಯಕ್ಷರು ಹಾಗೂ ಸದಸ್ಯರು ಸರ್ಕಾರದ ಹಣ ಲೂಟಿ ಮಾಡುತ್ತಾರೆ ಎಂಬ ಆರೋಪ ಸಾಮಾನ್ಯವಾಗಿ ಹರಿದಾಡುತ್ತದೆ. ಇದು ಶುದ್ಧ ಸುಳ್ಳು. ಇಲ್ಲಿ ಯಾವುದೇ ರೀತಿಯಲ್ಲೂ ಸರ್ಕಾರದ ಹಣವನ್ನು ಲೂಟಿ ಹೊಡೆಯಲು ಆಗುವುದಿಲ್ಲ” ಎಂದರು.
ಪಿ .ಡಿ. ಓ ಹರ್ಷ ವರ್ಧನ್ ಮಾತನಾಡಿ, “ದೇಶದಲ್ಲಿ ಪ್ರತಿಯೊಂದು ಗ್ರಾಮ ಅಬಿವೃದ್ಧಿ ಹೊಂದಿದರೆ ದೇಶ ಅಭಿವೃದ್ಧಿ ಹೊಂದಿದಂತೆ ಎಂದು ಹೇಳಿ ತಮ್ಮ ಕಾರ್ಯ ಕಲಾಪಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯ ಶಾಸ್ತ್ರ ಮುಖ್ಯಸ್ಥ ಜಗದೀಶ್ ಬಿದರಕೊಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದನ್ನೂ ಓದಿ: ಸಾಗರ | ವೃದ್ಧೆಯ ಮಾಂಗಲ್ಯ ಸರ ಕದ್ದಿದ್ದ ಆರೋಪಿ ಸೆರೆ
ಈ ವೇಳೆ ಉಪನ್ಯಾಸಕಿ ಹರಿಣಿ ಶಾಸ್ತ್ರಿ ಹಾಗೂ ಎಸ್.ಡಿ ಎ. ಸಿಬ್ಬಂದಿ ಶಿಲ್ಪ ಮತ್ತು ಮೋಹನ್ ಹಾಗೂ ಗ್ರಾಮಾಡಳಿತ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
