ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಶಾಂತಿ ಸಮಾವೇಶ ನಡೆಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮಹಮ್ಮದ್ ರೋಷನ್ ಅವರು ಹಿಂದೂ ಮತ್ತು ಮುಸ್ಲಿಂ ಬಾಂಧವರು ಸೌಹಾರ್ದದಿಂದ ಮುಂಬರುವ ಹೋಳಿ ಮತ್ತು ರಂಜಾನ್ ಹಬ್ಬಗಳನ್ನು ಶಾಂತಿಯಿಂದ ಆಚರಿಸಬೇಕು ಎಂದು ಕರೆ ನೀಡಿದರು.
ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ನಡೆದ ಕಾಗವಾಡ ತಾಲ್ಲೂಕು ಮಟ್ಟದ ಶಾಂತಿಪಾಲನೆ ಸಭೆ ಹಾಗೂ ಎಸ್‌ಸಿ/ಎಸ್‌ಟಿ ಸಮುದಾಯದ ಕುಂದು-ಕೊರತೆಗಳ ಸಭೆಯಲ್ಲಿ ಅವರು ಮಾತನಾಡಿದರು. “ಎಲ್ಲರೂ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ನಡೆದುಕೊಳ್ಳಬೇಕು” ಎಂದು ಜಿಲ್ಲಾಧಿಕಾರಿ ಹೇಳಿದರು.
ಎಸ್.ಪಿ ಡಾ. ಭೀಮಾಶಂಕರ ಗುಳೇದ ಅವರು ಹೋಳಿ ಹಬ್ಬದ ವೇಳೆ ವಿಶೇಷ ಜಾಗೃತಿಯ ಅಗತ್ಯತೆ ಬಗ್ಗೆ ತಿಳಿಸುತ್ತ, “ಕಾಮಣ್ಣನ ದಹನದ ವೇಳೆ ಮಕ್ಕಳ ಸುರಕ್ಷತೆ ಮೇಲೆ ಹೆಚ್ಚಿನ ಗಮನ ಹರಿಸಬೇಕು. ಬಣ್ಣ ಹಚ್ಚುವಾಗ ನೈಸರ್ಗಿಕ ಬಣ್ಣಗಳನ್ನು ಮಾತ್ರ ಬಳಸಲು ಪ್ರಯತ್ನಿಸಬೇಕು” ಎಂದು ಸಲಹೆ ನೀಡಿದರು.
ತಹಶೀಲ್ದಾರ್ ರಾಜೇಶ ಬುರ್ಲಿ,ಡಿವೈಎಸ್ಪಿ ಪ್ರಶಾಂತ ಮುನ್ನೋಳ್ಳಿ,ಸಿಪಿಐ ಸಂತೋಷ ಹಳ್ಳೂರ,ಗ್ರಾ.ಪಂ. ಅಧ್ಯಕ್ಷೆ ಶೋಭಾ ಗದಾಳೆ,ಅಬಕಾರಿ ಅಧಿಕಾರಿ ಮಹಾಂತೇಶ ಭಂಡಗರ ಅಪರಾಧ ವಿಭಾಗದ ಪಿಎಸ್‌ಐ ಬಸನಗೌಡಾ ಬಿರಾದರ, ಅಣ್ಣಾಸಾಬ ಕೋರ ಎಸ್.ಡಿ. ಮುಲ್ಲಾ, ಮುಖಂಡ ವಿಜಯ ಅಕಿವಾಟೆ ಉಪಸ್ಥಿತರಿದ್ದರು.