ತಡೆಗೋಡೆ (ಕಾಂಪೌಂಡ್) ಕುಸಿದು ಮೂರು ಬೈಕ್ ಮತ್ತು ಒಂದು ರಿಕ್ಷಾ ಜಖಂಗೊಂಡಿರುವ ಘಟನೆ ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66ರ ಕಾಪು ಬಳಿಯ ಫೇಮಸ್ ಅಪಾರ್ಟ್‌ಮೆಂಟ್ ಬಳಿ ನಡೆದಿದೆ.
ಭಾನುವಾರ ಬೆಳಗ್ಗೆ ಘಟನೆ ಸಂಭವಿಸಿದ್ದು, ಎರಡು ಬೈಕ್ ಮತ್ತು ಸ್ಕೂಟಿ ಸಂಪೂರ್ಣ ಮಣ್ಣಿನಡಿ ಸಿಲುಕಿವೆ. ಕಂಪೌಂಡ್ ಕುಸಿತದ ರಭಸಕ್ಕೆ ರಿಕ್ಷಾ ಮುಂದೆ ಚಲಿಸಿ, ಹಾನಿಗೀಡಾಗಿದೆ.
ಫೇಮಸ್ ಅಪಾರ್ಟ್‌ಮೆಂಟ್ ನಿವಾಸಿಗಳಾದ ಅಬ್ದುಲ್ ಖಾದರ್, ಅಬ್ದುಲ್ ಕಬೀರ್ ಎಂಬವರ ಬೈಕ್ ಮತ್ತು ಶರೀಪ್ ಎಂಬವರ ಆಟೋ ಹಾನಿಗೊಳಗಾಗಿದ್ದು, ಯಾವುದೇ ಜೀವ ಹಾನಿ ಆಗಿಲ್ಲ.
ಈ ಸುದ್ದಿ ಓದಿದ್ದೀರಾ? ಗೃಹಲಕ್ಷ್ಮಿ | ಆ. 18ರ ಒಳಗೆ ಖಾತೆಗೆ ಹಣ ಹಾಕುವುದು ಖಚಿತ: ಲಕ್ಷ್ಮಿ ಹೆಬ್ಬಾಳ್ಕರ್
ರಾಷ್ಟ್ರೀಯ ಹೆದ್ದಾರಿ 66ರ ಬದಿಯಲ್ಲಿ ಪೈಪ್ ಲೈನ್ ಕಾಮಗಾರಿ ನಡೆದಿದ್ದು, ಈ ವೇಳೆ ಸಮರ್ಪಕ ರೀತಿಯಲ್ಲಿ ಫಿಲ್ಲಿಂಗ್ ನಡೆಯದಿರುವುದೇ ಘಟನೆಗೆ ಕಾರಣ ಎಂದು ಅಪಾರ್ಟ್‌ಮೆಂಟ್ ಮಾಲೀಕರು ಮತ್ತು ನಿವಾಸಿಗಳು ಆರೋಪಿಸಿದ್ದಾರೆ.