ವಿಜಯಪುರ | ರಂಜಾನ್‌, ಹೋಳಿ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡಿ: ಪೊಲೀಸ್ ಸಿಪಿಐ ಮಹಮ್ಮದ್‌

Date:

Advertisements

ಈ ಬಾರಿ ರಂಜಾನ್, ಹೋಳಿ ಹಬ್ಬದ ವೇಳೆ ಎಲ್ಲರೂ ಕಾನೂನು ವ್ಯವಸ್ಥೆಗೆ ಧಕ್ಕೆ ಬಾರದಂತೆ ನಡೆದುಕೊಂಡು ಶಾಂತಿ ಹಾಗೂ ಸೌಹಾರ್ದತೆಯಿಂದ ಈ ಹಬ್ಬಗಳನ್ನು ಆಚರಿಸಿ ಎಂದು ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕು ಪೊಲೀಸ್ ಸಿಪಿಐ ಮಹಮ್ಮದ್ ಪಸಿಯುದ್ದಿನ್ ಮನವಿ ಮಾಡಿದರು.

ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ರಂಜಾನ್, ಹೋಳಿ ಹಬ್ಬ ಹಾಗೂ ಶರಣ ಜಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ಮಾ. 13ರಂದು ಕಾಮದಹನ ಇದ್ದು ಅಂದು ಪ್ರತಿಯೊಬ್ಬರೂ ತಮ್ಮಲ್ಲಿರುವ ಕೆಟ್ಟ ಯೋಚನೆ ಸುಟ್ಟು ಹಾಕಲು ಪ್ರಯತ್ನಿಸಬೇಕು. ಪ್ರತಿಯೊಂದು ಹಬ್ಬದ ಹಿಂದೆ ಶ್ರೇಷ್ಠ ಉದ್ದೇಶವಿದೆ ಅದನ್ನು ತಿಳಿದು ಹಬ್ಬಗಳನ್ನು ಆಚರಿಸಬೇಕು. ಮಾರ್ಚ್ 14 ಮತ್ತು 15ರಂದು ಬಣ್ಣದಾಟ ಇರುವುದರಿಂದ ಯಾರಿಗೂ ತೊಂದರೆ ಆಗದಂತೆ ನೋಡಿಕೊಂಡು ನಿಗದಿತ ಅವಧಿಯಲ್ಲಿ ಬಣ್ಣದಾಟವನ್ನು ಮುಗಿಸಲು ಪ್ರಯತ್ನಿಸಿ. ಹಬ್ಬಗಳು ಶಾಂತರೀತಿಯಿಂದ ನಡೆಯಲು ಇಲಾಖೆ ನಿಮ್ಮೊಂದಿಗೆ ಸಹಕರಿಸಲಿದೆ ನಿಮ್ಮ ಸಹಕಾರವೂ ಅತ್ಯಗತ್ಯ” ಎಂದರು.

ಕೆಪಿಸಿಸಿ ಸದಸ್ಯ ಬಿಎಸ್ ಪಾಟೀಲ ಯಾಳಗಿ ಮಾತನಾಡಿ, “ಈ ಹಿಂದೆ ಪಟ್ಟಣವು ಕೆಲವು ಅಹಿತಕರ ಘಟನೆಗಳನ್ನು ಕಂಡಿದೆ. ಅದರಿಂದ ನಮ್ಮೆಲ್ಲರಿಗೂ ಸಾಕಷ್ಟು ತೊಂದರೆ ಆಗಿದೆ. ಈಗ ಪಟ್ಟಣದಲ್ಲಿ ಸಾಮರಸ್ಯದ ವಾತಾವರಣವಿದೆ, ಅದನ್ನು ಕೆಡದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ” ಎಂದರು.

Advertisements

ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ ಸಿಂಗಾಜರೆ ಮಾತನಾಡಿ, “ಯುವಕರು ಹಿರಿಯರ ಮಾರ್ಗದರ್ಶನದಲ್ಲಿ ಹಬ್ಬಗಳ ಆಚರಣೆಯನ್ನು ಮಾಡಿದರೆ ಯಾವುದೇ ರೀತಿಯ ಸಮಸ್ಯೆಗಳು ಉದ್ಭವವಾಗುವುದಿಲ್ಲ. ಎಲ್ಲಾ ಜಾತಿ ಧರ್ಮದ ಕಿರಿಯರು ಹಿರಿಯರು ಸೇರಿ ಆಚರಣೆ ಮಾಡೋಣ” ಎಂದು ತಿಳಿಸಿದರು.

ಇದನ್ನೂ ಓದಿ: ವಿಜಯಪುರ | ಸಾಮಾಜಿಕ ಪಿಡುಗುಗಳಿಗೆ ಶಿಕ್ಷಣವೇ ಪರಿಹಾರ

ಈ ವೇಳೆ ಜೈ ಭೀಮ್ ಮುತ್ತಗಿ, ಗೋಪಾಲ ಕಟ್ಟಿಮನಿ, ಸಿದ್ದನಗೌಡ ಪಾಟೀಲ ನಾವದಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಹಬೂಬ್ ಚೋರ್ ಗಸ್ತಿ, ಮದರಕಲ್ಲ, ಕಾಶಿನಾಥ ಮುರಾಳ, ಎಂ ಎಸ್ ಸರ ಶೆಟ್ಟಿ, ಡಿ ವಿ ಪಾಟೀಲ, ಅಣ್ಣಪ್ಪ ಜಗ ತಾಪ, ಶರಣಗೌಡ ಪಾಟೀಲ, ಫಯಾಜ್ ಉತ್ನಳ, ಆಸೀಫ ಕೆಂಭಾವಿ, ಅಬೂಬಕರ್ ಲಾಹೋರಿ, ತಾಳಿಕೋಟಿ ಪಿಎಸ್ಐ ರಾಮನಗೌಡ ಸಂಕನಾಳ, ಆರ್ ಎಸ್ ಭಂಗಿ ಇಲಾಖೆಯ ಸಿಬ್ಬಂದಿಗಳು ಇದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X