ಗುಬ್ಬಿ | ದಲಿತ ವಿರೋಧಿ ತುಮಕೂರು ಜಿಪಂ ಸಿಇಒ: ಕಾನೂನು ಕ್ರಮಕ್ಕೆ ದಲಿತ ಮುಖಂಡರ ಆಗ್ರಹ.

Date:

Advertisements

ಅಸ್ಪೃಶ್ಯ ಮನೋಭಾವ ಹೊಂದಿರುವ ಜಿಲ್ಲಾ ಪಂಚಾಯಿತಿ ಸಿಇಒ ಜಿ.ಪ್ರಭು ಅವರು ಉದ್ದೇಶ ಪೂರಕವಾಗಿ ದಲಿತ ಅಧಿಕಾರಿಗಳನ್ನು ಟಾರ್ಗೆಟ್ ಮಾಡಿ ವಿನಾಕಾರಣ ಮಾನಸಿಕ ಹಿಂಸೆ ನೀಡುತ್ತಾರೆ. ಈ ಉನ್ನತ ಅಧಿಕಾರಿಯ ದಲಿತ ವಿರೋಧಿ ನೀತಿಗೆ ಜಿಲ್ಲೆಯ 12 ಮಂದಿ ಪಿಡಿಓಗಳ ಮೇಲೆ ಅಮಾನತು ಶಿಕ್ಷೆ ನೀಡಿರುವುದು ಜೀವಂತ ಸಾಕ್ಷಿಯಾಗಿದೆ ಎಂದು ಜಿಪಂ ಮಾಜಿ ಸದಸ್ಯ ಜಿ.ಎಚ್.ಜಗನ್ನಾಥ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಗುಬ್ಬಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಪರಿಶಿಷ್ಟ ಜಾತಿಯ ನೆೌಕರರನ್ನೇ ಗುರಿಯಾಗಿಸಿಕೊಂಡು ಟಾರ್ಚರ್ ನೀಡುತ್ತಾರೆ. ಈ ಜೊತೆಗೆ ಸ್ವಜಾತಿ ವ್ಯಾಮೋಹ ಕೂಡಾ ಅವರಲ್ಲಿ ಎದ್ದು ಕಾಣುತ್ತಿದೆ. ಹಾಗಲವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಹಣ ದುರ್ಬಳಕೆ ಎಂದು ದಲಿತ ಪಿಡಿಓ ಶಿವಕುಮಾರ್ ಅವರನ್ನು ತುರ್ತು ಅಮಾನತು ಮಾಡಿದ ಸಿಇಓ ಸಾಹೇಬರು ಅದೇ ಅಕ್ರಮ ಎನ್ನಲಾದ ಕೆಲಸದಲ್ಲಿ ಮುಖ್ಯ ಪಾತ್ರಧಾರಿ ಸ್ವಜಾತಿಯ ಇಂಜಿನಿಯರ್ ಗೋವಿಂದರಾಜು ಅವರನ್ನು ಪ್ರಕರಣದಿಂದ ಕೈ ಬಿಟ್ಟಿದ್ದಾರೆ ಎಂದು ನೇರ ಆರೋಪ ಮಾಡಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಕೆಲಸದಲ್ಲಿ ಮೂಗು ತೂರಿಸುವ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಿ.ಪ್ರಭು ಅವರು ಗುತ್ತಿಗೆದಾರರಿಗೂ ಹಿಂಸೆ ನೀಡುತ್ತಾರೆ. ಸಾಲ ಮಾಡಿ ಕೆಲಸ ಮಾಡುವ ಗುತ್ತಿಗೆದಾರ ಇನ್ನೆರೆಡು ತಿಂಗಳಲ್ಲಿ ಹಣ ವಾಪಸ್ ಹೋದರೆ ಬೀದಿಗೆ ಬೀಳುತ್ತಾರೆ. ತಾಲ್ಲೂಕು ಪಂಚಾಯಿತಿ ಸದಸ್ಯರೊಬ್ಬರ ಕೆಲಸವನ್ನು ಹೀಗೆ ವಿಳಂಬ ಮಾಡಿ ಹಣ ಮರಳಿ ಹೋಗುವಂತೆ ಮಾಡಿದ್ದರು. ಭ್ರಷ್ಟಾಚಾರಕ್ಕೆ ಸಾಥ್ ನೀಡದ ಕೋ ಆರ್ಡಿನೇಟರ್ ಗಳಿಗೆ ನೋಟಿಸ್ ಜಾರಿ ಮಾಡಿ ವಿನಾಕಾರಣ ಮಾನಸಿಕ ಹಿಂಸೆ ನೀಡುತ್ತಾರೆ. ಸರ್ವಾಧಿಕಾರ ಪ್ರದರ್ಶನ ಮಾಡುವ ಇವರು ಈ ಹಿಂದೆ ಕೆಲಸ ಮಾಡಿದ ಐದೂ ಮಂದಿ ಸಿಇಓಗಳು ಎಂದೂ ಈ ರೀತಿಯ ವರ್ತನೆ ತೋರಿರಲಿಲ್ಲ. ಗ್ರಾಮ ಪಂಚಾಯಿತಿ ಬಿಲ್ ತರೆಸಿ ತಡೆ ಹಿಡಿಯುವ ಮೂಲ ಉದ್ದೇಶ ತಿಳಿಯಬೇಕಿದೆ. ಉನ್ನತ ಶಿಕ್ಷಣ ಪಡೆದ ಅಧಿಕಾರಿಯಲ್ಲಿ ದಲಿತ ವಿರೋಧಿ ಮನಸ್ಥಿತಿ ತೀವ್ರ ಅಸಮಾಧಾನ ತಂದಿದೆ. ಕೂಡಲೇ ಸರ್ಕಾರ ಜಿಪಂ ಸಿಇಓ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

Advertisements
1001152943

ಬಗರ್ ಹುಕುಂ ಸಮಿತಿ ಸದಸ್ಯ ಜಿ.ವಿ.ಮಂಜುನಾಥ್ ಮಾತನಾಡಿ 12 ಮಂದಿ ದಲಿತ ಪಿಡಿಓಗಳ ಅಮಾನತು ಬಗ್ಗೆ ಜಿಲ್ಲಾ ಸಚಿವರಾದ ಪರಮೇಶ್ವರ್ ಉತ್ತರ ನೀಡಬೇಕು. ಸ್ವಜಾತಿಯ ನೌಕರನ್ನು ಉಳಿಸುವುದು ದಲಿತ ನೌಕರರ ಮೇಲೆ ಕಾರಣವೇ ಇಲ್ಲದೆ ತೊಂದರೆ ನೀಡುವುದು ನಿರಂತರ ನಡೆದಿದೆ. ಎಲ್ಲಾ ಕೆಲಸಗಳಿಗೂ ಕೈ ಹಾಕುವ ಸಿಇಓ ಅವರು ಚುನಾಯಿತ ಸದಸ್ಯರ ಕೆಲಸಕ್ಕೂ ಮೂಗು ತೂರಿಸುತ್ತಾರೆ. ಜಲ ಜೀವನ್ ಮಿಷನ್ ಯೋಜನೆ ಕಾಮಗಾರಿಯನ್ನು ಹುಡುಕಿ ಬಿಲ್ ನಿಲ್ಲಿಸುವ ಕೆಲಸ ಮಾಡಿದ್ದಾರೆ. ಗ್ರಾಮ ಪಂಚಾಯಿತಿ ಸಭೆಗಳ ವಿಚಾರಕ್ಕೂ ಪ್ರಶ್ನೆ ಮಾಡುತ್ತಾರೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟ ಉಗ್ರ ಪ್ರತಿಭಟನೆ ನಡೆಸಿತ್ತು. ಇಷ್ಟೆಲ್ಲಾ ನಡೆದರೂ ಜಿಲ್ಲಾ ಉಸ್ತುವಾರಿ ಸಚಿವರು ಮೌನ ತೋರುತ್ತಿರುವುದು ಸರಿಯಲ್ಲ. ಸರ್ಕಾರ ಈ ದಲಿತ ವಿರೋಧಿ ಮನಸ್ಥಿತಿ ತೊಡೆಯಬೇಕು. ಕೆಲಸದಿಂದ ವಜಾ ಗೊಳಿಸುವ ಕಠಿಣ ಕಾನೂನು ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾ ಸಚಿವರ ಮನೆ ಬಳಿಯೇ ದಲಿತರು ಹೋರಾಟ ನಡೆಸುತ್ತಾರೆ ಎಂದು ಎಚ್ಚರಿಸಿದರು.

ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಕಡಬ ಶಂಕರ್ ಮಾತನಾಡಿ ದಲಿತರನ್ನು ಮಾತ್ರ ಗುರಿಯಾಗಿಸುವ ಉನ್ನತ ಅಧಿಕಾರಿ ಪ್ರಭು ಅವರ ವರ್ತನೆ ಖಂಡನೀಯ. ದಲಿತ ವಿರೋಧಿ ನೀತಿ ಜೊತೆಗೆ ಸ್ವಜಾತಿ ತಪ್ಪಿತಸ್ಥರ ಪರ ನಿಲ್ಲುವ ಈ ಅಧಿಕಾರಿ ಜಿಲ್ಲೆಯಲ್ಲಿ ಎಲ್ಲಾ ಪಂಚಾಯಿತಿ ವ್ಯಾಪ್ತಿಯ ಕೆಲಸಗಳಿಗೂ ವಿನಾಕಾರಣ ಅಡ್ಡಿ ಬರುತ್ತಿದ್ದಾರೆ. ಸಂಬಂಧವಿಲ್ಲದ ಕೆಲಸಗಳ ಕಡತ ತರಿಸಿ ವಿಳಂಬ ಮಾಡುವುದು ಒಂದು ರೀತಿಯ ಭ್ರಷ್ಟಾಚಾರಕ್ಕೆ ಮೂಲವಾಗಿದೆ. ಹಣದ ಬೇಡಿಕೆಗೆ ಈ ರೀತಿ ಮಾಡುತ್ತಾರೆ. ಇಂತಹ ಅಧಿಕಾರಿ ಕೂಡಲೇ ಅಮಾನತು ಅಥವಾ ವಜಾ ಗೊಳಿಸುವ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಮೇದಾರರ ಸಂಘದ ಜಿಲ್ಲಾಧ್ಯಕ್ಷ ಚನ್ನಬಸವಯ್ಯ ಮಾತನಾಡಿ ನೂರಕ್ಕೆ ನೂರು ಪಕ್ಕ ಕೆಲಸ ಮಾಡುವ ಸತ್ಯ ಹರಿಶ್ಚಂದ್ರರಾ ಈ ಸಿಇಓ ಪ್ರಭು ಅವರು. ಸಂಜೆ ಆರು ಗಂಟೆ ಮೇಲೆ ಕಚೇರಿಯಲ್ಲಿ ನಡೆಯುವ ವ್ಯವಹಾರ ಬಗ್ಗೆ ಎಲ್ಲರಿಗೂ ತಿಳಿದಿದೆ. ಸರ್ವಾಧಿಕಾರ ಬಿಟ್ಟು ಕೆಲಸ ಮಾಡಿಕೊಂಡು ಹೋಗುವುದಾದರೆ ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಕೆಲಸ ಮಾಡಿ. ಅದನ್ನು ಬಿಟ್ಟು ಇಲ್ಲಸಲ್ಲದ ಕಾರ್ಯಗಳಿಗೆ ಅಡ್ಡಿ ಬರುವುದು. ದಲಿತರನ್ನು ಮಾತ್ರ ಗುರಿಯಾಗಿಸಿಕೊಂಡು ಹಿಂಸೆ ಕೊಡುವುದು ತರವಲ್ಲ. ಎಲ್ಲವೂ ಸಾರ್ವಜನಿಕರಿಗೆ ತಿಳಿದಿದೆ. ಮುಂದಿನ ಆಗು ಹೋಗುಗಳಿಗೆ ಅವರೇ ಹೊಣೆ ಎಂದು ನೇರ ಎಚ್ಚರಿಕೆ ನೀಡಿದರು.

ಪಪಂ ಸದಸ್ಯ ಕುಮಾರ್, ದಲಿತ ಮುಖಂಡರಾದ ಶಿವಪ್ಪ, ಜಗದೀಶ್, ಈಶ್ವರಯ್ಯ, ಕಲ್ಲೂರು ರವಿ, ಮಂಜಣ್ಣ, ರವೀಶ್, ನಾಗಭೂಷಣ, ನಟರಾಜ್, ವಾಲ್ಮೀಕಿ ಸಮಾಜದ ಅಡವೀಶಯ್ಯ, ಸವಿತಾ ಸಮಾಜದ ಪಾಪಣ್ಣ, ಮುಸ್ಲಿಂ ಸಮಾಜದ ಇಮ್ರಾನ್ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X