ರಸ್ತೆಯ ಮೇಲೆ ಸಣ್ಣ ಸಣ್ಣ ಗುಂಡಿಗಳನ್ನು ಸರಿಪಡಿಸಲು ಜೆಸಿಬಿ ಮೂಲಕ ಕೆದರಿದ ಪರಿಣಾಮ ಏರಿಳಿತ ಆಗಿದ್ದು ವಾಹನ ಸವಾರರಿಗೆ ಅಪಾಯ ತಂದೊಡ್ಡಿವೆ. ಇದರಿಂದ ವಾಹನ ಸವಾರರು ಜೀವ ಭಯದಲ್ಲೇ ಸಂಚಾರ ಮಾಡುತ್ತಿದ್ದಾರೆ.
ಹಾವೇರಿ ಹಾನಗಲ್ ಮಾರ್ಗದಲ್ಲಿರುವ ರಾಜ್ಯ ಹೆದ್ದಾರಿಯಲ್ಲಿ ಬೈಪಾಸ್ ದಾಟಿದ ಮೇಲೆ ಗೌರಾಪೂರದವರೆಗೂ ಅಲ್ಲಲ್ಲಿ ಸಣ್ಣಪುಟ್ಟ ಗುಂಡಿಗಳು ಬಿದ್ದಿವೆ. ಇವು ವಾಹನ ಸವಾರರಿಗೆ ಅದರಲ್ಲೂ ಬೈಕ್ ಸವಾರರಿಗೆ ಸಾಕಷ್ಟು ಅಪಾಯವನ್ನು ತಂದೊಡ್ದುತ್ತಿವೆ. ಈ ಗುಂಡಿಗಳನ್ನು ಮುಚ್ಚಿ ರಸ್ತೆ ಸರಿಪಡಿಸಿ ಸುರಕ್ಷಿತ ರಸ್ತೆ ನಿರ್ಮಾಣ ಮಾಡುವಂತೆ ಜನರು ಒತ್ತಾಯಿಸುತ್ತಿದ್ದಾರೆ.
ಸಣ್ಣ ಸಣ್ಣ ಗುಂಡಿಗಳನ್ನು ರಿಪೇರಿ ಮಾಡಲು ಜೆಸಿಬಿಗಳಿಂದ ಕೆದರಿ ದೊಡ್ಡ ಗುಂಡಿಗಳಾಗಿ ಮಾರ್ಪಟ್ಟಿವೆ. ಈ ರೀತಿ ಮಾಡಿ ತಿಂಗಳು ಕಳೆದರೂ ಸಂಬಂಧಿಸಿದ ಇಲಾಖೆಯವರು ಗುತ್ತಿಗೆದಾರರು ಇದನ್ನು ಸರಿಪಡಿಸಲು ಮುಂದಾಗಿಲ್ಲ.
ರಸ್ತೆಯಲ್ಲಿ ದೊಡ್ಡ ಗುಂಡಿಗಳಿರುವುದು ವಾಹನ ಸವಾರರಿಗೆ ಅದರಲ್ಲೂ ದ್ವಿ ಚಕ್ರವಾಹನ ಸವಾರರಿಗೆ ಸಾಕಷ್ಟು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಈ ಗುಂಡಿಗಳನ್ನು ತಪ್ಪಿಸಲು ಒಂದೇ ಬದಿ ವಾಹನ ಓಡಿಸುವ ಒತ್ತಡದಲ್ಲಿ ಎದುರಿಗೆ ಬರುವ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸುವ ಸಾಧ್ಯತೆಗಳು ಹೆಚ್ಚು.
ಬೈಕ್ ಸವಾರರು ತಗ್ಗು ಗುಂಡಿಗಳನ್ನು ತಪ್ಪಿಸಿ ಗಾಡಿ ಹೊಡೆಯುವಾಗ ಬ್ಯಾಲೆನ್ಸ್ ಕಳೆದುಕೊಂಡು ಬೈಕುಗಳು ಬಿದ್ದು ಅಪಘಾತಕ್ಕೀಡಾಗುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಜೀವ ಕೈಯಲ್ಲಿ ಹಿಡಿದುಕೊಂಡು ಭೀತಿಯಿಂದಲೇ ಜನರು ವಾಹನ ಓಡಿಸುತ್ತಿದ್ದಾರೆ.
ಬೈಕ್ ಸವಾರ ಮಾತನಾಡಿ, “ಗುಂಡಿಗಳನ್ನು ತಪ್ಪಿಸಲು ಹೋಗಿ ಬೈಕುಗಳು ಸ್ಲಿಪ್ ಆಗಿ ಬೀಳುತ್ತೀವೆ. ಬೇಗ ದುರಸ್ಥಿ ಮಾಡಿದರೆ ಬೈಕ್ ಸವಾರರು ಬೀಳುವುದನ್ನು ತಪ್ಪಿಸಬಹುದು” ಎಂದು ಹೇಳುದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಗ್ಯಾರಂಟಿ ವೈಫಲ್ಯ ಆರೋಪ; ಜೆಡಿಎಸ್ ಪ್ರತಿಭಟನೆ
ಈ ಕುರಿತು ಈದಿನ.ಕಾಮ್ ನೊಂದಿಗೆ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, “ಗುಂಡಿಗಳನ್ನು ಸರಿಪಡಿಸಲು ಜೆಸಿಬಿ ಮೂಲಕ ಕೆದರಿ ಅನೇಕ ತಿಂಗಳುಗಳಾದರೂ ದುರಸ್ತಿ ಕೈಗೊಂಡಿರುವುದಿಲ್ಲ. ಬೈಕ್ ಸವಾರರಿಗೆ ತೊಂದರೆ ಆಗುತ್ತಿವೆ. ಇಲ್ಲಿಯ ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಗುಂಡಿಗಳನ್ನು ಕೂಡಲೇ ದುರಸ್ತಿಗೊಳಿಸಿ ಅಪಘಾತ, ಜೀವಹಾನಿಯಾಗುವುದನ್ನು ತಪ್ಪಿಸಲು ಮುಂದಾಗಬೇಕು” ಎಂದು ಆಗ್ರಹಿಸಿದರು.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.