ಬೆಳಗಾವಿ ನಗರದ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಅಳವಡಿಸಿದ ಜಾಮರ್‌ನ ಮಿತಿ ಕಡಿಮೆಗೊಳಿಸಿ, ಸುತ್ತಲಿನ ವಾಸಸ್ಥಳದ ಜನರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು’ ಎಂದು ಆಗ್ರಹಿಸಿ, ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಗ್ರಾಮಸ್ಥರು ಕಾರಾಗೃಹದ ಮುಂದಿನ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಬೆಳಗಾವಿಯಿಂದ ಬಾಚಿಗೆ ಹೋಗುವಾಗ ಮುಖ್ಯರಸ್ತೆಗೆ ಹೊಂದಿಕೊಂಡೇ ಕಾರಾಗೃಹವಿದೆ. ಅಲ್ಲಿ ಮೊಬೈಲ್ ಬಳಕೆ ತಡೆಯುವ ಸಲುವಾಗಿ ಜಾಮರ್ ಅಳವಡಿಸಲಾಗಿದೆ. ಆದರೆ, ಕಾರಾಗೃಹದ ಸುತ್ತಲಿನ ಜನವಸತಿಗಳ ಮೇಲೂ ಅದು ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಗ್ರಾಮ ಪಂಚಾಯಿತಿ ಕಟ್ಟಡ, ಶಾಲೆ ಮತ್ತು ಬ್ಯಾಂಕ್‌ನಲ್ಲೂ ಆನ್‌ಲೈನ್ ಕೆಲಸಗಳಿಗೆ ತೊಡಕಾಗುತ್ತಿದೆ’ ಎಂದು ದೂರಿದರು.
ಕಾರಾಗೃಹದಲ್ಲಿ ಅಳವಡಿಸಿದ ಜಾಮರ್‌ನಿಂದಾಗಿ ನಮ್ಮ ಮೊಬೈಲ್ ಫೋನ್‌ಗೆ ನೆಟ್‌ವರ್ಕ್ ಸಿಗುತ್ತಿಲ್ಲ. ಇದರಿಂದಾಗಿ ಸಂವಹನಕ್ಕೆ ತೊಂದರೆಯಾಗಿದೆ. ಆದರೆ, ಕಾರಾಗೃಹದ ಅಧಿಕಾರಿಗಳು ನಮ್ಮ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.