ರಾಯಚೂರು | ಆಟೋ ನಿಲ್ದಾಣ ನಿರ್ಮಿಸಿ ಪೊಲೀಸರ ಕಿರುಕುಳ ತಪ್ಪಿಸುವಂತೆ ಆಟೋ ಚಾಲಕರ ಮನವಿ

Date:

Advertisements

ಆಟೋ‌ ನಿಲ್ದಾಣ ನಿರ್ಮಿಸಿ, ಅನಗತ್ಯವಾಗಿ ಪೊಲೀಸರು ನೀಡುತ್ತಿರುವ ಕಿರುಕುಳದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರಾಯಚೂರಿನ ಸಿಂಧನೂರು ತಾಲೂಕು ಶಂಕರನಾಗ್ ನಗರ ಮತ್ತು ಗ್ರಾಮೀಣ ಆಟೋ ಚಾಲಕರ ಸಂಘ-ಟಿಯುಸಿಐ ಸಂಯೋಜಿತ ಸಂಘಟನೆಯಿಂದ ಸಿಂಧನೂರು ತಹಶೀಲ್ದಾರರ ಕಚೇರಿಯಿಂದ ನಗರಸಭೆ ಕಚೇರಿಯ ವರೆಗೆ ಪ್ರತಿಭಟನಾ ರ್ಯಾಲಿ ನಡೆಸಿತು.

“ಸಿಂಧನೂರು ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸಾಲ-ಸೋಲ ಮಾಡಿ ಪ್ಯಾಸೆಂಜೆರ್ ಆಟೋ ತಂದು ದಿನಕ್ಕೆ ನಾವು 200-300 ಹಣ ಸಂಪಾದನೆ ಮಾಡಿ ಉಳಿಸಿ ನಮ್ಮ ಕುಟುಂಬವನ್ನು ನಿರ್ವಹಿಸಲು ಸಾಕಾಗಿ ಹೋಗಿದೆ. ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವ ಅಗತ್ಯ ವಸ್ತುಗಳ ಬೆಲೆಗಳು ನಮ್ಮ ಸಣ್ಣ ಕುಟುಂಬಗಳ ಜೀವ ಹಿಂಡುತ್ತಿವೆ. ಪೈನಾನ್ಸ್‌ನವರ ಕಾಟ, ಖಾಸಗಿ ಸಾಲಗಾರರ ಕಿರುಕುಳ, ಪೊಲೀಸ್ ದೌರ್ಜನ್ಯ ಹಾಗೂ ಕಿರುಕುಳದಿಂದ ಕರುಳಬಳ್ಳಿಗಳನ್ನು ಓದಿಸಿ ವಿದ್ಯಾವಂತರನ್ನಾಗಿ ಮಾಡುವ ಕನಸುಗಳು, ಆಹಾರ, ಆರೋಗ್ಯದಂತಹ ತಾಪತ್ರಯಗಳಿಂದ ಕನಿಷ್ಠ ಜೀವನ ನಡೆಸುವುದೂ ಕಷ್ಟವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪೊಲೀಸರು ಸುಖಾ ಸುಮ್ಮನೆ ಕಿರುಕುಳ ನೀಡುತ್ತಿದ್ದಾರೆ. ಇದರ ವಿರುದ್ಧ ಸಂಬಂಧಪಟ್ಟವರು ಕೂಡಲೇ ಕ್ರಮ ಕೈಗೊಂಡು ನಮ್ಮಂಥ ಬಡಪಾಯಿಗಳನ್ನು ರಕ್ಷಿಸಬೇಕು” ಎಂದು ಮನವಿ ಮಾಡಿದರು.

“ಗಂಗಾವತಿ ಸೇರಿದಂತೆ ಇತರೆ ಪಟ್ಟಣ, ನಗರಗಳಲ್ಲಿ ಆಟೋ ನಿಲ್ದಾಣಗಳನ್ನು ಪುರಸಭೆ, ನಗರಸಭೆಯವರು ವ್ಯವಸ್ಥೆ ಮಾಡಿ ಕೊಟ್ಟಿದ್ದಾರೆ. ಸಿಂಧನೂರ ನಗರದಲ್ಲಿ ನಮಗೊಂದು ಆಟೋ ನಿಲ್ದಾಣವಿಲ್ಲ. ಪೊಲೀಸ್ ನವರು ನಮ್ಮ ಕಷ್ಟ ಕೇಳೋದಿಲ್ಲ. ನಿಲ್ದಾಣ ಹಾಗೂ ರಸ್ತೆ ಪಕ್ಕದಲ್ಲಿ ಆಟೋ ನಿಲ್ಲಿಸಿದ್ದರು ಕೂಡಾ ಕೇಳದೆಯೇ ಸಾಹುಕಾರರ ಕಾರ್ ಬಿಟ್ಟು ಬಡವರ ಆಟೋ ಮೇಲೆಯೇ ಪೊಲೀಸ್ ಲಾಠಿ ಪ್ರಹಾರ ಮಾಡುತ್ತಿದ್ದಾರೆ. ಅಶೋಕ ಭವನ(ಚೆನ್ನಮ್ಮ ಸರ್ಕಲ್)ಹಳೇ ಬಸ್ ನಿಲ್ದಾಣ ಒಳಗಡೆ ಆಟೋ ನಿಲ್ದಾಣವನ್ನು ಮಾಡಬೇಕು. ಈ ವಿಷಯವನ್ನು ನಗರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಿರ್ಣಯ ಮಾಡಬೇಕು. ಅಶೋಕ ಭವನದ ಒಳಗೆ ಬಾರ್ ಶಾಪ್ ಮುಂದೆ ಖಾಸಗಿ ಕಾರ್ ಇತರೆ ವಾಹನಗಳು ಅನಾವಶ್ಯಕ ಪಾರ್ಕಿಂಗ್ ಮಾಡುವುದರಿಂದ ನಮಗೆ ತೊಂದರೆಯಾಗುತ್ತಿದೆ. ಆಟೋ ಹೊರತುಪಡಿಸಿ ಇತರೆ ವಾಹನಗಳ ಪಾರ್ಕಿಂಗ್ ನಿರ್ಬಂಧಿಸಬೇಕು” ಎಂದು ಒತ್ತಾಯಿಸಿದರು.

Advertisements

ಇದನ್ನೂ ಓದಿ: ರಾಯಚೂರು | ಕನಿಷ್ಠ ಬೆಂಬಲಬೆಲೆ ಯೋಜನೆಯಡಿ ಜೋಳ ಖರೀದಿ ಕೇಂದ್ರಕ್ಕೆ ಚಾಲನೆ

ಪ್ರತಿಭಟನೆಯಲ್ಲಿ ಟಿಯುಸಿಐ ರಾಜ್ಯ ಉಪಾಧ್ಯಕ್ಷ ಎಂ. ಗಂಗಾಧರ, ಆರ್‌ಸಿಎಫ್ ನ ಆದೇಶ ನಗನೂರ, ಹೆಚ್. ಆರ್. ಹೊಸಮನಿ, ಹುಲುಗಪ್ಪ ಬಳ್ಳಾರಿ, ಹನುಮಂತ ಪಗಡದಿನ್ನಿ ಕ್ಯಾಂಪ್, ಶಂಕರಪ್ಪ ಎಲೆ ಕೂಡ್ಲಿಗಿ ಕ್ಯಾಂಪ್, ಸಿದ್ದು ಮಲ್ಲಯ್ಯ ಕ್ಯಾಂಪ್, ವೆಂಕಟೇಶರೆಡ್ಡಿ ಮುಳ್ಳೂರು‌, ನಾಗರಾಜ ಮುಳ್ಳೂರು ಇತರರು ಇದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X