ರಾಯಚೂರು ನಗರದ ರೈಲ್ವೆ ಸ್ಟೇಷನ್ ಬಳಿಯ ರಾಗಿಮಾನಗಡ್ಡ ಬಡಾವಣೆಯಲ್ಲಿ ಅಕ್ರಮವಾಗಿ ಕಲಬೆರಕೆ ಸೇಂದಿ ಮಾರಾಟ ಮಾಡುತ್ತಿದ್ದ ಮನೆಯ ಮೇಲೆ ಅಬಕಾರಿ ಪೊಲೀಸರು ದಾಳಿ ಮಾಡಿ 60 ಲೀಟರ್ ಸಿ.ಎಚ್ ಪೌಡರ್ ಮಿಶ್ರಿತ ಸೇಂದಿ ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ನಗರದ ರಾಮಲಮ್ಮ ಮಾರೆಪ್ಪ ಮನೆಯಲ್ಲಿ ದಾಳಿ ಮಾಡಿ ರಾಮಳಮ್ಮನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇದನ್ನೂ ಓದಿರಾಯಚೂರು | ಮಾ.6 ರಂದು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ
ಸದ್ಯ ಆರೋಪಿಗೆ ಬಿಎನ್ ಎಸ್ ಎಸ್ ಕಲಂ 35(3) ಪ್ರಕಾರ ನೋಟೀಸ್ ನೀಡಲಾಗಿದೆ. ಆರೋಪಿತಳ ಹಾಗೂ ಮನೆ ಮಾಲೀಕರ ವಿರುದ್ದ ಅಬಕಾರಿ ನಿರೀಕ್ಷಕರು ಉಪ ವಿಭಾಗ ರಾಯಚೂರು ರವರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.
