13 ಅತ್ಯಾಚಾರ ಸೇರಿ 39 ಪ್ರಕರಣಗಳು; ಬಿಜೆಪಿ ಮುಖಂಡನಿಗೆ 40 ವರ್ಷ ಜೈಲು

Date:

Advertisements

ಪ್ರಧಾನಿ ಮೋದಿ ಅವರ ಕಟ್ಟಾ ಅನುಯಾಯಿ, ವಿದೇಶದಲ್ಲಿ ಬಿಜೆಪಿ ಬೆಂಬಲಿಗರನ್ನೊಳಗೊಂಡ ‘ಓವರ್ಸೀಸ್ ಫ್ರೆಂಡ್ಸ್ ಆಫ್ ಬಿಜೆಪಿ’ ಸಂಘಟನೆಯ ಸಂಸ್ಥಾಪಕ ಬಾಲೇಶ್ ಧನಖರ್ ಎಂಬಾತನಿಗೆ ಅತ್ಯಾಚಾರ ಮತ್ತು ಇತರ ಪ್ರಕರಣಗಳಲ್ಲಿ 40 ವ‍ರ್ಷ ಜೈಲು ಶಿಕ್ಷೆ ವಿಧಿಸಿ ಆಸ್ಟ್ರೇಲಿಯಾ ನ್ಯಾಯಾಲಯ ಆದೇಶಿಸಿದೆ.

ಆಸ್ಟ್ರೇಲಿಯಾದಲ್ಲಿ ‘ಓವರ್ಸೀಸ್ ಫ್ರೆಂಡ್ಸ್ ಆಫ್ ಬಿಜೆಪಿ’ ಸಂಘಟನೆ ಸ್ಥಾಪಕರಲ್ಲಿ ಒಬ್ಬನಾದ ಧನಖರ್ ಐವರು ಐದು ಕೊರಿಯನ್ ಮಹಿಳೆಯರ ಮೇಲೆ ಅತ್ಯಾಚಾರ ಸೇರಿದಂತೆ 13 ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ. ಅಲ್ಲದೆ, ಅತ್ಯಾಚಾರದ ಉದ್ದೇಶದಿಂದ ಮಾದಕ ವಸ್ತು ಸೇವಿಸುವಂತೆ ಬಲವಂತದ 6 ಪ್ರಕರಣಗಳು, ಸಮ್ಮತಿಯಿಲ್ಲದೆ ಖಾಸಗಿ ವಿಡಿಯೋ ರೆಕಾರ್ಡ್‌ ಮಾಡಿದ್ದ 17 ಪ್ರಕರಣಗಳು, ಅಸಭ್ಯ ವರ್ತನೆ ಮತ್ತು ಹಲ್ಲೆ ಸಂಬಂಧಿತ 3 ಪ್ರಕರಣಗಳು ಸೇರಿದಂತೆ ಒಟ್ಟು ಬರೋಬ್ಬರಿ 39 ಪ್ರಕರಣಗಳಲ್ಲಿ ಧನಖರ್ ಆರೋಪಿಯಾಗಿದ್ದಾರೆ.

39 ಪ್ರಕರಣಗಳಲ್ಲಿಯೂ ಆತ ಅಪರಾಧಿ ಎಂದು ಘೋಷಿಸಿರುವ ಸಿಡ್ನಿ ನ್ಯಾಯಾಲಯ, ಅಪರಾಧಿ ಧನಕರ್‌ಗೆ 40 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

Advertisements

ಪ್ರಕರಣಗಳ ವಿಚಾರಣೆ ನಡೆಸಿದ್ದ ಸಿಡ್ನಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಮೈಕೆಲ್ ಕಿಂಗ್, “ಅಪರಾಧಿಯ ನಡವಳಿಕೆಯು ‘ಪೂರ್ವಯೋಜಿತ’ ಕೃತ್ಯವಾಗಿದೆ. ಆತ ತನ್ನ ಲೈಂಗಿಕ ಬಯಕೆಗಳನ್ನು ಪೂರೈಸಿಕೊಳ್ಳಲು ಮಹಿಳೆಯರೊಂದಿಗೆ ನಿರ್ದಯತೆಯಿಂದ ವರ್ತಿಸಿದ್ದಾನೆ. ದುರ್ಬಲ ಮಹಿಳೆಯರ ಮೇಲೆ ಎಸಗಿರುವ ಪರಭಕ್ಷಕ ಭೀಕರ ಕ್ರಮವಾಗಿದೆ” ಎಂದು ಹೇಳಿದ್ದಾರೆ.

ಸಿಡ್ನಿಯಲ್ಲಿ ವಾಸವಾಗಿದ್ದ ಧನಖರ್ ಕೊರಿಯನ್‌ನಿಂದ ಇಂಗ್ಲಿಷ್ ಭಾಷೆ ಅನುವಾದಕರ ಕೆಲಸಕ್ಕೆ ಉದ್ಯೋಗ ಜಾಹೀರಾತು ನೀಡಿದ್ದರು. ಜಾಹೀರಾತಿಗೆ ಪ್ರತಿಕ್ರಿಯಿಸಿದ್ದ ಕೊರಿಯನ್ ಮಹಿಳೆಯರನ್ನು ತಾನು ವಾಸವಾಗಿದ್ದ ಅಪಾರ್ಟ್‌ಮೆಂಟ್‌ ಬಳಿಯ ಹಿಲ್ಟನ್ ಹೋಟೆಲ್‌ ಬಾರ್‌ನಲ್ಲಿ ಭೇಟಿಯಾಗಿದ್ದರು. ಈ ವೇಳೆ, ಮಹಿಳೆಯರಿಗೆ ಮಾದಕ ದ್ರವ್ಯ ಕೊಟ್ಟು, ಅವರ ಮೇಲೆ ಅತ್ಯಾಚಾರ ಎಸಗಿದ್ದನು ಎಂದು ಆರೋಪಿಸಲಾಗಿತ್ತು. ಪ್ರಕರಣದ ತನಿಖೆ ವೇಳೆ ಆತನ ಅಪಾರ್ಟ್‌ಮೆಂಟ್‌ನಲ್ಲಿ ಹಲವಾರು ವಿಡಿಯೋ ಪುರಾವೆಗಳು ದೊರೆತಿದ್ದವು ಎಂದು ವರದಿಯಾಗಿದೆ.

ಅಪರಾಧಿ ಧನಖರ್ ಬಿಜೆಪಿಯ ಕಟ್ಟಾ ಬೆಂಬಲಿಗನಾಗಿದ್ದಾನೆ. ಆತ ಭಾರತದ ಪ್ರಧಾನಿ ಮೋದಿ ಅವರಿಗೆ ನಿಕಟವರ್ತಿಯಾಗಿದ್ದಾನೆ ಎಂದು ಆಸ್ಟ್ರೇಲಿಯಾದ ಮಾಧ್ಯಮಗಳು ಗಮನಿಸಿವೆ. 2018ರಲ್ಲಿ ಆತ ಬಂಧನದವರೆಗೂ ಆಸ್ಟ್ರೇಲಿಯಾದಲ್ಲಿ ಬಿಜೆಪಿಯ ಪ್ರಚಾರಕನಾಗಿದ್ದ. ಬಿಜೆಪಿ ಪರವಾಗಿ ಆಸ್ಟ್ರೇಲಿಯಾದಲ್ಲಿ ‘ಓವರ್ಸೀಸ್ ಫ್ರೆಂಡ್ಸ್ ಆಫ್ ಬಿಜೆಪಿ’ ಸಂಘಟನೆಯನ್ನು ಸ್ಥಾಪಿಸಿದ್ದ. 2014ರಲ್ಲಿ ಸಿಡ್ನಿಗೆ ಮೋದಿ ಭೇಟಿ ನೀಡಿದ್ದಾಗ, ಅವರ ಸ್ವಾಗತ ಸಮಾರಂಭವನ್ನು ಆಯೋಜಿಸುವಲ್ಲಿ ‘ಓವರ್ಸೀಸ್ ಫ್ರೆಂಡ್ಸ್ ಆಫ್ ಬಿಜೆಪಿ’ ಪ್ರಮುಖ ಪಾತ್ರ ವಹಿಸಿತ್ತು. ಅದರಲ್ಲಿ, ಧನಖರ್ ಮೊದಲಿಗನಾಗಿದ್ದ. ಅಲ್ಲದೆ, ಆಸ್ಟ್ರೇಲಿಯಾದ ಹಿಂದು ಮಂಡಳಿಯ ವಕ್ತಾರನಾಗಿಯೂ ಕಾರ್ಯನಿರ್ವಹಿಸಿದ್ದ ಎಂದು 9ನ್ಯೂಸ್ ವರದಿ ಮಾಡಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

Download Eedina App Android / iOS

X