ಹಂಪಿ ಉತ್ಸವದಂತೆ ಕನ್ನಡ ನಾಡು, ನುಡಿ, ಕಲೆ ಸಾಹಿತ್ಯ ಸಂಸ್ಕೃತಿಗೆ ಹೆಸರುವಾಸಿಯಾದ ಬೇಲೂರಿನಲ್ಲಿಯೂ ಪ್ರತಿ ವರ್ಷ ಹೊಯ್ಸಳ ಮಹೋತ್ಸವ ಆಚರಿಸಬೇಕು ಎಂದು ಬೇಲೂರಿನ ಶ್ರೀಲಕ್ಷ್ಮೀ ಮಂಗಳವಾದ್ಯ ತಂಡದ ಮುಖಂಡ ನರಸಿಂಹಸ್ವಾಮಿ ಒತ್ತಾಯಿಸಿದರು.
ಹಂಪಿ ಉತ್ಸವ ಕಾರ್ಯಕ್ರಮದಲ್ಲಿ ಬೇಲೂರಿನ ಶ್ರೀ ಲಕ್ಷ್ಮೀ ಮಂಗಳವಾದ್ಯ ತಂಡದ ವತಿಯಿಂದ ಸ್ಯಾಕ್ಟೋಫೋನ್ ವಾದನ ಕಾರ್ಯಕ್ರಮ, ಬಸವಣ್ಣ ವೇದಿಕೆಯಲ್ಲಿ ಸೋಮವಾರ ಯಶಸ್ವಿಯಾಗಿ ಜರುಗಿತು. ಜಿಲ್ಲೆಯಿಂದ ಹಂಪಿ ಉತ್ಸವ ಕಾರ್ಯಕ್ರಮದಲ್ಲಿ ಏಕೈಕ ಮಂಗಳವಾದ್ಯ ತಂಡ ಭಾಗವಹಿಸಿರುವುದು ವಿಶೇಷವಾಗಿತ್ತು. ಯಶಸ್ವಿಯಾಗಿ ಕಾರ್ಯಕ್ರಮ ನಡೆಸಿಕೊಟ್ಟ ತಂಡದ ಮುಖ್ಯಸ್ಥ ನರಸಿಂಹಸ್ವಾಮಿ ಮತ್ತು ತಂಡದವರಿಗೆ ಕನ್ನಡ ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್ ಅಭಿನಂದಿಸಿ ಗೌರವಿಸಿ ಬೀಳ್ಕೊಟ್ಟರು.
ಇದನ್ನೂ ಓದಿದ್ದೀರಾ?ಹಾಸನ | ರಾಜ್ಯ ಸರ್ಕಾರ 9 ಹೊಸ ವಿಶ್ವವಿದ್ಯಾಲಯ ಮುಚ್ಚುವ ತೀರ್ಮಾನ ಹಿಂಪಡೆಯುವಂತೆ ಎಸ್‌ಎಫ್‌ಐ ಪ್ರತಿಭಟನೆ
ಈ ಸಂದರ್ಭದಲ್ಲಿ ಬಿ.ಎಂ. ಸಂತೋಷ್, ಇಲಾಖೆಯ ಅಧಿಕಾರಿಗಳು, ಕಲಾವಿದರು ಹಾಗೂ ಇತರರು ಭಾಗವಹಿಸಿದ್ದರು.
