(ಮುಂದುವರಿದ ಭಾಗ..) ಬಿ.ಕೆ.ಹರಿಪ್ರಸಾದ್ 1979ರಲ್ಲಿ ದೆಹಲಿಗೆ ಬಂದವರು. ನಾಲ್ಕು ದಶಕಗಳಿಗೂ ಮೀರಿ ದೆಹಲಿಯ ರಾಜಕಾರಣದಲ್ಲಿದ್ದವರು. ಕಾಂಗ್ರೆಸ್ ಪಕ್ಷದ ಒಳ ಹೊರಗನ್ನು ಬಲು ಸಮೀಪದಿಂದ ಬಲ್ಲವರು. ಅದ್ಭುತ ವಾಗ್ಮಿಯಲ್ಲದಿದ್ದರೂ ತೂಕದ ಮಾತಾಡುವವರು. ದೆಹಲಿಯನ್ನು ಬಲ್ಲವರು. ಯುವ ಕಾಂಗ್ರೆಸ್ ಅಧ್ಯಕ್ಷರಾಗಿ, ಎಐಸಿಸಿ ಜಂಟಿ ಕಾರ್ಯದರ್ಶಿಯಾಗಿ, ಪ್ರಧಾನಕಾರ್ಯದರ್ಶಿಯಾಗಿ ಪಕ್ಷಕ್ಕಾಗಿ ಹೆಚ್ಚಾಗಿ ತೆರೆಮರೆಯಲ್ಲಿ ದುಡಿದವರು. ಈ ಕಾರಣಕ್ಕಾಗಿ ಉತ್ತರ ಭಾರತವನ್ನು ಅಂಗೈ ಗೆರೆಗಳಂತೆ ಅರಿತವರು. ಎಐಸಿಸಿಯ ಹಲವು ಅಧ್ಯಕ್ಷರ ಸನಿಹದ ಸಂಪರ್ಕ ಹೊಂದಿದ್ದವರು. ಹಲವು ಅವಧಿಗಳ ಕಾಲ ರಾಜ್ಯಸಭಾ ಸದಸ್ಯರಾಗಿ ಬಹುಮುಖ್ಯ ಸ್ಥಾಯೀ…

ಡಿ ಉಮಾಪತಿ
ಹಿರಿಯ ಪತ್ರಕರ್ತರು