ಕಳೆದ ನಾಲ್ಕು ದಿನಗಳ ಹಿಂದೆ ವಿಶು ಶೆಟ್ಟಿ ದುಃಖಿತ ಮಹಿಳೆಯೊಬ್ಬರನ್ನು ರಕ್ಷಿಸಿ, ಸಖಿ ಸೆಂಟರಿಗೆ ದಾಖಲಿಸಿದ್ದು, ಇದೀಗ ಮಹಿಳೆಯ ಮಕ್ಕಳು ಪತ್ತೆಯಾಗಿದ್ದು ಮಕ್ಕಳಿಗೆ ಹಸ್ತಾಂತರಿಸಲಾಗಿದೆ.
ರಕ್ಷಣಾ ಸಮಯ ಮಹಿಳೆ ತನ್ನ ಹೆಸರು ಗಂಗಮ್ಮ, ತಿಪಟೂರಿನವರು ಎಂದು ಸುಳ್ಳು ಮಾಹಿತಿ ನೀಡಿದ್ದು, ಮಹಿಳೆ ಮೂಲತಃ ಶಿವಮೊಗ್ಗದವರಾಗಿದ್ದು ಯಾವುದೋ ಕಾರಣಕ್ಕೆ ಮನನೊಂದು ಮನೆ ಬಿಟ್ಟು ಉಡುಪಿಗೆ ಬಂದು ಅಸಹಾಯಕರಾಗಿದ್ದರು. ಸಖಿ ಸೆಂಟರಿನ ಸಿಬ್ಬಂದಿಗಳು ಮಹಿಳೆ ನೀಡಿದ ಮಾಹಿತಿ ಸರಿ ಇಲ್ಲದಿದ್ದರೂ ಮಕ್ಕಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಈ ದಿನ ಮಹಿಳೆಯ ಮಕ್ಕಳು ಉಡುಪಿ ಸಖಿ ಸೆಂಟರಿಗೆ ಬಂದು ಕಾನೂನು ಪ್ರಕ್ರಿಯೆ ಮುಗಿಸಿ ತಾಯಿಯನ್ನು ಕರೆದುಕೊಂಡು ಹೋಗಿದ್ದಾರೆ. ಮಹಿಳೆ ಕಾಣೆಯಾದ ಬಗ್ಗೆ ಶಿವಮೊಗ್ಗ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದರು.
ವಿಶ್ವ ಮಹಿಳಾ ದಿನಾಚರಣೆ ದಿನದಂದು ನೊಂದ ಮಹಿಳೆಯನ್ನು ಸಖಿ ಸೆಂಟರಿನ ಸಿಬ್ಬಂದಿಗಳು ಮಕ್ಕಳಿಗೆ ಹಸ್ತಾಂತರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಖಿ ಸೆಂಟರಿನ ಸಿಬ್ಬಂದಿ ಮಹಿಳೆಯ ಬಗ್ಗೆ ಉತ್ತಮ ಸಮಾಲೋಚನೆ ನಡೆಸಿದ್ದಾರೆ. ಜೊತೆಗೆ ತುರ್ತು ವೈದ್ಯಕೀಯ ಚಿಕಿತ್ಸೆ ಕೂಡ ನೀಡಿದ್ದಾರೆ. ಮಹಿಳೆ ಮಕ್ಕಳಲ್ಲಿ ಯಾವುದೊ ವಿಚಾರಕ್ಕೆ ಮನನೊಂದು ಮನೆ ಬಿಟ್ಟು ಹೊರಟಿದ್ದಾರೆ. ಸರಿಯಾಗಿ ಕರ್ತವ್ಯ ನಿಭಾಯಿಸಿದಲ್ಲಿ ಇಂತಹ ಪ್ರಕರಣಗಳು ಇತ್ಯರ್ಥವಾಗುತ್ತವೆ. ಉಡುಪಿಯ ಸಖಿ ಸೆಂಟರ್ ಇಂತಹ ಹಲವು ಕೆಲಸಗಳನ್ನು ಈ ಹಿಂದೆ ನಿಭಾಯಿಸಿದ ಉದಾಹರಣೆಗಳಿದೆ.
- ವಿಶು ಶೆಟ್ಟಿ ಅಂಬಲಪಾಡಿ
