ರಾಮದುರ್ಗ, ಮಾರ್ಚ್ 6: ಸಾಲಬಾಧೆಯಿಂದ ಬಳಲುತ್ತಿದ್ದ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಮದುರ್ಗ ತಾಲ್ಲೂಕಿನ ಚನ್ನಾಪೂರ ಗ್ರಾಮದಲ್ಲಿ ಗುರುವಾರ ನಡೆದಿದೆ.
ಮೃತರನ್ನು ಬಸವರಾಜ ಮಲ್ಲಪ್ಪ ಸುರೇಬಾನ (45) ಎಂದು ಗುರುತಿಸಲಾಗಿದೆ. ಅವರು ತೀವ್ರ ಆರ್ಥಿಕ ಸಂಕಷ್ಟದಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಮೃತನ ಪತ್ನಿಯ ದೂರಿನ ಪ್ರಕಾರ, ಸಾರಾಯಿ ಸೇವನೆಯ ಅಮಲಿನಲ್ಲಿ ಮನೆಯಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ಬ್ಯಾಂಕ್ ಆಫ್ ಬರೋಡಾ, ಬೆಳಗಾವಿ ಶಾಖೆ – ₹1.90 ಲಕ್ಷ
ಗ್ರಾಮೀಣಾಭಿವೃದ್ಧಿ ಸಂಘ – ₹2.40 ಲಕ್ಷ
ಕೆವಿಜಿ ಬ್ಯಾಂಕ್, ಬಟಕುರ್ಕಿ – ₹70,ಸಾವಿರ
ಒಟ್ಟು ₹5 ಲಕ್ಷಕ್ಕಿಂತ ಹೆಚ್ಚು ಸಾಲ ಮಾಡಿದ್ದರು. ಹೈನುಗಾರಿಕೆ ಮತ್ತು ಬೋರ್‌ವೆಲ್ ಕೊರೆಸಲು ಈ ಸಾಲವನ್ನು ಪಡೆದಿದ್ದರು ಎನ್ನಲಾಗಿದೆ.
ಘಟನೆಯ ಕುರಿತು ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳೀಯ ರೈತರ ಒತ್ತಾಯ: ಈ ರೀತಿಯ ಘಟನೆಗಳು ಪುನರಾವರ್ತನೆಯಾಗದಂತೆ ಸರ್ಕಾರ ತುರ್ತು ಪರಿಹಾರ ಕೈಗೊಳ್ಳಬೇಕು ಎಂದು ಸ್ಥಳೀಯ ರೈತರು ಆಗ್ರಹಿಸಿದ್ದಾರೆ