ಬಿಎಸ್‌ಪಿ ನಾಯಕಿ ಮಾಯಾವತಿ ಅವರು ತಮ್ಮ ಸೋದರಳಿಯ ಆಕಾಶ್ ಆನಂದ್ ಅವರನ್ನು ಮಾಯಾವತಿಯವರ ರಾಜಕೀಯ ಉತ್ತರಾಧಿಕಾರಿ ಮತ್ತು ಬಿಎಸ್‌ಪಿಯ ರಾಷ್ಟ್ರೀಯ ಸಂಯೋಜಕ ಜವಾಬ್ದಾರಿಗಳಿಂದ ಬಿಡುಗಡೆ ಮಾಡಿದರು. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಆಕಾಶ್ ಆನಂದ್, “ಮಾಯಾವತಿಯವರ ಎಲ್ಲಾ ನಿರ್ಧಾರವನ್ನು ಗೌರವಿಸುತ್ತೇನೆ” ಎಂದು ಹೇಳಿದ್ದಾರೆ.
ದಿಢೀರ್ ಆಗಿ ಮಾಯಾವತಿ ಕೈಗೊಂಡಿರುವ ನಿರ್ಧಾರವು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಒಂದೆಡೆ ಕಾಂಗ್ರೆಸ್ ಅಸಮಾಧಾನಗೊಂಡಿರುವ ಬಿಎಸ್‌ಪಿ ಕಾರ್ಯಕರ್ತರನ್ನು ತನ್ನೆಡೆ ಸೆಳೆಯುವ ಯತ್ನ ಮಾಡುತ್ತಿದೆ. ಇನ್ನು ಎಸ್‌ಪಿ ಸೇರಿ ಕೆಲವು ಪಕ್ಷದ ನಾಯಕರುಗಳು ಬಿಎಸ್‌ಪಿ ನಾಯಕಿ ಬಿಜೆಪಿಯ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ಸಾಮಾಜಿಕ ಚಳವಳಿಯ ದಮನ ಮಾಡಿದ ಮಾಯಾವತಿಯ ಕತ್ತು ಹಿಸುಕುವ ಸಮಯ ಬಂದಿದೆ: ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಇವೆಲ್ಲವುದರ ನಡುವೆ ಆಕಾಶ್ ಆನಂದ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “ನಾನು ಪರಮಪೂಜ್ಯ, ಆದರಣೀಯ ಸಹೋದರಿ ಮಾಯಾವತಿ ಅವರ ಕಾರ್ಯಕರ್ತನಾಗಿದ್ದೇನೆ. ಅವರ ನೇತೃತ್ವದಲ್ಲಿ ನಾನು ತ್ಯಾಗ, ನಿಷ್ಠೆ ಮತ್ತು ಸಮರ್ಪಣೆಯನ್ನು ಎಂದಿಗೂ ಮರೆಯದ ಪಾಠವನ್ನು ಕಲಿತ್ತಿದ್ದೇನೆ. ಇವೆಲ್ಲವೂ ನನಗೆ ಬರೀ ವಿಚಾರವಲ್ಲ, ಬದಲಾಗಿ ಜೀವನದ ಉದ್ದೇಶವಾಗಿದೆ. ಗೌರವಾನ್ವಿತ ಸಹೋದರಿ ಅವರ ಎಲ್ಲಾ ನಿರ್ಧಾರವು ನನಗೆ ಪ್ರೀತಿಯ ರೇಖೆಗೆ ಸಮವಾಗಿದೆ. ನಾನು ಅವರ ಎಲ್ಲಾ ನಿರ್ಧಾರವನ್ನು ಗೌರವಿಸುತ್ತೇನೆ. ಆ ನಿರ್ಧಾರದೊಂದಿಗೆ ನಾನು ನಿಲ್ಲುತ್ತೇನೆ” ಎಂದು ತಿಳಿಸಿದ್ದಾರೆ.
मैं परमपूज्य आदरणीय बहन कु. मायावती जी का कैडर हूं, और उनके नेतृत्व में मैने त्याग, निष्ठा और समर्पण के कभी ना भूलने वाले सबक सीखे हैं, ये सब मेरे लिए केवल एक विचार नहीं, बल्कि जीवन का उद्देश्य हैं। आदरणीय बहन जी का हर फैसला मेरे लिए पत्थर की लकीर के समान है, मैं उनके हर फैसले का…
— Akash Anand (@AnandAkash_BSP) March 3, 2025
“ಮಾಯಾವತಿಯವರು ನನ್ನನ್ನು ಪಕ್ಷದ ಎಲ್ಲಾ ಸ್ಥಾನದಿಂದ ಮುಕ್ತಗೊಳಿಸಿರುವುದು ನನಗೆ ವೈಯಕ್ತಿಕವಾಗಿ ಭಾವಾನಾತ್ಮಕ ವಿಚಾರವಾಗಿದೆ. ಆದರೆ ಮುಂದೆ ಚುನಾವಣೆ ಬರಲಿದೆ. ಪರೀಕ್ಷೆ ಕಠಿಣವಾಗಿದೆ ಮತ್ತು ಹೋರಾಟ ದೀರ್ಘವಾಗಿದೆ” ಎಂದು ಆಕಾಶ್ ಎಕ್ಸ್‌ನಲ್ಲಿ ಹಿಂದಿಯಲ್ಲಿ ಬರೆದುಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಆಕಾಶ್ ಆನಂದ್ ವಜಾ | ಕಾಂಗ್ರೆಸ್‌ಗೆ ಸೇರಿ; ಬಿಎಸ್‌ಪಿ ಕಾರ್ಯಕರ್ತರಿಗೆ ಉದಿತ್ ರಾಜ್ ಆಹ್ವಾನ
“ಇಂತಹ ಕಠಿಣ ಸಂದರ್ಭದಲ್ಲಿ ದೈರ್ಯ ಮತ್ತು ಸಂಕಲ್ಪ ಮುಖ್ಯವಾಗುತ್ತದೆ. ಬಹುಜನದ ಓರ್ವ ಕಾರ್ಯಕರ್ತನಾಗಿ ನಾನು ನಿಷ್ಠೆಯಿಂದ ಎಲ್ಲಾ ಕೆಲಸವನ್ನು ಮಾಡುತ್ತೇನೆ. ನನ್ನ ಕೊನೆಯ ಉಸಿರು ಇರುವವರೆಗೂ ನನ್ನ ಸಮಾಜದ ಹಕ್ಕಿಗಾಗಿ ಹೋರಾಟ ನಡೆಸುತ್ತಲೇ ಇರುತ್ತೇನೆ” ಎಂದಿದ್ದಾರೆ.
“ಬಿಎಸ್‌ಪಿಯ ಈ ನಿರ್ಧಾರದಿಂದ ನನ್ನ ರಾಜಕೀಯ ಜೀವನ ಅಂತ್ಯವಾಯಿತು ಎಂದು ಕೆಲವು ವಿರೋಧ ಪಕ್ಷದ ನಾಯಕರು ಅಂದುಕೊಂಡಿದ್ದಾರೆ. ಆದರೆ ಬಹುಜನ ಚಳುವಳಿ ಯಾವುದೇ ರಾಜಕೀಯ ಜೀವನವಲ್ಲ, ಬದಲಾಗಿ ಕೋಟ್ಯಾಂತರ ದಲಿತರು, ಶೋಷಿತರು, ವಂಚಿತರು ಮತ್ತು ಬಡವರ ಆತ್ಮ ಸಮ್ಮಾನಕ್ಕಾಗಿ, ಸ್ವಾಭಿಮಾನಕ್ಕಾಗಿ ಮಾಡುವ ಹೋರಾಟ ಎಂದು ಅವರು ತಿಳಿಯಬೇಕು” ಎಂದು ಹೇಳಿದ್ದಾರೆ.
“ಇದು ಒಂದು ವಿಚಾರವಾಗಿದೆ, ಆಂದೋಲನವಾಗಿದೆ, ಇದನ್ನು ನಾವು ಧಮನಿಸಲು ಸಾಧ್ಯವಾಗುವುದಿಲ್ಲ. ಈ ಜ್ವಾಲೆಯು ಉರಿಯುತ್ತಿರುವಂತೆಯೇ ನೋಡಿಕೊಳ್ಳಲು ಮತ್ತು ಈ ಹೋರಾಟಕ್ಕಾಗಿ ತಮ್ಮನ್ನು ಮುಡಿಪಾಗಿಡಲು ಲಕ್ಷಾಂತರು ಜನರು ಇದ್ದಾರೆ” ಎಂದು ಆಕಾಶ್ ಆನಂದ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
