ದಾವಣಗೆರೆ ಜಿಲ್ಲೆ, ಹರಿಹರ ನಗರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ 50 ವಾಣಿಜ್ಯ ಮಳಿಗೆಗಳನ್ನು ಅವಧಿ ಮುಗಿದರೂ ಮರು ಹರಾಜು ಪ್ರಕ್ರಿಯೆ ನಡೆಸದಿರುವ ಕುರಿತು ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಮಾನ್ಯ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಡಾ|| ಕೆ ಗೋವಿಂದರಾಜ್ ರವರಿಗೆ ವಿಧಾನಸೌಧದಲ್ಲಿ ಮನವಿ ನೀಡಲಾಯಿತು.
“ಹರಿಹರದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಿರ್ಮಿಸಿರುವ 50 ವಾಣಿಜ್ಯ ಮಳಿಗೆಗಳನ್ನು ಕರಾರು ಅವಧಿ ಮುಗಿದು ಐದು ವರ್ಷವಾದರೂ ನಿಯಮಾನುಸಾರ ಮರು ಹರಾಜು ಪ್ರಕ್ರಿಯೆ ನಡೆಸಿಲ್ಲ. ಮತ್ತು ಪರವಾನಿಗೆಗಳನ್ನು ನಗರಸಭೆಯಿಂದ ನವೀಕರಿಸಿಕೊಳ್ಳದೆ ಅನದಿಕೃತ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಕ್ರೀಡಾಂಗಣದ ಮಳಿಗೆಗಳಲ್ಲಿ ಮಧ್ಯದ ಅಂಗಡಿ ನಡೆಸುತ್ತಿದ್ದಾರೆ” ಎಂದು ಆರೋಪಿಸಿದರು.
ಈ ಬಗ್ಗೆ ಮಾಹಿತಿ ನೀಡಿದ ಜಯಕರ್ನಾಟಕ ಸಂಘಟನೆ ಮುಖಂಡ ಗೋವಿಂದ “ಮರು ಹರಾಜು ನಡೆಸುವಂತೆ ಜಯಕರ್ನಾಟಕ ಸಂಘಟನೆಯಿಂದ ಹರಿಹರದಲ್ಲಿ 152 ದಿನಗಳ ಕಾಲ ನಿರಂತರ ಧರಣಿ ಸತ್ಯಾಗ್ರಹ ಮಾಡುತ್ತಿದ್ದೇವೆ. ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಮಧ್ಯೆ ಪ್ರವೇಶಿಸಿ ಕ್ರೀಡಾಂಗಣದ ಆವರಣದಲ್ಲಿರುವ ಮಧ್ಯದ ಅಂಗಡಿಯನ್ನು ತೆರವುಗೊಳಿಸಿ, ನಿಯಮಾನುಸಾರ ಎಲ್ಲಾ ಮಳೆಗೆಗಳನ್ನು ಮರು ಹರಾಜು ಪ್ರಕ್ರಿಯೆ ನಡೆಸುವಂತೆ ಮನವಿ ನೀಡಿ ಒತ್ತಾಯಿಸಲಾಯಿತು” ಎಂದು ಮಾಹಿತಿ ನೀಡಿದರು.
“ಇದಕ್ಕೆ ಸ್ಪಂದಿಸಿದ ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಡಾ|| ಕೆ ಗೋವಿಂದ್ ರಾಜ್ ರವರು ತಕ್ಷಣವೇ ಸಂಬಂಧಪಟ್ಟ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರಾಜ್ಯ ಆಯುಕ್ತರಾದ ಆರ್ ಚೇತನ್ ರವರನ್ನು ಸ್ಥಳಕ್ಕೆ ಕರೆಯಿಸಿ ಕೂಡಲೇ ಮಧ್ಯದ ಅಂಗಡಿಯನ್ನ ತೆರೆವುಗೊಳಿಸಲು ಸೂಚನೆ ನೀಡಿದರು. ನಿಯಮನುಸಾರ ಹರಾಜು ಪ್ರಕ್ರಿಯೆ ನಡೆಸುವಂತೆ ಸೂಚನೆ ನೀಡಿದ್ದಾರೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಹೊಯ್ಸಳ ವಾಹನದ ಕೀ ಕಸಿದು ಸಚಿವರ ಬೆಂಬಲಿಗರ ಪುಂಡಾಟ.
ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆ ರಾಜ್ಯ ಅಧ್ಯಕ್ಷರು ಡಾ||ಬಿ ಎನ್ ಜಗದೀಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ರಜಪೂತ್, ಪ್ರಧಾನ ಕಾರ್ಯದರ್ಶಿ ರಾಮಚಂದ್ರಯ್ಯ, ಕಲಬುರ್ಗಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್ ಸಾರವಾಡ, ಹರಿಹರ ತಾಲೂಕು ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಸಿ ಹೆಚ್, ಹಾಗೂ ಇನ್ನಿತರರು ಹಾಜರಿದ್ದರು.