ರಾಯಚೂರು | ನಾಲೆಗಳಿಗೆ ಏ.20ವರಗೆ ನೀರು ಹರಿಸಲು ರೈತರ ಅಹೋರಾತ್ರಿ ಧರಣಿ

Date:

Advertisements

ಕೃಷ್ಣ ಬಲದಂಡೆ ಹಾಗೂ ರಾಂಪುರ ಏತ ನೀರಾವರಿ ನಾಲೆಗಳಿಗೆ ಏಪ್ರಿಲ್ 20ರವರೆಗೆ ನೀರು ಹರಿಸಲು ಒತ್ತಾಯಿಸಿ ಲಿಂಗಸುಗೂರು ತಾಲೂಕಿನ‌ ಗುರುಗುಂಟಾ ಗ್ರಾಮದಿಂದ ತಾಲೂಕು ಸಹಾಯಕ ಆಯುಕ್ತ ಕಚೇರಿವರೆಗೆ ಟ್ರ್ಯಾಕ್ಟರ್ ಮೂಲಕ ಮೆರವಣಿಗೆ ನಡೆಸಿ ಅಹೋರಾತ್ರಿ ಮನವಿ ಸಲ್ಲಿಸಲಾಯಿತು.

ಗುರುಗುಂಟ ಗ್ರಾಮದ ರಾಷ್ಟ್ರೀಯ ಹೆದ್ದಾರಿ 150ರ ಬದಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕ ಧರಣಿ ನಡೆಸುತ್ತಿದ್ದು, 4ನೇ ದಿನಕ್ಕೆ ಕಾಲಿಟ್ಟಿದೆ.

ಶನಿವಾರ, ಭಾನುವಾರ ರಾತ್ರಿ ಪೂರ್ತಿ ಭಜನೆ ಮಾಡುವ ಮೂಲಕ ಅಹೋರಾತ್ರಿ ಧರಣಿ ನಡೆಸಿದ್ದಾರೆ. ರೊಚ್ಚಿಗೆದ್ದ ರೈತರು ಭಾನುವಾರ ರಾತ್ರಿ ಹೊಸ ದರ್ಬಾರ್‌ನಿಂದ ಸಂಸ್ಥಾನಿಕ ರಾಜಸೋಮನಾಥನಾಯಕ ನೇತೃತ್ವದಲ್ಲಿ ಹೋಬಳಿಯ ನೂರಾರು ರೈತರು ಹಚ್ಚಿದ ಮೇಣದ ಬತ್ತಿಯನ್ನು ಕೈಯಲ್ಲಿಡಿದು ಶಾಂತಿ ದ್ಯೋತಕವಾದ ಜ್ಯೋತಿ ಮೆರವಣಿಗೆ ನಡೆಸಿದರು.

ಅಹೋರಾತ್ರಿಯ ಧರಣಿ 4ನೇ ದಿನಕ್ಕೆ ಪಾದಾರ್ಪಿಸಿದರೂ ಯಾವೊಬ್ಬ ಜನಪ್ರತಿನಿಧಿಗಳೂ ಸ್ಥಳಕ್ಕೆ ಬಾರದಿರುವುದನ್ನು ಖಂಡಿಸಿದ ರೈತರು, “ಶಾಂತಿಯ ಪ್ರತೀಕವಾಗಿ ಜ್ಯೋತಿಯ ಮೆರವಣಿಗೆ ನಡೆಸಿದ್ದೇವೆ. ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಂಡು ಬೇಡಿಕೆಯನ್ನು ಪಡೆದೇ ಪಡೆಯುತ್ತೇವೆ. ಪ್ರಾಣ ಬಿಟ್ಟೆವು ಧರಣಿ ಹಿಂಪಡೆಯಲಾರೆವು ಎಂದು ಏರುದನಿಯಲ್ಲಿ ಕೂಗುತ್ತಾ ಮೆರವಣಿಗೆ ಸಾಗಿದರು.

ಇದನ್ನೂ ಓದಿ: ರಾಯಚೂರು | ಜೋಳ ಖರೀದಿ ಕೇಂದ್ರ ಆರಂಭಕ್ಕೆ ಒತ್ತಾಯ

ಈ ಮೆರವಣಿಗೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಅಧ್ಯಕ್ಷ ಶಿವಪುತ್ರಗೌಡ, ತಾಲೂಕ ಅಧ್ಯಕ್ಷ ಪ್ರಸಾದರೆಡ್ಡಿ, ಪ್ರಧಾನ ಕಾರ್ಯದರ್ಶಿ ಬಸವರಾಜ ಅಂಗಡಿ, ರೈತ ಮುಖಂಡರಾದ ಚೆನ್ನಯ್ಯಸ್ವಾಮಿ, ಸೈಯದ್ ಖುಸುರು, ವಿಜಯಕುಮಾರ ನಾಯಕ, ಶ್ರೀಧರ್ ಪಟ್ಟಣಶೆಟ್ಟಿ, ತಿಪ್ಪಣ್ಣ ಹವಲ್ದಾರ್, ಹನುಮಂತ ಹುಲಗಪ್ಪದೊಡ್ಡಿ, ಮಹಾಂತೇಶ ಬಿಜ್ಜಲ್, ಭಾಷಸಾಬ್, ತಿರುಮಲ ಸುಬೇದಾರ್, ರಾಮಯ್ಯ, ಗಣೇಶ ರತ್ನಗಿರಿ, ಪವನ್ ಕುಲಕರ್ಣಿ, ಗುರು ಇಲ್ಲೂರು, ಶಿವಲಿಂಗ ಸೇರಿದಂತೆ ಅನೇಕರು ಇದ್ದರು.

Advertisements
ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | SBUDA ದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ : ಸುಂದರೇಶ್

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ...

ಮಾಲೂರು | ‘ಕೆಲಸ ನೀಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’!

ಮಾಲೂರಿನ ವರ್ಗಾ ಕಂಪನಿ ಮುಚ್ಚುವುದನ್ನು ವಿರೋಧಿಸಿ ಇಂದು ಮಾಲೂರಿನಲ್ಲಿ ಕಾರ್ಮಿಕರು ಬೃಹತ್...

ಗಣೇಶ ಚತುರ್ಥಿಗೆ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಬೆಂಗಳೂರು-ಮಂಗಳೂರು...

ಬೆಳ್ತಂಗಡಿ | ಸೌಜನ್ಯ ಪ್ರಕರಣ ಮರು ತನಿಖೆಗೆ ವಿವಿಧ ಸಂಘಟನೆಗಳ ಮುಖಂಡರ ಒತ್ತಾಯ

ಬೆಂಗಳೂರಿನಿಂದ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ತ್ರಿಮೂರ್ತಿ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ...

Download Eedina App Android / iOS

X