“ನಗರಸಭೆ ಪರವಾನಗಿ ಪಡೆಯದೆ ಅನಧಿಕೃತವಾಗಿ ಒಳಚರಂಡಿ ಸಂಪರ್ಕ ಮಾಡಲು ರಸ್ತೆ ಅಗೆದ ಅಂಗಡಿ ಮಾಲೀಕನಿಗೆ 12 ಸಾವಿರ ದಂಡ ಹಾಗೂ ನಗರಸಭೆಯಲ್ಲಿ ಒಳ ಚರಂಡಿ ಸಂಪರ್ಕ ಪರವಾನಿಗೆ ಪಡೆದಿದ್ದ ಗುತ್ತಿಗೆದಾರನ ಪರವಾನಗಿ ರದ್ದು ಮಾಡಲಾಗಿದೆ” ಎಂದು ನಗರಸಭೆ ಪೌರಾಯುಕ್ತರಾದ ಎಫ್.ಐ.ಇಂಗಳಗಿ ತಿಳಿಸಿದ್ದಾರೆ.
ಹಾವೇರಿ ಜಿಲ್ಲೆಯ ರಾಣೆಬೇನ್ನೂರು ಪಟ್ಟಣದ ನಗರಸಭೆ ವ್ಯಾಪ್ತಿಯ ಸಿದ್ದೇಶ್ವರ ನಗರದಲ್ಲಿ ಗುತ್ತಿಗೆದಾರ ನಾಗರಾಜ ಹೊಸಪೇಟೆ ಎಂಬುವರು ಯಾವುದೇ ಪರವಾನಗಿ ಪಡೆಯದೆ ಅಂಗಡಿಗೆ ಒಳಚರಂಡಿ ಸಂಪರ್ಕ ಮಾಡಲು ರಸ್ತೆ ಅಗೆದಿದ್ದರು.
ಈ ಹಿನ್ನೆಲೆ ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಅಂಗಡಿ ಮಾಲೀಕ ಪರವಾನಗಿ ಪಡೆದಿಲ್ಲ ಎಂಬುದು ಗೊತ್ತಾಗಿದೆ. ತಕ್ಷಣ ನಗರಸಭೆ ಪೌರಾಯುಕ್ತರಾದ ಎಫ್.ಐ.ಇಂಗಳಗಿ ಭೇಟಿ ನೀಡಿ ಅಂಗಡಿ ಮಾಲೀಕನಿಗೆ ಹನ್ನೆರಡು ಸಾವಿರ ದಂಡ ಹಾಗೂ ಗುತ್ತಿಗೆದಾರನ ಪರವಾನಗಿ ರದ್ದು ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉದ್ಯೋಗ ಮಾಹಿತಿ | ಅಂಗನವಾಡಿಗಳ 2,500 ಹುದ್ದೆಗೆ ನೇಮಕಾತಿ
“ನಗರಸಭೆ ವ್ಯಾಪ್ತಿಯಲ್ಲಿ ಬರುವಂತಹ ಸಾರ್ವಜನಿಕರು ಯಾವುದೇ ವಸತಿ ಹಾಗೂ ವಾಣಿಜ್ಯ ಮಳಿಗೆಗಳಿಗೆ ಒಳಚರಂಡಿ ಸಂಪರ್ಕವನ್ನು ಪರವಾನಗಿ ಪಡೆದು ಮಾಡಬೇಕು. ಒಂದು ವೇಳೆ ಈ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಪೌರಾಯುಕ್ತ ಎಫ್.ಐ.ಇಂಗಳಗಿ ತಿಳಿಸಿದ್ದಾರೆ.
