ವಿಜಯಪುರ ಜಿಲ್ಲೆಯಲ್ಲಿ ಅದ್ದೂರಿಯಾಗಿ ಜರುಗುವ ಕೃಷ್ಣಾ ನದಿ ತಟದ ಚಂದ್ರಗಿರಿ ಚಂದ್ರಮ್ಮದೇವಿ ಜಾತ್ರಾ ಮಾಹೋತ್ಸವ ಆರಂಭವಾಗಿ ಇಡೀ ಪ್ರದೇಶ ಉಘೇ ಉಘೇ ಎಂದು ಪ್ರತಿಧ್ವನಿಸುತ್ತಿದೆ.
ಕಳೆದ ಎರಡು ದಿನಗಳಿಂದಲೇ ಮಹಾರಾಷ್ಟ್ರ ಸೇರಿದಂತೆ ರಾಜ್ಯದ ಸಹಸ್ರಾರು ಭಕ್ತರು ದೇವಿಯ ದರ್ಶನಕ್ಕೆ ಸಾಲುಗಟ್ಟಿ ನಿಂತು ಪೂಜೆ ಪುನಸ್ಕಾರ ಕೊಟ್ಟು ಕೃಪೆಗೆ ಪಾತ್ರರಾಗುತ್ತಿದ್ದಾರೆ. ಕಿಲೋ ಮೀಟರ್‌ಗಟ್ಟಲೆ ಸಾಲುಗಟ್ಟಿ ನಿಂತಿದ್ದ ಭಕ್ತರನ್ನು ಸಂಭಾಳಿಸಲು ಪೊಲೀಸ್ ಇಲಾಖೆ ಹಾಗೂ ಸ್ವಯಂ ಕಾರ್ಯಕರ್ತರ ತಂಡಗಳು ಟೊಂಕ ಕಟ್ಟಿ ನಿಂತಿವೆ. ಸುಮಾರು 20 ಸಾವಿರಕ್ಕೂ ಅಧಿಕ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ನಾಳೆ ಹಾಗೂ ನಾಡಿದ್ದು ಕೂಡ ಭಕ್ತರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ ಎನ್ನಲಾಗಿದೆ.
ಇದನ್ನೂ ಓದಿ: ವಿಜಯಪುರ | ಗೋಟಖಿಂಡ್ಕಿ ಗ್ರಾಮದಲ್ಲಿ ಮೂಲ ಸೌಕರ್ಯ ಮರೀಚಿಕೆ
ಪ್ರತೀ ವರ್ಷ ಬೇಸಿಗೆಯ ಆರಂಭದಲ್ಲಿ ನಡೆಯುವ ಇಷ್ಟು ದೊಡ್ಡ ಮಟ್ಟದ ಜಾತ್ರಾ ಮಹೋತ್ಸವದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುತ್ತಿದೆ.
