ವಿಜಯನಗರ | ಮಹಿಳಾ ಮೀಸಲಾತಿ ಪಂಚಾಯಿತಿ ಮಟ್ಟದಲ್ಲಿದೆ, ಲೋಕಸಭೆಗೆ ಬಂದಿಲ್ಲ: ಝಕೀಯಾ ಸೋಮನ್

Date:

Advertisements

ರಾಜಕೀಯ ಕ್ಷೇತ್ರದಲ್ಲಿ ಮಹಿಳಾ ಮೀಸಲಾತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿದೆ, ಲೋಕಸಭೆಗೆ ಬಂದಿಲ್ಲ. ಪ್ರತಿ ಕ್ಷೇತ್ರದಲ್ಲೂ ವಿಸ್ತರಿಸಬೇಕು ಎಂದು ಗುಜರಾತ್‌ನ ಝಕಿಯಾ ಸೋಮನ್ ದಿಕ್ಸೂಚಿ ಒತ್ತಾಯಿಸಿದರು.

ವಿಜಯನಗರದ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಹಿಳಾ ಹಕ್ಕೊತ್ತಾಯ ಹಾಗೂ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದರು.

“ಮಹಿಳೆಯರೆಲ್ಲ ಒಂದಲ್ಲ ಒಂದು ದಿನ ಗೆಲ್ಲುತ್ತೇವೆ. ಭಾರತದಲ್ಲಿ ಹೆಣ್ಣು ಹುಟ್ಟಿದ್ದೇ ಒಂದು ಶಾಪ ಎನ್ನುವ ರೀತಿಯಲ್ಲಿ ನೋಡುತ್ತಾರೆ. ನನಗಾಗಿ ಇರುವ ದಿನ ಇದೇ ಅಂತ ತಿಳಕೊಬೇಕು. ಎಲ್ಲರನ್ನೂ ಒಳಗೊಳ್ಳುವಿಕೆಯಲ್ಲಿ ನಂಬಿಕೆ ಇದೆ. ಜಾಗತಿಕ ಮಟ್ಟದಲ್ಲಿ ಇದು ಅಗುತ್ತದೆ. ಸಾಮಾಜಿಕ ಸಮಾನತೆ, ಸಾಂಸ್ಕೃತಿಕತೆ ಮಹಿಳೆಯರಿಗೆ ಬೇಕು” ಎಂದರು.

Advertisements

“ಮಹಿಳೆಯರಿಗೆ ಪಂಚಾಯಿತಿ ಮಟ್ಟದಲ್ಲಿ ರಾಜಕೀಯ ಮೀಸಲಾತಿ ಕೊಟ್ಟಿದ್ದಾರೆ. ಅದರೆ, ಇನ್ನೂ ಲೋಕಸಭೆಯವರೆಗೂ ಮೀಸಲಾತಿ ಸಿಗಬೇಕು. ಭಾಷೆ, ಲಿಂಗದ ಮೇಲಿನ ಅಸಮಾನತೆ ಇನ್ನೂ ಇದೆ. ಬಿಲ್ಕೀಸ್‌ ಬಾನು ಅತ್ಯಾಚಾರ ಮಾಡಿದವರನ್ನು ಸಂಭ್ರಮದಿಂದ ಸ್ವಾಗತಿಸುತ್ತಾರೆ. ಮೆರವಣಿಗೆ ಮಾಡುತ್ತಾರೆ. ಇದರ ಮೇಲೆ ತಿಳಿಯುತ್ತದೆ ಯೂನಿಫಾರ್ಮ್ ಕೋಡ್ ಬಿಲ್ ಜಾರಿಗೆ ತಂದರೆ ಮಹಿಳೆಯರ ಗೌರವ ಹೆಚ್ಚಾಗುತ್ತದೆ ಎನ್ನುತ್ತಾರೆ. ಆದರೆ, ಇದರ ಮೇಲೆ ಗೊತ್ತಾಗುತ್ತದೆ” ಎಂದು ಹೇಳಿದರು.

ಮಹಿಳಾ ದಿನಾಚರಣೆ ಹೊಸಪೇಟೆ

ಡಾ. ಎಚ್ ಜಿ ಜಯಲಕ್ಷ್ಮಿ ಮಾತನಾಡಿ, “ಹದಿನಾರು ಗಂಟೆಗಳ ಕಾಲ ದುಡಿಸಿಕೊಳ್ಳುತ್ತಿದ್ದರು. ನಿರ್ದಯವಾಗಿ, ಕೆಲವು ಸಲ ಗಡಿಯಾರದ ಮುಳ್ಳನ್ನು ಹಿಂದೆ ತಿರುಗಿಸಿ ಹೆಚ್ಚು ಕೆಲಸ ಮಾಡಿಸಿಕೊಳ್ಳುತ್ತಿದ್ದರು. ಇಂತಹ ಕೆಟ್ಟ ಪರಿಸ್ಥಿತಿ ವಿರುದ್ಧ ಹದಿನೈದು ಸಾವಿರ ಮಹಿಳೆಯರು ನ್ಯೂಯಾರ್ಕ್‌ನ ಬೀದಿಯಲ್ಲಿ ಪ್ರತಿಭಟಿಸಿದರು. ಮೇ ದಿನದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಮನೆ ಕೆಲಸ ಮಾಡುವುದು ಸುಲಭವಲ್ಲ. ಅದರಲ್ಲಿ ಏಕತನ ಇರುತ್ತದೆ. ಆಶಾ, ಅಂಗನವಾಡಿ ಕಾರ್ಯಕರ್ತರು, ಬಿಸಿಯೂಟ ಕೆಲಸಗಾರರ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಿದೆಯೇ” ಎಂದು ಪ್ರಶ್ನಿಸಿದರು.

ಮಹಿಳಾ ದಿನಾಚರಣೆ ಹೊಸಪೇಟೆ 1

“ಕೊಮು ರಾಜಕೀಯದ ವಿರುದ್ಧ ಧ್ವನಿ ಎತ್ತಿದರೆ, ಕೊಲೆ ಮಾಡುತ್ತಾರೆ, ಬೇದರಿಕೆ ಹಾಕುತ್ತಾರೆ. ಹೆಣ್ಣು ಮಕ್ಕಳು ಅಡುಗೆ ಮನೆಗೆ ಹೋಗಿ ಎಂಬ ಘೋಷ ವಾಕ್ಯವನ್ನು ಹಾಕುತ್ತಾರೆ. ಹೆಣ್ಣು ಮಕ್ಕಳು ಎಷ್ಟು ಮಕ್ಕಳನ್ನು ಹೆರಬೇಕು ಅಂತ ನಿಯಮಗಳನ್ನು ಹಾಕುತ್ತಾರೆ, ಇವರು ಯಾರೂ ನಮಗೆ ಇಂತಹ ನಿಯಮಗಳನ್ನು ವಿಧಿಸುವುದಕ್ಕೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಕಾರ್ಮಿಕರ ಹಕ್ಕುಗಳನ್ನು ಕಡೆಗಣಿಸುತ್ತಿದ್ದಾರೆ. ʼನಲವತ್ತು ಗಂಟೆ, ತೊಂಬತ್ತು ಗಂಟೆ ದುಡಿಯಿರಿ ಮನೆಯಲ್ಲಿ ಹೆಂಡತಿ ಮುಖ ನೋಡತ್ತ ಕುಳಿತುಕೊಳ್ಳಬೇಡಿʼ ಎನ್ನುತ್ತ ಕಾರ್ಮಿಕರ ವೈಯಕ್ತಿಕ ಬದುಕನ್ನು ಕಿತ್ತುಕೊಳ್ಳುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.‌

ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ಸಾರ್ವಜನಿಕ ಸೌಲಭ್ಯಕ್ಕೆ ಮೀಸಲಿಟ್ಟ ಜಾಗಗಳ ಅತಿಕ್ರಮಣ ತೆರವಿಗೆ ಕರವೇ ಮನವಿ

ನಿಶಾ ಗೋಳುರ ಮಾತನಾಡಿ, “ಹೆಣ್ಣು ಮಕ್ಕಳನ್ನು ನದಿಗಳಿಗೆ, ಹೂವಿಗೆ, ದೇವತೆಗೆ, ಶಕ್ತಿಗೆ ಹೋಲಿಸುತ್ತಾರೆ ನಮಗೆ ಬಜಾರಿಯರು ಅಂದರೂ ಪರವಾಗಿಲ್ಲ. ನಮಗೆ ಇವರ ರಕ್ಷಣೆ ಬೇಕಿಲ್ಲ. ಆದರೆ, ನಾವು ನಮ್ಮ ರಕ್ಷಣೆ ನಿಲ್ಲೋಣ. ಸೌಜನ್ಯಳ ಪರವಾಗಿ ಮಾತನಾಡಿದ ಸಮೀರ್ ವಿರುದ್ಧ ಪೊಲೀಸ್ ಇಲಾಖೆ ಪ್ರಕರಣ ದಾಖಲಿಸುತ್ತಿದೆ. ಒಬ್ಬ ಮುಸಲ್ಮಾನ ಸೌಜನ್ಯ ಪರವಾಗಿ ಮಾತನಾಡಿದ ವ್ಯಕ್ತಿಯನ್ನು ಧಾರ್ಮಿಕವಾಗಿ ನೋಡುತ್ತಿರುವುದು ದುರಂತ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಹೊಸಪೇಟೆಯ ಪಟೇಲ್ ಪ್ರೌಢಶಾಲೆಯಿಂದ ಮಹಿಳೆಯರ ಕಲಾತಂಡಗಳಿಂದ ಹೋರಾಟದ ಹಾಡುಗಳನ್ನು ಹಾಡುವುದರ ಮೂಲಕ ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿ ಬಳ್ಳಾರಿ ರಸ್ತೆ ಹೊಸಪೇಟೆ ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತದ ಮೂಲಕ ಹಾಗೂ ಜಿಲ್ಲಾ ಕ್ರೀಡಾಂಗಣದಲ್ಲಿ ಸಾರ್ವಜನಿಕ ಸಭೆ ನಡೆಸಿ ಹಕ್ಕೊತ್ತಾಯ ಮಂಡಿಸಲಾಯಿತು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X