ರಾಯಚೂರು ನಗರದ ಆಶಾಪುರ ರಸ್ತೆಯ ರಾಜಮಾತ ದೇವಸ್ಥಾನದ ಬಳಿಯ ಪದ್ಮಾವತಿ ಕಾಲೊನಿಯ ಗುಡ್ಡದ ಮೇಲೆ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ್ದು ಅನೇಕ ಗಿಡಮರಗಳು ಸುಟ್ಟು ಕರಕಲಾಗಿವೆ.
ಗುಡ್ಡದ ಕೆಳಗಡೆಯೇ ಆಶ್ರಯ ಮನೆಗಳಿದ್ದು ಅದೃಷ್ವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಸಾರ್ವಜನಿಕರ ಮಾಹಿತಿ ಮೇರೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ. ಗುಡ್ಡದ ಮೇಲೆ ಅಗ್ನಿಶಾಮಕ ದಳದ ವಾಹನ ಹೋಗದ ಕಾರಣ ದೂರದಿಂದಲೇ ಬೆಂಕಿ ಆರಿಸಿದ್ದಾರೆ.
ಯಾವುದೇ ಮನೆಗಳಿಗೆ ಕಿಡಿ ಹೊತ್ತಿಕೊಳ್ಳದಂತೆ ಮುಂಜಾಗ್ರತಾ ಕ್ರಮವಾಗಿ ಮನೆಗಳ ಸುತ್ತಲೂ ನೀರು ಸಿಂಪಡಿಸಿ ಬೆಂಕಿ ಹರಡದಂತೆ ತಡೆದರು.
ಇದನ್ನೂ ಓದಿ: ರಾಯಚೂರು | ಎರಡು ಬೈಕ್ ನಡುವೆ ಮುಖಾಮುಖಿ ಡಿಕ್ಕಿ; ಮೂವರ ಸಾವು
ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸರು ಸಾಥ್ ನೀಡಿ ರಕ್ಷಣಾ ಕಾರ್ಯಚರಣೆ ಮಾಡಿದರು.
