ರಾಯಚೂರು ತಾಲೂಕಿನ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರದ ಉನ್ನತ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗೈರಾಗಿದ್ದು ತುಂಬಾ ಖೇದಕರ ಸಂಗತಿ, ಇದನ್ನು ಕರ್ನಾಟಕ ರಕ್ಷಣಾ ವೇದಿಕೆ ಖಂಡಿಸುತ್ತದೆ ಎಂದು ಕರವೇ ಎಚ್. ಶಿವರಾಮೇಗೌಡ ಬಣದ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಜಿಲ್ಲಾಧ್ಯಕ್ಷ ಅಶೋಕ ಕುಮಾರ ಜೈನ್ ಹೇಳಿದರು.
ನಗರದ ಪತ್ರಿಕಾಭವನದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಯಚೂರು ತಾಲೂಕಿನ 6ನೇ ಕನ್ನಡ ಸಾಹಿತ್ಯ ಸಮ್ಮೇಳನ ಗುರುವಾರದೆಂದು ಅದ್ದೂರಿಯಾಗಿ ಜರುಗಿತು. ರಾಯಚೂರು ತಾಲೂಕಿನ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲೆಯ ಉನ್ನತ ಅಧಿಕಾರಿಗಳಿಗೆ ಆಹ್ವಾನ ಪತ್ರಿಕೆಯಲ್ಲಿ ಗೌರವಿಸಿ ಆಹ್ವಾನಿಸಿದರೂ ಈ ಸಮ್ಮೇಳನಕ್ಕೆ ಬಾರದೆ ಇರುವುದು ಕನ್ನಡಕ್ಕೆ ಅಗೌರವ ತೋರಿದ್ದಾರೆ” ಎಂದು ಆರೋಪಿಸಿದರು.
“ಜಿಲ್ಲಾಧಿಕಾರಿಗಳು, ಜಿಲ್ಲಾ ಹೆಚ್ಚುವರಿ ಅಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ತಹಶೀಲ್ದಾರರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಮುಂತಾದವರೆಲ್ಲರ ಅನುಪಸ್ಥಿತಿ ಕನ್ನಡಕ್ಕೆ ಮಾಡುವ ಅಗೌರವ.ಒಂದು ವೇಳೆ ಕರ್ತವ್ಯದ ಮೇಲೆ ನಿರತರಾಗಿದ್ದರೆ ಅಧಿಕಾರಿಗಳು ಬೇರೆ ಅಧಿಕಾರಿಗಳನ್ನು ಕಳುಹಿಸಬಹುದಾಗಿತ್ತಲ್ಲವೇ?” ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ರಾಯಚೂರು | ವರ್ಷಗಳಾದರೂ ಪೂರ್ಣಗೊಳ್ಳದ ಕಾಮಗಾರಿ; ಲಕ್ಷಾಂತರ ಹಣ ಗುಳುಂ
ಈ ವೇಳೆ ರಾಯಚೂರು ನಗರಾಧ್ಯಕ್ಷ ಆಸೀಫ್, ಕೆ. ಕಿಶನ್‌ರಾವ್, ಜಿಲ್ಲಾ ಖಜಾಂಚಿ ಮೊಹಮ್ಮದ್ ಅಜೀಜ್, ತಾಲೂಕ ಉಪಾಧ್ಯಕ್ಷ ರಮೇಶರಾವ್ ಕಲ್ಲೂರಕರ್, ತಾಲೂಕ ಉಪಾಧ್ಯಕ್ಷ ವೀರಭದ್ರಯ್ಯ ಸ್ವಾಮಿ, ನಗರ ಉಪಾಧ್ಯಕ್ಷ ಮಹೇಂದ್ರಸಿಂಗ್, ಮೊಹಮ್ಮದ್ ಆಸೀಫ್ ಸೇರಿ ಇನ್ನಿತರರು ಉಪಸ್ಥಿತರಿದ್ದರು.
