ಈ ಬಾರಿ ಮಂಡನೆಯಾದ 2025-26ನೇ ಸಾಲಿನ ರಾಜ್ಯ ಬಜೆಟ್, ಪ್ರಗತಿಪರದ ಜತೆಗೆ ಸಾಮಾನ್ಯ ಜನರ ಬದುಕಿಗೆ ಆಧಾರವಾಗಿದೆ ಎಂದು ಕಾಂಗ್ರೆಸ್ ನಾಯಕಿ ಜ್ಯೋತಿ ಎಂ. ಗೊಂಡಬಾಳ ಹೇಳಿದ್ದಾರೆ.
ಬಜೆಟ್ ಕುರಿತು ಪ್ರಕಟಣೆ ನೀಡಿರುವ ಅವರು, “ಸಿದ್ದರಾಮಯ್ಯ ಅವರ 16ನೇ ದಾಖಲೆ ಬಜೆಟ್‌ನಲ್ಲಿ ಕೊಪ್ಪಳ ನಗರದಲ್ಲಿ 100 ಕೋಟಿ ವೆಚ್ಚದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, 25 ಕೋಟಿ ವೆಚ್ಚದಲ್ಲಿ ಬೂದಗುಂಪಾ ಕುರಿ ಸಂತೆಗೆ ಮೂಲ ಸೌಕರ್ಯ ಜತೆಗೆ ನವಲಿ ಸಮಾನಾಂತರ ಜಲಾಶಯದ ಆಸೆ ಚಿಗುರಿದೆ. ಹೊಸ ಕರ್ನಾಟಕದಲ್ಲಿ ಪಬ್ಲಿಕ್ ಶಾಲೆಗಳು, ಮಕ್ಕಳಿಗೆ ಪೌಷ್ಟಿಕ ಆಹಾರ, ಪತ್ರಕರ್ತರ ಮಾಸಾಶನ, ಶಿಕ್ಷಕರ ಗೌರವಧನ ಹೆಚ್ಚಳ ಮಾಡುವುದರೊಂದಿಗೆ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ” ಎಂದಿದ್ದಾರೆ.
“ಕಲ್ಯಾಣ ಕರ್ನಾಟಕ ಭಾಗದ ಖಾಲಿ ಇರುವ ಶಿಕ್ಷಕರ ನೇಮಕ, ಜಾನುವಾರುಗಳ ಅಕಾಲಿಕ ಮೃತ್ಯುವಿಗೆ ಪರಿಹಾರದ ಮೊತ್ತ ಹೆಚ್ಚಳ, ಅಕ್ಕ ಸಹಕಾರಿ ಬ್ಯಾಂಕ್ ಸ್ಥಾಪನೆ ಹಾಗೂ ಗೃಹಲಕ್ಷ್ಮೀ ಅದರ ವ್ಯಾಪ್ತಿಗೆ ತರುವುದು ದೊಡ್ಡ ಆರ್ಥಿಕ ಬದಲಾವಣೆಗೆ ಕಾರಣವಾಗಲಿದೆ. ಎಸ್ಸಿ, ಎಸ್ಟಿ ಸಮುದಾಯಕ್ಕೆ 2 ಕೋಟಿ ರೂಪಾಯಿಯವರೆಗಿನ ಕಾಮಗಾರಿಗಳಲ್ಲಿ ಮೀಸಲಾತಿ ನೀಡುವುದು, ಎಸ್ಸಿಪಿ ಟಿಎಸ್‌ಪಿ ಯೋಜನೆಗೆ 42018 ಕೋಟಿ ರೂ. ಮೀಸಲು, ಬಿಸಿಯೂಟ ಕಾರ್ಯಕರ್ತರ ಗೌರವಧನವನ್ನೂ ಹೆಚ್ಚಳ ಮಾಡಿರುವುದು ಉತ್ತಮ ಕೆಲಸ” ಎಂದು ಪ್ರಸಂಸೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕೊಪ್ಪಳದಲ್ಲಿ ದಾರುಣ ಘಟನೆ: ವಿದೇಶಿ ಯುವತಿಯ ಸಹಿತ ಸ್ಥಳೀಯ ಯುವತಿಗೆ ಹಲ್ಲೆಗೈದು ಅತ್ಯಾಚಾರ ನಡೆಸಿದ ದುರುಳರು!
ಕೊಪ್ಪಳದ ಬಹುತೇಕ ರಸ್ತೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಅನೇಕ ಅಭಿವೃದ್ಧಿ ಕಾರ್ಯಗಳನ್ನು ಒಳಗೊಂಡು ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಿದ್ದು ಅತ್ಯಂತ ಶ್ಲಾಘನೀಯ ಕಾರ್ಯ” ಎಂದು ಗ್ಯಾರಂಟಿ ಸಮಿತಿ ಸದಸ್ಯರೂ ಆದ ಜ್ಯೋತಿ ಗೊಂಡಬಾಳ ತಿಳಿಸಿದ್ದಾರೆ.
