ರಾಜ್ಯಾದ್ಯಂತ ತೇವಾಂಶ ಕಡಿಮೆಯಾಗಿ ಉಷ್ಣಾಂಶದಲ್ಲಿ ಭಾರೀ ಏರಿಕೆಯಾಗಿರುವುದರಿಂದ ಸಹಿಸಿಕೊಳ್ಳಲಾಗದಷ್ಟು ಬಿಸಿಲ ಝಳಕ್ಕೆ ಪ್ರಾಣಿ-ಪಕ್ಷಿಗಳು ಬಸವಳಿಯುತ್ತಿವೆ. ಈ ಹಿನ್ನೆಲೆಯಲ್ಲಿ ಇಲಿಯಾಸ್ ಪಟೇಲ್ ಪ್ರಾಣಿ, ಪಕ್ಷಿಗಳಿಗಾಗಿ ನೀರುಣಿಸಿ ದಾಹ ನೀಗಿಸುತ್ತಿದ್ದಾರೆ.
ಪ್ರಾಣಿ ಪಕ್ಷಿಗಳು ನೀರು ಆಹಾರಕ್ಕಾಗಿ ಅಲೆದಾಡುತ್ತಿವೆ. ಬಾನಲ್ಲಿ ಹಾರಾಡುವ ಪಕ್ಷಿಗಳಂತೂ ಬಿಸಿಲ ತಾಪಕ್ಕೆ ತಲೆತಿರುಗಿ ನೆಲಕ್ಕಪ್ಪಳಿಸುತ್ತಿವೆ. ಇವುಗಳಲ್ಲಿ ಎತ್ತರದಲ್ಲಿ ಹಾರಾಡುವ ಹದ್ದು, ಕಾಗೆ, ಪಾರಿವಾಳಗಳೂ ಹೆಚ್ಚಿನ ಸಂಖ್ಯೆಯಲ್ಲಿ ಕೆಳಗೆ ಬೀಳುತ್ತಿವೆ. ಕೆರೆ ಕಟ್ಟೆಗಳು ಬರಿದಾಗಿರುವುದರಿಂದ ಕಾಡು ಪ್ರಾಣಿಗಳಿಗೂ ನೀರು ಸಿಗುತ್ತಿಲ್ಲ. ಹಿಂದೆ ಉದ್ಯಾನಗಳು, ಕೆರೆ-ಕುಂಟೆಗಳು ತುಂಬಿರುತ್ತಿದ್ದವು. ಹಳ್ಳ ಕೊಳ್ಳಗಳಲ್ಲೂ ನೀರಿರುತ್ತಿತ್ತು. ಆದರೆ ಈಗ ಕೆರೆಗಳು ಮಾಯವಾಗಿವೆ. ಪ್ರಾಣಿ-ಪಕ್ಷಿಗಳು ತಮ್ಮ ದಾಹ ಇಂಗಿಸಿಕೊಳ್ಳಲು ನೀರು ಸಿಗದ ಸನ್ನಿವೇಶ ಸೃಷ್ಟಿಯಾಗಿದೆ.
“ಗಿರಿನಾಡು ಯಾದಗಿರಿ ಜಿಲ್ಲೆಯ ಕೆಂಭಾವಿ ಪಟ್ಟಣದ ಇಲಿಯಾಸ್ ಪಟೇಲ್ ಅವರು ಪ್ರಾಣಿ ಮತ್ತು ಪಕ್ಷಿಗಳಿಗಾಗಿ ನೀರುಣಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಸದಾ ನಿರಂತರವಾಗಿ ಸಮಾಜಮುಖಿ ಸೇವೆ ನಡೆಸುತ್ತಿರುವ ಪ್ರಮುಖ ವ್ಯಕ್ತಿಯಾಗಿದ್ದಾರೆ. ಅವರು ತಮ್ಮ ದಯಾಳತೆಯನ್ನು ಪ್ರದರ್ಶಿಸಿ, ಪ್ರತಿದಿನವೂ ಬಳಕೆಯಾದ ನೀರಿನ ಬಾಟಲಿಗಳನ್ನು ಸಂಗ್ರಹಿಸಿ, ತಮ್ಮ ಮನೆಯ ಸುತ್ತಲೂ ಇರುವ ನಾಲ್ಕೈದು ಮರಗಳಿಗೆ ಸುಮಾರು ಹತ್ತು ಹದಿನೈದು ಬಾಟಲಿಗಳು ಕತ್ತರಿಸಿ ಗಿಡ, ಮರಗಳಿಗೆ ನೇತಾಕಿ ಅವುಗಳಲ್ಲಿ ಎರಡು ಮೂರು ಬಾಟಲಿಗಳಲ್ಲಿ ಪಕ್ಷಿಗಳಿಗೆ ತಿನ್ನಲು ದವಸಧಾನ್ಯ ಹಾಕಿ ಉಳಿದ ಬಾಟಲಿಗಳಲ್ಲಿ ನೀರು ಹಾಕಿ, ಪ್ರತಿನಿತ್ಯ ಬಾಟಲಿಗಳನ್ನು ಸ್ವಚ್ಛಗೊಳಿಸಿ ಪುನಃ ನೀರು ಹಾಕುವ ಮೂಲಕ ಪ್ರಕೃತಿಯ ಪ್ರಾಣಿ ಮತ್ತು ಪಕ್ಷಿಗಳಿಗೆ ಆಹಾರ, ಪಾನೀಯವನ್ನು ಒದಗಿಸಿ ಈ ಮೂಲಕ ಆತ್ಮತೃಪ್ತಿ ಪಡೆದುಕೊಳ್ಳುತ್ತಿರುವೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ನೀರಾವರಿ ಹಕ್ಕಿಗಾಗಿ ಹೋರಾಟಕ್ಕೆ ಮುಂದಾಗಬೇಕು: ನಿವೃತ್ತ ನ್ಯಾ. ವಿ ಗೋಪಾಲಗೌಡ
“ಮಾಜದ ಪ್ರತಿ ಸದಸ್ಯನೂ ತಮ್ಮ ಸುತ್ತಲೂ ಇರುವ ಜೀವಜಾತಿಗಳಿಗೆ ಕಳಕಳಿಯಿಂದ ಮತ್ತು ಕರ್ತವ್ಯದಿಂದ ವರ್ತಿಸುವುದರಿಂದ, ಸಾಂಸ್ಕೃತಿಕ ಹಾಗೂ ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಅತ್ಯಂತ ಅಗತ್ಯವಾಗಿದೆ. ಇನ್ನೊಂದು ಪ್ರಮುಖ ಅಂಶವೆಂದರೆ, ಅವರು ಈ ಸೇವೆಯನ್ನು ಮಾಡುತ್ತಿದ್ದು, ಇತರರು ಇದರಿಂದ ಪ್ರೇರಿತವಾಗಿ ತಮ್ಮ ಸಮುದಾಯಗಳಲ್ಲಿ ಕಾರ್ಯಗಳನ್ನು ಮಾಡಬೇಕು” ಎಂದು ಸಮುದಾಯದ ಜನರಿಗೆ ತಿಳಿಸಿದರು.