- ಆರೋಪಿಯನ್ನು ಬಂಧಿಸಿದ ಬಾಣಸವಾಡಿ ಪೊಲೀಸರು
- ನಿರ್ಜನ ಪ್ರದೇಶದಲ್ಲಿ ಕರೆದುಕೊಂಡು ಹೋಗಿ ಚಾಕು ತೋರಿಸಿ ಸುಲಿಗೆ
ರಾಜ್ಯ ರಾಜಧಾನಿ ಬೆಂಗಳೂರಿಗೆ ಹಲವಾರು ಜನ ದುಡಿಮೆಗಾಗಿ ಬಂದಿದ್ದು, ಓಲಾ, ಉಬರ್ ಚಾಲಕರಾಗಿ ಜೀವನ ಸಾಗಿಸುತ್ತಿದ್ದಾರೆ. ಇಲ್ಲೊಬ್ಬ ಖತರ್ನಾಕ್ ಕಳ್ಳ ಪ್ರಯಾಣಿಕನ ಸೋಗು ಹಾಕಿಕೊಂಡು ಕ್ಯಾಬ್ ಬುಕ್ ಮಾಡಿ ಸ್ವಲ್ಪ ದೂರ ತೆರಳಿದ ನಂತರ ನಿರ್ಜನ ಪ್ರದೇಶದಲ್ಲಿ ಚಾಕು ತೋರಿಸಿ ಸುಲಿಗೆ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ವಿನಯ್ ಬಂಧಿತ ಆರೋಪಿ. ಬಾಣಸವಾಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈತನು ಪ್ರಯಾಣಿಕರ ರೀತಿ ಓಲಾ ಅಥವಾ ಉಬರ್ ಕ್ಯಾಬ್ ಬುಕ್ ಮಾಡಿ ಸ್ವಲ್ಪ ದೂರದ ವರೆಗೆ ತೆರಳಿ ನಂತರ ಯಾರು ಇಲ್ಲದ ನಿರ್ಜನ ಪ್ರದೇಶದಲ್ಲಿ ಕರೆದುಕೊಂಡು ಹೋಗಿ ಚಾಕು ತೋರಿಸಿ ಸುಲಿಗೆ ಮಾಡುತ್ತಿದ್ದನು.
ಈ ಸುದ್ದಿ ಓದಿದ್ದಾರೆ? ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಡ್ರೋನ್ ಕ್ಯಾಮರಾ ಬಳಕೆ : ಗೃಹ ಸಚಿವ ಜಿ ಪರಮೇಶ್ವರ್
ಈ ವೇಳೆ ಪೊಲೀಸರಿಗೆ ದೂರು ಕೊಡದಂತೆ ಹೆದರಿಸುತ್ತಿದ್ದನು. ಎಚ್ಎಎಲ್, ಬಾಣಸವಾಡಿ, ಹೈ ಗ್ರೌಂಡ್ಸ್ ಹಾಗೂ ಎಂ.ಜಿ ರೋಡ್ ಭಾಗಗಳಿಂದ ಕ್ಯಾಬ್ ಬುಕ್ ಮಾಡುತ್ತಿದ್ದನು. ನಿರ್ಜನ ಪ್ರದೇಶಕ್ಕೆ ತೆರಳಿದ ನಂತರ ಕ್ಯಾಬ್ ಚಾಲಕನಿಗೆ ಬೆದರಿಕೆ ಹಾಕಿ ಅವರ ಕುಟುಂಬಸ್ಥರಿಗೆ ಕರೆ ಮಾಡಿಸಿ, ಹುಷಾರಿಲ್ಲ ಆಸ್ಪತ್ರೆಗೆ ಸೇರಿದ್ದೀನಿ, ಹಣ ಹಾಕಿ ಎಂದು ಕೇಳಿಸುತ್ತಿದ್ದನು. ಪೊಲೀಸ್ ವಿಚಾರಣೆ ಬಳಿಕ ಮತ್ತೆ ನಾಲ್ಕು ಸುಲಿಗೆ ಪ್ರಕರಣಗಳು ಬೆಳಕಿಗೆ ಬಂದಿದೆ.